ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಅಪಘಾತವಾಗಿದೆ.. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಕಾರ್ ಡಿಕ್ಕಿಯಾದ ಪರಿಣಾಮ ಹಲವರಿಗೆ ಗಾಯವಾಗಿದೆ.

ಮುಂಡಗೋಡ ಕಡೆಯಿಂದ ಯಲ್ಲಾಪುರ ರಸ್ತೆ ಕಡೆ ಹೊರಟಿದ್ದ ಆಟೋಗೆ, ಮುಂಡಗೋಡ ಕಡೆಯಿಂದ ಕಲಘಟಗಿ ಕಡೆ ಹೊರಟಿದ್ದ ಕಾರ್, ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ತಿಳಿದು ಬಂದಿದೆ. ಪರಿಣಾಮ ಆಟೋದಲ್ಲಿದ್ದ ಚಾಲಕ ಸೇರಿ ಕೆಲವರಿಗೆ ಗಾಯವಾಗಿದೆ.

ಆಟೋ ಚಾಲಕ ಇಂದೂರಿನ ಮೆಹೆಬೂಬ್ ಇಂಗಳಗಿ ಗಾಯವಾಗಿದ್ದು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು, ಕಾರು ಚಾಲಕ ಕಲಘಟಗಿಯ ನಾಗೇಶ್ ಹನ್ಮಂತಪ್ಪ ಲಮಾಣಿ ಎಂಬುವವರಿಗೂ ಸಣ್ಣಪುಟ್ಟ ಗಾಯವಾದ ಮಾಹಿತಿ ಲಭ್ಯವಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!