ನ್ಯಾಸರ್ಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಅಂದಾ ದರ್ಬಾರ್..? ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಯಾಕೆ ಅಂತಾ ಕೇಳಿದ್ರೆ ಹೀಗೆ ಮಾಡೋದಾ..?

ನ್ಯಾಸರ್ಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಅಂದಾ ದರ್ಬಾರ್..? ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಯಾಕೆ ಅಂತಾ ಕೇಳಿದ್ರೆ ಹೀಗೆ ಮಾಡೋದಾ..?

  ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿರೋ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಬೇಕಾಬಿಟ್ಟಿ ವರ್ತನೆಗೆ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ತಮಗಿಷ್ಟ ಬಂದಂತೆ ಹಣ ವಸೂಲಿ ಮಾಡುತ್ತಿರೋ ಕೆಲವು ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ದುರಂತ ಅಂದ್ರೆ, ಇಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲು ಹೋದ ಸಮಾಜಿಕ ಕಾರ್ಯಕರ್ತನಿಗೇ ಅವಾಚ್ಯವಾಗಿ ನಿಂದಿಸಿದ್ದಾರಂತೆ ಇಲ್ಲಿನ ಶಿಕ್ಷಕರು..! ಆಗಿದ್ದೇನು..? ಅಂದಹಾಗೆ, ನ್ಯಾಸರ್ಗಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಅಂತಾ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿಯವರನ್ನು ಕರೆದೊಯ್ದು ಹೀಗ್ಯಾಕೆ ಮಾಡ್ತಿದ್ದಿರಿ ಅಂತಾ ಕೇಳಿದ್ರೆ, ಅಲ್ಲಿರೋ ಶಿಕ್ಷಕನೊಬ್ಬ ಬಾಯಿಗೆ ಬಂದಂತೆ‌ ನಿಂದಿಸಿದ್ದಾನೆ ಅಂತಾ ಆರೋಪಿಸಲಾಗಿದೆ. ಹೀಗಾಗಿ, ಆಕ್ರೋಸಗೊಂಡ ಸಾಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿ, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಅರೆನಗ್ನ ಪ್ರತಿಭಟನೆ.‌! ಇನ್ನು ಶಿಕ್ಷಕರ ಬೇಜವಾಬ್ದಾರಿ ಖಂಡಿಸಿರೋ ಅಯ್ಯಪ್ಪ ಭಜಂತ್ರಿ, ಅವಾಚ್ಯವಾಗಿ ನಿಂದಿಸಿರೋ ಕಾರಣಕ್ಕೆ ಆಕ್ರೋಶಗೊಂಡು, ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ತಕ್ಷಣವೇ...

ದಲಿತರಿಗೆ ಸ್ಮಶಾನ ಭೂಮಿ ನೀಡಲು ಆಗ್ರಹ, ಹಿರೇಹರಕುಣಿ ಗ್ರಾಮದ ದಲಿತರಿಂದ ಪ್ರತಿಭಟನೆ..!

ದಲಿತರಿಗೆ ಸ್ಮಶಾನ ಭೂಮಿ ನೀಡಲು ಆಗ್ರಹ, ಹಿರೇಹರಕುಣಿ ಗ್ರಾಮದ ದಲಿತರಿಂದ ಪ್ರತಿಭಟನೆ..!

 ಧಾರವಾಡ: ಕುಂದಗೋಳ ತಾಲೂಕಿನ ಹಿರೇಹರಕುಣಿ ದಲಿತರಿಗೆ ಸ್ಮಶಾನ ಭೂಮಿ ನೀಡಲು ಅಗ್ರಹಿಸಿ ಹಿರೇಹರಕುಣಿ ಗ್ರಾಮದ ದಲಿತ ಕುಟುಂಬಳಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಈ ಹಿಂದಿನ ರುದ್ರಭೂಮಿಯಲ್ಲಿ ದಲಿತರಿಗೆ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡುತ್ತಿಲ್ಲ. ಬೇರೆ ಸಮುದಾಯದ ಮುಖಂಡರು ದಲಿತರ ಅಂತ್ಯಕ್ರಿಯೆ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದಾಗಿ ದಲಿತ ಕುಟುಂಬಗಳು ಸ್ಮಶಾನ ಭೂಮಿ ಇಲ್ಲದೆ ಪರದಾಡುವ ಸ್ಥಿತಿ ಇದೆ. ಈ ಕೂಡಲೇ ರಾಜ್ಯ ಸರ್ಕಾರ ಡಿಸಿಯವರೆಗೆ ಸೂಕ್ತ ನಿರ್ದೇಶನ ನೀಡಿ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು ಅಂತಾ ಆಗ್ರಹಿಸಿರೋ ದಲಿತ ಸಮುದಾಯದವರು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದಾರೆ. ಸ್ಮಶಾನ ಭೂಮಿ ಸಿಗದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಲಾರಿ- ಕಾರು ನಡುವೆ ಭೀಕರ ಅಪಘಾತ, ಎರಡು ಮಕ್ಕಳೂ ಸೇರಿ 6 ಜನ ಸ್ಥಳದಲ್ಲೇ ಸಾವು..!

ಲಾರಿ- ಕಾರು ನಡುವೆ ಭೀಕರ ಅಪಘಾತ, ಎರಡು ಮಕ್ಕಳೂ ಸೇರಿ 6 ಜನ ಸ್ಥಳದಲ್ಲೇ ಸಾವು..!

ಕೊಪ್ಪಳದ ಕುಷ್ಟಗಿ ಬಳಿ ಭೀಕರ ಅಪಘಾತಾಗಿದೆ. ಪರಿಣಾಮ ಸ್ಥಳದಲ್ಲೇ 6 ಜನ ಸಾವು ಕಂಡಿದ್ದಾರೆ. ಕುಷ್ಟಗಿಯ ಕಲಕೇರಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಇಂಡಿಕಾ ಲಾರಿ ಮಧ್ಯೆ ಅಪಘಾತವಾಗಿದೆ. ಇಂಡಿಕಾ ಕಾರಿನಲ್ಲಿದ್ದ ಇಬ್ಬರು ಮಕ್ಕಳು, ಓರ್ವ ಮಹಿಳೆ ಸೇರಿ 6 ಜನ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಮೃತರಿಗೆ ತಲಾ 2 ಲಕ್ಷ ಪರಿಹಾರ..! ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಸಂಭವಿಸಿದ ಕಾರು-ಲಾರಿ ಅಪಘಾತದಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ಪಾಳಾದ ರಾಮಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು..!

ಪಾಳಾದ ರಾಮಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿ, ಚಿಗಳ್ಳಿಯ ಓರ್ವ ಯುವಕ ಸ್ಥಳದಲ್ಲೇ ಸಾವು..!

ಮುಂಡಗೋಡ: ತಾಲೂಕಿನ ರಾಮಾಪುರ ಕ್ರಾಸ್ ಬಳಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ದಾರುಣ ಸಾವು ಕಂಡಿದ್ದಾನೆ. ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರಾಕ್ಟರ್ ಟ್ರೈಲಿ ಪಲ್ಟಿಯಾಗಿ ದುರಂತ ಸಂಭವಿಸಿದ್ದು ಭೀಕರವಾಗಿದೆ. ಚಿಗಳ್ಳಿ ಗ್ರಾಮದ ಪ್ರವೀಣ್ ಬಸವರಾಜ್ ಬೆನ್ನೂರ್ (28) ಎಂಬುವವನೇ ಅಪಘಾತದಲ್ಲಿ ದಾರುಣ ಸಾವು ಕಂಡಿದ್ದಾನೆ. ಈತ ಇವತ್ತು ಹಾನಗಲ್ಲಿನಿಂದ ಟ್ರ್ಯಾಕ್ಟರ್ ನಲ್ಲಿ ಕಲ್ಲು ತುಂಬಿಕೊಂಡು ಚಿಗಳ್ಳಿ ಗ್ರಾಮಕ್ಕೆ ಅಣ್ಣ ಸೇರಿ ಮೂವರೊಂದಿಗೆ ಬರುತ್ತಿದ್ದ.. ಈ ವೇಳೆ ಪಾಳಾ ಬಳಿಯ ರಾಮಾಪುರ ಕ್ರಾಸ್ ಹತ್ತಿರ ಟ್ರ್ಯಾಕ್ಟರ್ ನ ಟ್ರೈಲಿ ಪಲ್ಟಿಯಾಗಿದೆ. ಹೀಗಾಗಿ, ಟ್ರೈಲಿಯಲ್ಲೇ ಕುಳಿತಿದ್ದ ಪ್ರವೀಣ್ ಮೇಲೆ ಕಲ್ಲುಗಳು ಬಿದ್ದಿವೆ ಎನ್ನಲಾಗಿದ್ದು, ಹೀಗಾಗಿ ಪ್ರವೀಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಆಲದಕಟ್ಟಿ ಕಬ್ಬಿನ ಗದ್ದೆಯಲ್ಲಿ ನೆಲ್ಲಿಹರವಿ ಮುದುಕಿಯ ಬರ್ಬರ ಹತ್ಯೆ, ಚಿನ್ನಾಭರಣದ ಆಸೆಗೆ ಕೊಲೆ ಮಾಡಿದ್ರಾ..?

ಆಲದಕಟ್ಟಿ ಕಬ್ಬಿನ ಗದ್ದೆಯಲ್ಲಿ ನೆಲ್ಲಿಹರವಿ ಮುದುಕಿಯ ಬರ್ಬರ ಹತ್ಯೆ, ಚಿನ್ನಾಭರಣದ ಆಸೆಗೆ ಕೊಲೆ ಮಾಡಿದ್ರಾ..?

ಕಲಘಟಗಿ: ಬಂಗಾರದ ಆಸೆಗಾಗಿ ವೃದ್ಧ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ ಆಗಂತುಕರು. ಕಲಘಟಗಿ ತಾಲೂಕಿನ ಆಲದಕಟ್ಟಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ, ನೆಲ್ಲಿಹರವಿ ಗ್ರಾಮದ ಮುದುಕಿಯನ್ನು ಕೊಂದು ಹಾಕಿದ್ದಾರೆ. ಕಲಘಟಗಿ ತಾಲ್ಲೂಕಿನ ನೆಲ್ಲಿಹರವಿ ಗ್ರಾಮದ 82 ವರ್ಷದ ತಿಪ್ಪವ್ವ ತಂಬೂರ್ ಎಂಬ ವೃದ್ದೆಯನ್ನ ಆಲದಕಟ್ಟಿ ಗ್ರಾಮದ ದ್ಯಾಮಣ್ಣ ಎಂಬುವವರಿಗೆ ಸೇರಿದ ಕಬ್ಬು ಬೆಳೆದ ಜಮೀನಿನಲ್ಲಿ ಭೀಕರವಾಗಿ ಕೊಲೆ ಮಾಡಿ, ವೃದ್ದೆಯ ಕೊರಳಲಿದ್ದ ಚಿನ್ನಾಭರಣ ದೋಚಿಕೊಂಡು ಕೊಲೆಗಾರರರು ಪರಾರಿ ಆಗಿದ್ದಾರೆ. ನಿನ್ನೆ ತಡ ರಾತ್ರಿ ಆಲದಕಟ್ಟಿ ಗ್ರಾಮದ ಗ್ರಾಮಸ್ಥರೊಬ್ಬರು ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿದ್ದ ತಿಪ್ಪವ್ವಳ ಮೃತ ದೇಹವನ್ನ ನೋಡಿ ಕಲಘಟಗಿ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳಕ್ಕೆ ಶ್ವಾನದಳವನ್ನ ತರಿಸಿ ಕೊಲೆಗಾರರ ಪತ್ತೆಗೆ ಕೂಡ ಮುಂದಾಗಿದ್ದಾರೆ. ಸದ್ಯ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ಕೊಲೆಗಾರರ ಪತ್ತೆಗೆ...

ನೂತನ ಸಚಿವರಾದ ಸಂತೋಷ ಲಾಡ್, ಮಧು ಬಂಗಾರಪ್ಪನವರಿಗೆ ಭೇಟಿ‌ ಮಾಡಿ ಶುಭ ಕೋರಿದ ವಿಎಸ್ಪಿ..!

ನೂತನ ಸಚಿವರಾದ ಸಂತೋಷ ಲಾಡ್, ಮಧು ಬಂಗಾರಪ್ಪನವರಿಗೆ ಭೇಟಿ‌ ಮಾಡಿ ಶುಭ ಕೋರಿದ ವಿಎಸ್ಪಿ..!

ಬೆಂಗಳೂರು: ನೂತನವಾಗಿ ಸಚಿವ ಸಂಪುಟ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಲಘಟಗಿ ಶಾಸಕ ಸಂತೋಷ ಲಾಡ್ ಹಾಗೂ ಸೊರಬ ಶಾಸಕ ಮಧು ಬಂಗಾರಪ್ಪ ನವರಿಗೆ ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿ.ಎಸ್.ಪಾಟೀಲ್ ಭೇಟಿ‌ ಮಾಡಿ ಶುಭಕೋರಿದ್ರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಭೇಟಿ ಮಾಡಿ ಶುಭಾಶಯ ತಿಳಿಸಿದ ವಿ.ಎಸ್.ಪಾಟೀಲ್ ರಿಗೆ ಮುಖಂಡರಾದ ಕೃಷ್ಣ ಹಿರೇಹಳ್ಳಿ, ಎಚ್.ಎಂ.ನಾಯ್ಕ್ ಸೇರಿದಂತೆ ಹಲವರು ಸಾಥ್ ನೀಡಿದ್ರು.

ಮುಂಡಗೋಡ ಅಮ್ಮಾಜಿ ಕೆರೆ ಮೇಲೆ ಆಟೋಗೆ ಕಾರ್ ಡಿಕ್ಕಿ, ಹಲವರಿಗೆ ಗಾಯ..!

ಮುಂಡಗೋಡ ಅಮ್ಮಾಜಿ ಕೆರೆ ಮೇಲೆ ಆಟೋಗೆ ಕಾರ್ ಡಿಕ್ಕಿ, ಹಲವರಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಅಪಘಾತವಾಗಿದೆ.. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಕಾರ್ ಡಿಕ್ಕಿಯಾದ ಪರಿಣಾಮ ಹಲವರಿಗೆ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಯಲ್ಲಾಪುರ ರಸ್ತೆ ಕಡೆ ಹೊರಟಿದ್ದ ಆಟೋಗೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆ ಹೊರಟಿದ್ದ ಕಾರ್, ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ತಿಳಿದು ಬಂದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿ ಕೆಲವರಿಗೆ ಗಾಯವಾಗಿದೆ. ಆಟೋ ಚಾಲಕ ಇಂದೂರಿನ ಮೆಹೆಬೂಬ್ ಇಂಗಳಗಿ ಗಾಯವಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಕಾರು ಚಾಲಕ ಕಲಘಟಗಿಯ ನಾಗೇಶ್ ಹನ್ಮಂತಪ್ಪ ಲಮಾಣಿ ಎಂಬುವವರಿಗೂ ಸಣ್ಣಪುಟ್ಟ ಗಾಯವಾದ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಧಾರವಾಡ ಡಬ್ಬಲ್ ಮರ್ಡರ್, ನಾಲ್ವರು ಆರೋಪಿಗಳು ಮುಂಡಗೋಡಿನಲ್ಲಿ ವಶಕ್ಕೆ..!

ಧಾರವಾಡ ಡಬ್ಬಲ್ ಮರ್ಡರ್, ನಾಲ್ವರು ಆರೋಪಿಗಳು ಮುಂಡಗೋಡಿನಲ್ಲಿ ವಶಕ್ಕೆ..!

ಧಾರವಾಡದ ಜನತೆಯನ್ನು ಬೆಚ್ಚಿಬಿಳಿಸಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಮುಂಡಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದು ಧಾರವಾಡಕ್ಕೆ ಕರೆದೊಯ್ದಿರೋ ಮಾಹಿತಿ ಲಭ್ಯವಾಗಿದೆ. ಅರ್ಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರೋ ಧಾರವಾಡ ಪೊಲೀಸರು ಸದ್ಯ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ನಡಿಸ್ತಿದಾರೆ. ನಿನ್ನೆ ಅಂದ್ರೆ, ಮೇ.25ರ ತಡರಾತ್ರಿ ಧಾರವಾಡದ ಕಮಲಾಪುರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸಿನಲ್ಲಿ, ಕಮಲಾಪುರ ನಿವಾಸಿ ಮಹಮ್ಮದ ಕುಡಚಿ ಎಂಬುವವರನ್ನು ಆತನ ನಿವಾಸದಲ್ಲೇ ಹತ್ಯೆ ಮಾಡಲಾಗಿತ್ತು. ಆರೋಪಿಗಳೊಂದಿಗೆ ಇದ್ನಾ ಗಣೇಶ್..? ಇನ್ನು, ಹತ್ಯೆಯಾದ ಮಹಮ್ಮದ ಮನೆಯ ಸಮೀಪ ಸಾವನಪ್ಪಿದ ಮುಂಡಗೋಡಿನ ಗಣೇಶ ಕಮ್ಮಾರ್ ಆರೋಪಿಗಳೊಂದಿಗೆ ಬಂದಿದ್ದ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಹತ್ಯೆಯ ಸಂದರ್ಭದಲ್ಲಿ ಕಾಲಿಗೆ ಏಟು ಬಿದ್ದು ಮನೆಯ ಸಮೀಪವೇ ಮುಂಡಗೋಡಿನ ಗಣೇಶ್ ಸಾವನಪ್ಪಿದ್ದ ಅಂತಾ ಪೊಲೀಸರು ಅಂದಾಜಿಸಿದ್ದಾರೆ.. ದಾಂಡೇಲಿಗೆ..! ಇನ್ನು, ಭೀಕರವಾಗಿ ಹತ್ಯೆ ಮಾಡಿದ ನಂತರ ದಾಂಡೇಲಿಗೆ ತೆರಳಿ ತಲೆ ಮರಿಸಿಕೊಂಡಿದ್ದ ಆರೋಪಿಗಳು, ಪೊಲೀಸರ ಬರುತ್ತಿರುವ ಮಾಹಿತಿ...

ಧಾರವಾಡದಲ್ಲಿ ನಡೆದ ಭೀಕರ ಡಬಲ್‌ ಮರ್ಡರ್ ನಲ್ಲಿ ಮುಂಡಗೋಡ ಯುವಕನ  ಹತ್ಯೆ..! ವಿದೇಶಕ್ಕೆ ಹೋಗಬೇಕಾಗಿದ್ದ ಹುಡುಗ ಹೆಣವಾದ..!

ಧಾರವಾಡದಲ್ಲಿ ನಡೆದ ಭೀಕರ ಡಬಲ್‌ ಮರ್ಡರ್ ನಲ್ಲಿ ಮುಂಡಗೋಡ ಯುವಕನ ಹತ್ಯೆ..! ವಿದೇಶಕ್ಕೆ ಹೋಗಬೇಕಾಗಿದ್ದ ಹುಡುಗ ಹೆಣವಾದ..!

 ಧಾರವಾಡದಲ್ಲಿ ಡಬಲ್ ಮರ್ಡರ ಆಗಿದೆ. ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ‌. ಧಾರವಾಡದ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ಘಟನೆ ನಡೆದಿದ್ದು ಇದ್ರಲ್ಲಿ ಮುಂಡಗೋಡಿನ ಯುವಕನೂ ಬರ್ಬರವಾಗಿ ಕೊಲೆಯಾಗಿದ್ದಾನೆ. ಅಂದಹಾಗೆ, ಮುಂಡಗೋಡಿನ ದೇಶಪಾಂಡೆ ನಗರದ ಯುವಕ ಗಣೇಶ್ ಕಮ್ಮಾರ್ (ಸಾಳುಂಕೆ)(24) ಕೊಲೆಯಾಗಿದ್ದಾನೆ. ಮತ್ತೋರ್ವ ಮಹ್ಮದ್ ಖುಡಚಿ (45) ಭೀಕರವಾಗಿ ಹತ್ಯೆಯಾಗಿದ್ದಾನೆ. ಹೀಗಾಗಿ ಚುಮು ಚುಮು ಬೆಳಕಿನಲ್ಲಿ ನಡೆದಿರೋ ಭೀಕರ ಡಬಲ್ ಮರ್ಡರ್ ಗೆ ಧಾರವಾಡದ ಕಮಲಾಪುರ ಗ್ರಾಮ ಬೆಚ್ಚಿ ಬಿದ್ದಿದೆ. ರಿಯಲ್ ಎಸ್ಟೇಟ್ ಉದ್ದಮಿ..! ಅಂದಹಾಗೆ, ಕಮಲಾಪುರ ನಗರದ ನಿವಾಸಿ ಮಹಮ್ಮದ್ ಕುಡುಚಿ (45) ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಇನ್ನೂ ಹತ್ಯೆಯಾದ ಮಹಮ್ಮದ ಕುಡುಚಿ ಮನೆಯ ಸಮೀಪದಲ್ಲಿ ಮತ್ತೊರ್ವನ ಶವ ಪತ್ತೆಯಾಗಿದ್ದು, ಆತನೇ ಮುಂಡಗೋಡಿನ ದೇಶಪಾಂಡೆ ನಗರದ ನಿವಾಸಿ ಗಣೇಶ್ ಕಮ್ಮಾರ್ ಅಂತಾ ತಿಳಿದು ಬಂದಿದೆ.. ಘಟನೆ ಹೇಗಾಯ್ತು..? ನಿನ್ನೆ ತಡ ರಾತ್ರಿ ವೇಳೆ ಹತ್ಯೆಯಾದ ಮಹಮ್ಮದ್ ಕುಡುಚಿ ಆತ್ಮೀಯರೊಂದಿಗೆ ತಮ್ಮ ನಿವಾಸ ಬಳಿ ಮಾತನಾಡುತ್ತಾ...

ವಡಗಟ್ಟಾ ನಾಕಾ ಬಳಿ ಬೈಕ್ ಸ್ಕಿಡ್, ಸವಾರನ ಕಾಲು ಮುರಿತ, ತಾಲೂಕಾಸ್ಪತ್ರೆಗೆ ರವಾನೆ..!

ವಡಗಟ್ಟಾ ನಾಕಾ ಬಳಿ ಬೈಕ್ ಸ್ಕಿಡ್, ಸವಾರನ ಕಾಲು ಮುರಿತ, ತಾಲೂಕಾಸ್ಪತ್ರೆಗೆ ರವಾನೆ..!

ಮುಂಡಗೋಡ ತಾಲೂಕಿನ ಹುಬ್ಬಳ್ಳಿ ರಸ್ತೆಯ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರನಿಗೆ ಕಾಲು ಮುರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದಾನೆ. ಕುಷ್ಟಗಿಯಿಂದ ಮಣಿಪಾಲಕ್ಕೆ ಬೈಕ್ ಮುಖಾಂತರ ತೆರಳುತ್ತಿದ್ದ ನಿರಂಜನ್ ಅಮರೇಶ್ ಅಮ್ಮಿನಗಡ ಎನ್ನುವ ವ್ಯಕ್ತಿಯ ಬೈಕ್ ಅಪಘಾತವಾಗಿದ್ದು, ಸದ್ಯ 108 ಅಂಬ್ಯುಲೆನ್ಸ್ ಮೂಲಕ ಪ್ರಥಮ ಚಿಕಿತ್ಸೆ ನೀಡಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಕಂಡ ಸ್ಥಳೀಯರು ತಕ್ಷಣವೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಮಾನವೀಯತೆ ತೋರಿದ್ದಾರೆ. ಹೀಗಾಗಿ, ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!