ರಣದಲ್ಲಿ ಗೆದ್ದು ಬಂದ ಮುಂಡಗೋಡಿನ ಸ್ಪರ್ಧಾ ಹೋರಿಗಳು, ಭೀಷ್ಮ, ವೀರಭದ್ರನಿಗೆ ಸಂಭ್ರಮದ ಸ್ವಾಗತ..!

ಮುಂಡಗೋಡಿನ ಹೋರಿ ಅಭಿಮಾನಿಗಳ‌ ಪಾಲಿಗೆ ಸಂಭ್ರಮವೋ ಸಂಭ್ರಮ..! ಯಾಕಂದ್ರೆ ಮುಂಡಗೋಡಿನ ಆ ಎರಡು ಸ್ಪರ್ಧಾ ಹೋರಿಗಳು ಇಡೀ ತಾಲೂಕಿನ ಕೀರ್ತಿ ಪತಾಕೆ ಹಾರಿಸಿವೆ. ಅದ್ರಲ್ಲೂ, ಇಡಿ ಇಡಿಯಾಗಿ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಎದುರು ಛಲದಂಕಮಲ್ಲರಂತೆ ಅಬ್ಬರಿಸಿ ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡಿವೆ..

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಂದಾಪುರದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಟ್ಟಣದ “ಮುಂಡಗೋಡ ಭೀಷ್ಮ” ಹಾಗೂ “ಮುಂಡಗೋಡ ವೀರಭದ್ರ” ಎಂಬುವ ಹೋರಿಗಳು ಜಯಭೇರಿ ಸಾಧಿಸಿವೆ. ಹೀಗಾಗಿ, ಎರಡೂ ಹೋರಿಗಳಿಗೆ ಎರಡು ಬೈಕ್ ಗಳನ್ನು ಬಹುಮಾನವಾಗಿ ನೀಡಲಾಗಿದೆ.

ಹೀಗಾಗಿ, ರಾತ್ರಿಯಿಡಿ ಸ್ಪರ್ಧೆಯಲ್ಲಿ ಬಹುಮಾನ ಬಾಚಿಕೊಂಡು ಬಂದಿರೋ “ಮುಂಡಗೋಡ ಭೀಷ್ಮ” ಹಾಗೂ “ಮುಂಡಗೋಡ ವೀರಭದ್ರ” ಎಂಬುವ ಎರಡೂ ಹೋರಿಗಳನ್ನು ಹಾಗೂ ಬಹುಮಾನವಾಗಿ ಸಿಕ್ಕಿರೋ ಎರಡೂ ಬೈಕ್ ಗಳನ್ನು ಅಭಿಮಾನಿಗಳು ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದ್ರು. ಕುಣಿದು ಕುಪ್ಪಳಿಸಿದ್ರು.

error: Content is protected !!