ಶ್ರವಣಬೆಳಗೊಳ ಜೈನ ಮಠದ ಸ್ಚಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರು ವಿಧಿವಶ..!

ಐತಿಹಾಸಿಕ ಶ್ರವಣಬೆಳಗೊಳದ ಜೈನ ಮಠದ ಭಟ್ಟಾರಕರು ವಿಧಿವಶರಾಗಿದ್ದಾರೆ. ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಗುರುವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇಂದು ಬೆಳಿಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರು ಹಿನ್ನಲೆಯಲ್ಲಿ, ಬೆಳ್ಳೂರಿನ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಸ್ವಾಮೀಜಿಯವರನ್ನು ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭಟ್ಟಾರಕ ಶ್ರೀಗಳು ವಿಧಿವಶರಾಗಿದ್ದಾರೆ.

ಮೇ 3, 1949ರಲ್ಲಿ ಶ್ರೀಗಳು ಜನಿಸಿದ್ದರು.
1970ರಲ್ಲಿ ಶ್ರವಣಬೆಳಗೊಳ ಜೈನ ಮಠದ ಪೀಠಾಧಿಪತಿಯಾಗಿ ನೇಮಕವಾಗಿದ್ದರು. ಕರ್ಮ ಯೋಗಿ ಬಿರುದಾಂಕಿತ ಸ್ವಾಮೀಜಿಯವರು, ಬೆಂಗಳೂರು ಯೂನಿವರ್ಸಿಟಿ ಯಿಂದ ತತ್ವಶಾಸ್ತ್ರ ಪದವಿ, ಮೈಸೂರು ಯೂನಿವರ್ಸಿಟಿ ಯಿಂದ ಇತಿಹಾಸ ಪದವಿ ಪಡೆದಿದ್ದರು. ಬರೋಬ್ಬರಿ 7 ಮಹಾ ಮಸ್ತಕಾಭಿಷೇಕಗಳನ್ನು ನೆರವೇರಿಸಿದ್ದ ಶ್ರೀಗಳು ಜನಾನುರಾಗಿಯಾಗಿದ್ದರು. ಶ್ರೀಗಳ ನಿಧನದಿಂದ ಹಲವರು ಕಂಬನಿ ಮಿಡಿದಿದ್ದಾರೆ.

error: Content is protected !!