ಮುಂಡಗೋಡ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾಲೂಕಿನ ಮಳಗಿಯ ಪಂಚವಟಿಯಲ್ಲಿ ಮೇ. 20 ರಂದು ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣ ಬೇಧಿಸಿ, ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇದ್ರೊಂದಿಗೆ ನಿಟ್ಟುಸಿರು ಬಿಟ್ಟಿದ್ದಾರೆ ಖಾಕಿಗಳು.
ಅಂದಹಾಗೆ, ಮೇ 20 ರ ರಾತ್ರಿ ಮಳಗಿ ಸಮೀಪದ ಪಂಚವಟಿಯಲ್ಲಿರುವ ಹಜರತ ಅಲಿ ಯಲಿವಾಳ್ ಎಂಬುವವರ ಅಂಗಡಿಯ ಮೇಲ್ಚಾವಣಿ ತೆಗೆದು ಒಳ ನುಗ್ಗಿದ್ದ ಖದೀಮರು, ಅಂಗಡಿಯಲ್ಲಿದ್ದ ರೇಶನ್, ಪ್ರಿಡ್ಜ್, ಸೇರಿ ಅಂದಾಜು 63,465 ರೂಪಾಯಿ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ರು. ಹೀಗಾಗಿ ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹೀಗಾಗಿ, ಉತ್ತರ ಕನ್ನಡ ಎಸ್ಪಿ ಡಾ.ಸುಮನ್ ಪೆನ್ನೇಕರ್ ಮಾರ್ಗದರ್ಶನದಲ್ಲಿ ಮುಂಡಗೋಡಿನ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.