ಬಸಾಪುರದಲ್ಲಿ ರಾಣಾ ಪ್ರತಾಪ ಸಿಂಹರ ಜಯಂತಿ ಉತ್ಸವ, ಭವ್ಯ ಮೆರವಣಿಗೆ..!

ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರಾತ್ರಿಯಿಡಿ ರಾಣಾ ಪ್ರತಾಪ್ ಸಿಂಗ್ ರವರ ಜಯಂತಿ ಭವ್ಯ ಮೆರವಣಿಗೆ ನಡೆಯಿತು.

ಸಮಾಜ ಬಾಂದವರು ರಾಣಾ ಪ್ರತಾಪ ಸಿಂಹರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಇಡೀ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ನಡೆಸಿದ್ರು. ಭಕ್ತಿಗೀತೆಗಳನ್ನು ಹಾಕಿ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ ಯುವಕರು, ರಾಣಾ ಪ್ರತಾಪ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಇನ್ನು ನಿನ್ನೆ ಸಂಜೆಯಿಂದಲೇ ಬಸಾಪುರ ಗ್ರಾಮದಲ್ಲಿ ” ರಾಣಾ” ಜಯಂತಿ ಆಚರಣೆ ಸಂಭ್ರಮ ಜೋರಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

error: Content is protected !!