ಮುಂಡಗೋಡ ಬಿಜೆಪಿಗೆ ಬೂಸ್ಟ್ ನೀಡತ್ತಾ ಸೋಮವಾರದ ಬಿಜೆಪಿ ಸಮಾವೇಶ..? ಅಷ್ಟಕ್ಕೂ ಭಾಗವಹಿಸ್ತಿರೋ ರಾಜ್ಯ ನಾಯಕರು ಯಾರ್ಯಾರು..?


ಮುಂಡಗೋಡಿನಲ್ಲಿ ಮಾರ್ಚ 20, ರ ಸೋಮವಾರ ಬಿಜೆಪಿಯ ಬೃಹತ್ ಸಮಾವೇಶ ನಡೆಯುತ್ತಿದೆ. ಈ ಮೂಲಕ ಕ್ಷೇತ್ರದಲ್ಲಿ ಕಮಲಪಡೆಗೆ ಬೂಸ್ಟ್ ನೀಡುವ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಏನಿಲ್ಲವೆಂದರೂ 10 ರಿಂದ 15 ಸಾವಿರ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತಾ ಈಗಾಗಲೇ ಸಾರಿ ಸಾರಿ ಹೇಳಿದೆ ಇಲ್ಲಿನ ಕಮಲ ಪಡೆ.

ಖದರ್ರೇ ಬದಲಾಗತ್ತಾ..?
ಅಷ್ಟಕ್ಕೂ, ಸದ್ಯದ ಮಟ್ಟಿಗೆ ಯಲ್ಲಾಪುರ ಕ್ಷೇತ್ರದಲ್ಲಿ, ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ಈ ಚುನಾವಣೆ ದೃಷ್ಟಿ ಇಟ್ಟುಕೊಂಡು ಇದುವರೆಗೂ ಹೇಳಿಕೊಳ್ಳುವಂತ ಯಾವುದೇ ಸಮಾವೇಶಗಳು ಆಗಿಲ್ಲ. ಬರೀ ಪಟ್ಟಾ ವಿತರಣೆ, ಗುದ್ದಲಿ ಪೂಜೆಗಳು ಅದು ಇದೂ ಅಂತಾ ಒಂದಿಷ್ಟು ಕಾರ್ಯಕ್ರಮ ನಡೆದು ಹೋಗಿವೆ. ಆದ್ರೆ, ಸೋಮವಾರ ನಡೆಯೋ ಸಮಾವೇಶ ಬಿಜೆಪಿ ಪಾಲಿಗೆ ಬೂಸ್ಟ್ ನೀಡತ್ತಾ..? ಆಡಳಿತ ವಿರೋಧಿ ಅಲೆಯ ನಡುವೆಯೂ, ಈ ಸಮಾವೇಶ ಬಿಜೆಪಿಯ ಖದರ್ರು ಬದಲಿಸತ್ತಾ..? ಕಾದು ನೋಡಬೇಕಿದೆ.

ಕಾರ್ಯಕರ್ತರ ಶಕ್ತಿ..!
ಅಂದಹಾಗೆ, ಯಾವಾಗ ಬಿಜೆಪಿ ಸಮಾವೇಶ ನಡೆಸಲು ಉದ್ದೇಶಿಸಲಾಯ್ತೋ ಆ ಕ್ಷಣದಿಂದಲೇ ಮುಂಡಗೋಡಿನ ಬಿಜೆಪಿ ಯುವ ಕಾರ್ಯಕರ್ತರು ಫಿಲ್ಡಿಗೆ ಇಳಿದಿದ್ದರು‌. ಇಲ್ಲಿ ಕಣದಲ್ಲಿ ಅದ್ಯಾರೇ ಇರಲಿ ಬಿಜೆಪಿಯನ್ನೇ ಉಸಿರಾಗಿಸಿಕೊಂಡಿರೋ ಹಲವರು ಹಗಲೂ ರಾತ್ರಿ ಸಮಾವೇಶದ ಯಶಸ್ಸಿಗಾಗಿ ದುಡಿಯುತ್ತಿದ್ದಾರೆ. ಪರಿಣಾಮ, ಹಳ್ಳಿ ಹಳ್ಳಿಗಳಿಗೂ ತೆರಳಿ ಸಮಾವೇಶದ ಪ್ರಚಾರ ಮಾಡಿದ್ದಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಗುರಿ ಹೊಂದಿದ್ದಾರೆ‌.

ಬೃಹತ್ ಬೈಕ್ ರ್ಯಾಲಿ..!
ಅಸಲು, ಸೋಮವಾರ ಮುಂಡಗೋಡಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಿಂದ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ಬೈಕ್ ರ್ಯಾಲಿಯಲ್ಲಿ ಏನಿಲ್ಲವೆಂದರೂ 5 ಸಾವಿರ ಬೈಕ್ ಗಳು ಭಾಗವಹಿಸುತ್ತಿವೆ ಅಂತಾ ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಆ ಬೈಕ್ ರ್ಯಾಲಿ ಮೂಲಕ ಸಚಿವ ಶಿವರಾಮ್ ಹೆಬ್ಬಾರ್ ರನ್ನು ಮೆರವಣಿಗೆಯಲ್ಲಿ ವೇದಿಕೆವರೆಗೂ ಕರೆ ತರುವ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಹೀಗಾಗಿ, ನಾಳೆಯ ಸೋಮವಾರ ಸಂತೆಯ ದಿನ ಇಡೀ‌ ಮುಂಡಗೋಡ ಪಟ್ಟಣದಲ್ಲಿ ಬಿಜೆಪಿಯ ಗುಂಗು ಇರಲಿದೆ.

ರಾಜ್ಯ ನಾಯಕರು ಬರ್ತಾರಾ..?
ಹಾಗೆ ನೋಡಿದ್ರೆ, ಸೋಮವಾರ ನಡೆಯೊ ಬಿಜೆಪಿ ಬೃಹತ್ ಸಮಾವೇಶದಲ್ಲಿ ರಾಜ್ಯ ಬಿಜೆಪಿಯ ಯಾವ ಯಾವ ನಾಯಕರುಗಳು ಭಾಗಿಯಾಗ್ತಾರೆ ಅನ್ನೋದು ಇನ್ನೂ ಮಾಹಿತಿ ಬಂದಿಲ್ಲ. ಬಹುಶಃ ಈ ಸಮಾವೇಶದ ಕೇಂದ್ರ ಬಿಂದು ಸಚಿವ ಶಿವರಾಮ್ ಹೆಬ್ಬಾರ್ ಆಗ್ತಾರೆ ಅನ್ನೋ ಮಾತುಗಳಿವೆ. ಒಟ್ನಲ್ಲಿ, ಸೋಮವಾರ ಮಾರ್ಚ 20 ರ ದಿನ ಮುಂಡಗೋಡ ಪಟ್ಟಣ ಬಿಜೆಪಿಯ ಸಮಾವೇಶದ ಹಿನ್ನೆಲೆ ಕೇಸರೀಮಯವಾಗಿದೆ. ಪಟ್ಟಣದ ತುಂಬೇಲ್ಲ ಪ್ಲೆಕ್ಸು, ಬ್ಯಾನರ್ರು ಫಳ ಫಳಿಸುತ್ತಿವೆ. ಇದೇಲ್ಲದರ ನಡುವೆ ಸೋಮವಾರದ ಸಮಾವೇಶ‌ ಬಿಜೆಪಿ ಪಾಲಿಗೆ ಟಾನಿಕ್ ನೀಡತ್ತಾ..? ಕಾಲವೇ ಉತ್ತರಿಸಬೇಕಿದೆ.

error: Content is protected !!