ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಜ್ ಆಗಿದೆ. ಒಟ್ಟೂ 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ ಮೊದಲ ಪಟ್ಟಿಯಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಗಿದ್ರೆ ಯಾವ ಯಾವ ಕ್ಷೇತ್ರಕ್ಕೆ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ ಇಲ್ಲಿದೆ ನೋಡಿ ಫುಲ್ ಲಿಸ್ಟ್..!
Top Stories
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ಶ್ರವಣಬೆಳಗೊಳ ಜೈನ ಮಠದ ಸ್ಚಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ವಿಧಿವಶ..!
ಐತಿಹಾಸಿಕ ಶ್ರವಣಬೆಳಗೊಳದ ಜೈನ ಮಠದ ಭಟ್ಟಾರಕರು ವಿಧಿವಶರಾಗಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು ಹಿನ್ನಲೆಯಲ್ಲಿ, ಬೆಳ್ಳೂರಿನ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭಟ್ಟಾರಕ ಶ್ರೀಗಳು ವಿಧಿವಶರಾಗಿದ್ದಾರೆ. ಮೇ 3, 1949ರಲ್ಲಿ ಶ್ರೀಗಳು ಜನಿಸಿದ್ದರು. 1970ರಲ್ಲಿ ಶ್ರವಣಬೆಳಗೊಳ ಜೈನ ಮಠದ ಪೀಠಾಧಿಪತಿಯಾಗಿ ನೇಮಕವಾಗಿದ್ದರು. ಕರ್ಮ ಯೋಗಿ ಬಿರುದಾಂಕಿತ ಸ್ವಾಮೀಜಿಯವರು, ಬೆಂಗಳೂರು ಯೂನಿವರ್ಸಿಟಿ ಯಿಂದ ತತ್ವಶಾಸ್ತ್ರ ಪದವಿ, ಮೈಸೂರು ಯೂನಿವರ್ಸಿಟಿ ಯಿಂದ ಇತಿಹಾಸ ಪದವಿ ಪಡೆದಿದ್ದರು. ಬರೋಬ್ಬರಿ 7 ಮಹಾ ಮಸ್ತಕಾಭಿಷೇಕಗಳನ್ನು ನೆರವೇರಿಸಿದ್ದ ಶ್ರೀಗಳು ಜನಾನುರಾಗಿಯಾಗಿದ್ದರು. ಶ್ರೀಗಳ ನಿಧನದಿಂದ ಹಲವರು ಕಂಬನಿ ಮಿಡಿದಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ..? ನಿಜವಾಗತ್ತಾ ಮಣ್ಣಿನ ಗೊಂಬೆ ಭವಿಷ್ಯ..?
ಧಾರವಾಡ; ಎಲೆಕ್ಷನ್ ಹೊತ್ತಲ್ಲಿ ಇದೇನಪ್ಪ ಇಂತಹ ಭವಿಷ್ಯ ಅಂತೀರಾ..? ನಂಬೊಕೆ ಆಗದೇ ಇದ್ರೂ ಈ ಭವಿಷ್ಯ ಮಾತ್ರ ಸುಳ್ಳಾಗೇ ಇಲ್ವಂತೆ, ಹೀಗಾಗಿ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ ಮಣ್ಣಿನ ಗೊಂಬೆಗಳ ಭವಿಷ್ಯ ಅಚ್ಚರಿ ಮೂಡಿಸುತ್ತಿದೆ. ಬಹುಶಃ ಪ್ರಸಕ್ತ ಯುಗಾದಿಗೆ ನುಡಿದಿರೋ ಭವಿಷ್ಯ ಬರುವ ಚುನಾವಣೆಯ ಮುನ್ಸೂಚನೆಯಾ..? ನಾಯಕತ್ವ ಬದಲಾವಣೆ ಅಂತೆ..! ರಾಜ್ಯ ರಾಜಕಾರಣದಲ್ಲಿ ನಾಯಕತ್ವದ ಬದಲಾವಣೆಯಾಗಲಿದೆ ಎಂಬ ಭವಿಷ್ಯವನ್ನು ಮಣ್ಣಿನ ಬೊಂಬೆ ತೋರಿಸಿಕೊಟ್ಟಿದೆ. ಈ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳು ಇಂತಹದ್ದೊಂದು ಭವಿಷ್ಯ ನುಡಿದಿವೆ. ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ಹನುಮನಕೊಪ್ಪ ಗ್ರಾಮಸ್ಥರು ಪ್ರತಿವರ್ಷ ಯುಗಾದಿಯಂದು ಒಂದು ಸಂಪ್ರದಾಯ ನಡೆಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ತಮ್ಮ ಗ್ರಾಮದ ಹಳ್ಳದ ದಂಡೆಯ ಮೇಲೆ ಒಂದು ಸಮತಟ್ಟಾದ ಕಲಾಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕಾರಣದ ಬೊಂಬೆಗಳನ್ನು ಮಾಡಿಡುತ್ತಾರೆ. ಒಳಗಡೆ ರೈತರು, ಸೈನಿಕರು, ಕಾಳುಗಳನ್ನು ಇಡುತ್ತಾರೆ. ಅಮವಾಸ್ಯೆ ದಿನ ಈ ಆಕೃತಿ ಮಾಡಿಟ್ಟು, ಮಾರನೆ ದಿನ ಅದನ್ನು ನೋಡಲು ಹೋಗುತ್ತಾರೆ. ಈ ಆಕೃತಿಯ...
ರಾಣೆಬೆನ್ನೂರಿನ ಪಿಎಸ್ಐ ಮತ್ತವನ ಚಾಲಕ ಲೋಕಾ ಬಲೆಗೆ, ಅದೇಷ್ಟು ಲಂಚ ಪಡೀತಿದ್ರು ಗೊತ್ತಾ..?
ರಾಣೆಬೆನ್ನೂರಿನ ಶಹರ ಠಾಣೆಯ ಪಿಎಸ್ಐ ಹಾಗೂ ಆತನ ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಾಮತ್ತಾಗಿ 40 ಸಾವಿರ ಲಂಚ ಸ್ವೀಕರಿಸೋವಾಗ ತಗಲಾಕ್ಕೊಂಡಿದ್ದಾರೆ. ರಾಣೆಬೆನ್ನೂರು ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಈತನ ವಾಹನದ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದ ಖತರ್ನಾಕ ಲಂಚ ಬಾಕ ಆರೋಪಿಗಳು. ಇವರೀರ್ವರೂ ಫಿರೋಜ್ ಎಂಬುವವರ ಮನೆ ಬಾಡಿಗೆ ವಸೂಲಿ ಮಾಡಿಸಿಕೊಡುವ ವಿಚಾರಕ್ಕೆ ಬರೋಬ್ಬರಿ 50ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಅದರಲ್ಲಿ 40 ಸಾವಿರ ರೂ. ಹಣ ಪಡೆಯುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರು ಬಲೆಗೆ ಹಾಕಿದ್ದಾರೆ. ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ.
ರಣದಲ್ಲಿ ಗೆದ್ದು ಬಂದ ಮುಂಡಗೋಡಿನ ಸ್ಪರ್ಧಾ ಹೋರಿಗಳು, ಭೀಷ್ಮ, ವೀರಭದ್ರನಿಗೆ ಸಂಭ್ರಮದ ಸ್ವಾಗತ..!
ಮುಂಡಗೋಡಿನ ಹೋರಿ ಅಭಿಮಾನಿಗಳ ಪಾಲಿಗೆ ಸಂಭ್ರಮವೋ ಸಂಭ್ರಮ..! ಯಾಕಂದ್ರೆ ಮುಂಡಗೋಡಿನ ಆ ಎರಡು ಸ್ಪರ್ಧಾ ಹೋರಿಗಳು ಇಡೀ ತಾಲೂಕಿನ ಕೀರ್ತಿ ಪತಾಕೆ ಹಾರಿಸಿವೆ. ಅದ್ರಲ್ಲೂ, ಇಡಿ ಇಡಿಯಾಗಿ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಎದುರು ಛಲದಂಕಮಲ್ಲರಂತೆ ಅಬ್ಬರಿಸಿ ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡಿವೆ.. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಟ್ಟಣದ “ಮುಂಡಗೋಡ ಭೀಷ್ಮ” ಹಾಗೂ “ಮುಂಡಗೋಡ ವೀರಭದ್ರ” ಎಂಬುವ ಹೋರಿಗಳು ಜಯಭೇರಿ ಸಾಧಿಸಿವೆ. ಹೀಗಾಗಿ, ಎರಡೂ ಹೋರಿಗಳಿಗೆ ಎರಡು ಬೈಕ್ ಗಳನ್ನು ಬಹುಮಾನವಾಗಿ ನೀಡಲಾಗಿದೆ. ಹೀಗಾಗಿ, ರಾತ್ರಿಯಿಡಿ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡು ಬಂದಿರೋ “ಮುಂಡಗೋಡ ಭೀಷ್ಮ” ಹಾಗೂ “ಮುಂಡಗೋಡ ವೀರಭದ್ರ” ಎಂಬುವ ಎರಡೂ ಹೋರಿಗಳನ್ನು ಹಾಗೂ ಬಹುಮಾನವಾಗಿ ಸಿಕ್ಕಿರೋ ಎರಡೂ ಬೈಕ್ ಗಳನ್ನು ಅಭಿಮಾನಿಗಳು ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದ್ರು. ಕುಣಿದು ಕುಪ್ಪಳಿಸಿದ್ರು.
ಮುಂಡಗೋಡ ಬಿಜೆಪಿಗೆ ಬೂಸ್ಟ್ ನೀಡತ್ತಾ ಸೋಮವಾರದ ಬಿಜೆಪಿ ಸಮಾವೇಶ..? ಅಷ್ಟಕ್ಕೂ ಭಾಗವಹಿಸ್ತಿರೋ ರಾಜ್ಯ ನಾಯಕರು ಯಾರ್ಯಾರು..?
ಮುಂಡಗೋಡಿನಲ್ಲಿ ಮಾರ್ಚ 20, ರ ಸೋಮವಾರ ಬಿಜೆಪಿಯ ಬೃಹತ್ ಸಮಾವೇಶ ನಡೆಯುತ್ತಿದೆ. ಈ ಮೂಲಕ ಕ್ಷೇತ್ರದಲ್ಲಿ ಕಮಲಪಡೆಗೆ ಬೂಸ್ಟ್ ನೀಡುವ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಏನಿಲ್ಲವೆಂದರೂ 10 ರಿಂದ 15 ಸಾವಿರ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತಾ ಈಗಾಗಲೇ ಸಾರಿ ಸಾರಿ ಹೇಳಿದೆ ಇಲ್ಲಿನ ಕಮಲ ಪಡೆ. ಖದರ್ರೇ ಬದಲಾಗತ್ತಾ..? ಅಷ್ಟಕ್ಕೂ, ಸದ್ಯದ ಮಟ್ಟಿಗೆ ಯಲ್ಲಾಪುರ ಕ್ಷೇತ್ರದಲ್ಲಿ, ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ಈ ಚುನಾವಣೆ ದೃಷ್ಟಿ ಇಟ್ಟುಕೊಂಡು ಇದುವರೆಗೂ ಹೇಳಿಕೊಳ್ಳುವಂತ ಯಾವುದೇ ಸಮಾವೇಶಗಳು ಆಗಿಲ್ಲ. ಬರೀ ಪಟ್ಟಾ ವಿತರಣೆ, ಗುದ್ದಲಿ ಪೂಜೆಗಳು ಅದು ಇದೂ ಅಂತಾ ಒಂದಿಷ್ಟು ಕಾರ್ಯಕ್ರಮ ನಡೆದು ಹೋಗಿವೆ. ಆದ್ರೆ, ಸೋಮವಾರ ನಡೆಯೋ ಸಮಾವೇಶ ಬಿಜೆಪಿ ಪಾಲಿಗೆ ಬೂಸ್ಟ್ ನೀಡತ್ತಾ..? ಆಡಳಿತ ವಿರೋಧಿ ಅಲೆಯ ನಡುವೆಯೂ, ಈ ಸಮಾವೇಶ ಬಿಜೆಪಿಯ ಖದರ್ರು ಬದಲಿಸತ್ತಾ..? ಕಾದು ನೋಡಬೇಕಿದೆ. ಕಾರ್ಯಕರ್ತರ ಶಕ್ತಿ..! ಅಂದಹಾಗೆ, ಯಾವಾಗ ಬಿಜೆಪಿ ಸಮಾವೇಶ ನಡೆಸಲು ಉದ್ದೇಶಿಸಲಾಯ್ತೋ ಆ ಕ್ಷಣದಿಂದಲೇ ಮುಂಡಗೋಡಿನ ಬಿಜೆಪಿ ಯುವ ಕಾರ್ಯಕರ್ತರು...
ಬ್ರಷ್ಟಾಚಾರ ಆರೋಪ, ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕಾಂಗ್ರೆಸ್ಸಿಗರ ಪ್ರತಿಭಟನೆ..!
ಶಿಗ್ಗಾವಿ: ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬಿಜೆಪಿ ಸರ್ಕಾರದ ಬ್ರಷ್ಟಾಚಾರದ ಕುರಿತು ಆಕ್ರೋಶ ವ್ಯಕ್ತ ಪಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ, ಶಿಗ್ಗಾವಿ ಸವಣೂರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಿಎಂ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಲಾಯಿತು. ಪಟ್ಟಣದ ಚನ್ನಮ್ನಾ ಸರ್ಕಲ್ ನಿಂದ ವಿವಿದ ಬಿದಿಗಳಲ್ಲಿ ಸಂಚರಿಸಿ ಪ್ರತಿಭಟನೆಯಲ್ಲಿ, ಮುಖ್ಯಮಂತ್ರಿಗಳ ಸ್ವಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ, ಮತ್ತು 40% ಸರ್ಕಾರ ಅಂತಾ ಆರೋಪಿಸಿ ಸಿಎಂ ತವರು ನೆಲದಲ್ಲೇ ಸಿಎಂ ವಿರುದ್ಧ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ, ಮಾತು ಮಾತಲ್ಲೆ ಭ್ರಷ್ಟಾಚಾರ ನಡೆಯುತ್ತಿದೆ ಅಂತಾ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರು ಹಾಗೂ ಯುವ ಕಾಂಗ್ರೆಸ್ ತಾಲೂಕಾ ಅದ್ಯಕ್ಷರು ಸರ್ವ ಸದಸ್ಯರು ಆಕ್ರೋಶ ಹೊರಹಾಕಿದ್ರು. ಬ್ತಷ್ಟಾಚಾರದ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿ ನಾಮಫಲಕ ಪ್ರದರ್ಶನ...
ಮುಂಡಗೋಡಿನಲ್ಲಿ ಮಾ.20 ರ ಸೋಮವಾರ ಬಿಜೆಪಿ ಸುನಾಮಿ ಏಳಲಿದೆ- ಗುಡ್ಡಪ್ಪ ಕಾತೂರ್
ಮುಂಡಗೋಡ: ಮಾರ್ಚ 20 ರ ಸೋಮವಾರ ಮುಂಡಗೋಡಿನಲ್ಲಿ ಬಿಜೆಪಿ ಸುನಾಮಿ ಏಳಲಿದೆ, ಆ ಸುನಾಮಿಯಲ್ಲಿ ಎದುರಾಳಿಗಳು ಕೊಚ್ಚಿ ಹೋಗಲಿದ್ದಾರೆ ಅಂತಾ ಬಿಜೆಪಿ ಮುಖಂಡ ಗುಡ್ಡಪ್ಪ ಕಾತೂರ ವಿಶ್ವಾಸ ವ್ಯಕ್ತ ಪಡಿಸಿದ್ರು. ಅವ್ರು ಕರಗಿನಕೊಪ್ಪದ ಬಳಿ ಬಿಜೆಪಿ ಸಮಾವೇಶದ ಮೈದಾನದಲ್ಲಿ ಸಮಾವೇಶದ ಪೂರ್ವ ತಯಾರಿ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ರು. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಮಾಡಿರೋ ಅಭಿವೃದ್ಧಿ ಪರ ಕಾರ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇದೇ ಬರುವ ಸೋಮವಾರ ಮಾರ್ಚ 20 ರಂದು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೂ ಮುನ್ನ ಸುಮಾರು 5 ಸಾವಿರ ಬೈಕ್ ಗಳ ಮೂಲಕ ಪಟ್ಟಣದ ಅಯ್ಯಪ್ಪ ಸೇವಸ್ಥಾನದಿಂದ ಬೃಹತ್ ಬೈಕ್ ರ್ಯಾಲಿ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ರವರನ್ನು ಮೆರವಣಿಗೆ ಮಾಡಿ ಸಮಾವೇಶದ ವೇದಿಕೆಗೆ ಕರೆತರಲಾಗುತ್ತದೆ ಅಂತಾ ಗುಡ್ಡಪ್ಪ ಕಾತೂರ್ ಮಾಹಿತಿ ನೀಡಿದ್ರು. 10 ಎಕರೆ ಪ್ರದೇಶದಲ್ಲಿ.. ಅಂದಹಾಗೆ, ಮುಂಡಗೋಡ ಪಟ್ಟಣದ ಶಿರಸಿ ರಸ್ತೆಯ ಲೊಯೊಲಾ ಶಿಜ್ಷಣ ಸಂಸ್ಥೆಯ ಸಮೀಪದ...
ಗಾಜೀಪುರ ಬಳಿ ಭೀಕರ ಅಪಘಾತ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಗಡಿಭಾಗ ಹಾಗೂ ಹಾನಗಲ್ ತಾಲೂಕಿನ ಗಾಜೀಪುರ ಬಳಿ ಭೀಕರ ಅಪಘಾತವಾಗಿದೆ. ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಚಿಗಳ್ಳಿಯ ಯುವಕನೋರ್ವ ಸ್ಥಳದಲ್ಲೇ ಮೃತಟ್ಟಿದ್ದಾನೆ. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಯಲ್ಲಪ್ಪ ಕಡೆಮನಿ(40) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಇವತ್ತು ತನ್ನ ಅಳಿಯನೊಂದಿಗೆ ಬೈಕ್ ಏರಿ ಹಾನಗಲ್ ಗೆ ಹೋಗಿದ್ದ. ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದಾಗ ಹಾನಗಲ್ ತಾಲೂಕಿನ ಗಾಜೀಪುರ ಬಳಿ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಡಿಕ್ಕಿಯ ರಭಸಕ್ಕೆ ಯಲ್ಲಪ್ಪ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಬೈಕ್ ಹಿಂಬದಿ ಕುಳಿತಿದ್ದ ಅಳಿಯನಿಗೆ ಗಂಭೀರ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಹಾನಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನು, ಅಪಘಾತದಲ್ಲಿ ಡಿಕ್ಕಿ ಹೊಡೆದ ಮತ್ತೊಂದು ಬೈಕ್ ಸವಾರರು ಕೂಸನೂರು ಗ್ರಾಮದವರಾಗಿದ್ದು ಅವ್ರ ಸ್ಥಿತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಹಾನಗಲ್ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ...
ಬಿಜೆಪಿ ಮಹಿಳಾ ಸಮಾವೇಶಕ್ಕೆ ಬಂದಿದ್ದ ಕೇಂದ್ರ ಸಚಿವೆಯ ಕಾರು ಅಪಘಾತ..!
ವಿಜಯಪುರ: ಕೇಂದ್ರ ಸಚಿವೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಬಳಿ, ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಅಪಘಾತವಾಗಿದೆ. ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರ್ ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಕೇಂದ್ರ ಸಚಿವರಿಗೆ ಹಾಗೂ ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಗೊಂಡ ಕೇಂದ್ರ ಸಚಿವೆ ಸಾದ್ವಿ ನಿರಂಜನಾ ಜ್ಯೋತಿ ಹಾಗೂ ಕಾರ್ ಚಾಲಕನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.. ವಿಜಯಪುರ ನಗರದಲ್ಲಿ ಇಂದು ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವೆ, ಕಾರ್ಯಕ್ರಮಗಳ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬೆಳೆಸುತ್ತಿದ್ದರು. ಇನ್ನು ಅಪಘಾತದ ಪರಿಣಾಮ ಎನ್ಎಚ್ 50 ಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ....