ರಾಣೆಬೆನ್ನೂರಿನ ಶಹರ ಠಾಣೆಯ ಪಿಎಸ್ಐ ಹಾಗೂ ಆತನ ವಾಹನ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಾಮತ್ತಾಗಿ 40 ಸಾವಿರ ಲಂಚ ಸ್ವೀಕರಿಸೋವಾಗ ತಗಲಾಕ್ಕೊಂಡಿದ್ದಾರೆ.
ರಾಣೆಬೆನ್ನೂರು ಶಹರ ಠಾಣೆ ಪಿಎಸ್ಐ ಸುನೀಲ ತೇಲಿ ಮತ್ತು ಈತನ ವಾಹನದ ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದ ಖತರ್ನಾಕ ಲಂಚ ಬಾಕ ಆರೋಪಿಗಳು.
ಇವರೀರ್ವರೂ ಫಿರೋಜ್ ಎಂಬುವವರ ಮನೆ ಬಾಡಿಗೆ ವಸೂಲಿ ಮಾಡಿಸಿಕೊಡುವ ವಿಚಾರಕ್ಕೆ ಬರೋಬ್ಬರಿ 50ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಅದರಲ್ಲಿ 40 ಸಾವಿರ ರೂ. ಹಣ ಪಡೆಯುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರು ಬಲೆಗೆ ಹಾಕಿದ್ದಾರೆ. ಹಾವೇರಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ.