ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?

ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ‌. ಶಿರಸಿ ನಗರ ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಎಸ್ಪಿ ಮೇಡಂ ರವರ ಟೀಂ ಮಾಡಿರೋ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

error: Content is protected !!