ಮುಂಡಗೋಡ ತಾಲೂಕಿನ ಚಿಗಳ್ಳಿಗೆ ಇಂದು ಶಾಸಕ ಶಿವರಾಮ್ ಹೆಬ್ಬಾರ್ ಭೇಟಿ ನೀಡಿದ್ರು. ಹಿರಿಯ ರಾಜಕೀಯ ಧುರೀಣ ಪಿ.ಎಸ್.ಸಂಗೂರ್ ಮಠ್ ಅವರ ನಿವಾಸಕ್ಕೆ ಭೇಟಿ ನೀಡಿದ ಹೆಬ್ಬಾರ್, ಸಂಗೂರಮಠರ ಆರೋಗ್ಯ ವಿಚಾರಿಸಿದ್ರು. ಈ ವೇಳೆ ಎಚ್.ಎಂ.ನಾಯ್ಕ್, ಸಿದ್ದಪ್ಪ ಹಡಪದ, ಫಣಿರಾಜ್ ಹದಳಗಿ, ಗುಡ್ಡಪ್ಪ ಕಾತೂರು ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ರು.
Top Stories
ಕುಂಭಮೇಳಕ್ಕೆ ಹೋಗಿದ್ದ ನಾಲ್ವರು ಕನ್ನಡಿಗರು ಕಾಲ್ತುಳಿತಕ್ಕೆ ಬಲಿ..! ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂಧನ..!
ಮುಂಡಗೋಡ ಶಿವಾಜಿ ಸರ್ಕಲ್, ಕೋರ್ಟ ಬಳಿಯೇ ನಡೀತು ಮತ್ತೊಂದು ಅಮಾನುಷ ಹಲ್ಲೆ..! ಅಷ್ಟಕ್ಕೂ, ಆ ವ್ಯಕ್ತಿಗೆ ಅಟ್ಟಾಡಿಸಿ, ಚಪ್ಪಲಿಯಿಂದ ಹೊಡೆದದ್ದು ಯಾರು..?
ಹುಬ್ಬಳ್ಳಿಯಲ್ಲಿ ಮತ್ತೆ ಹರಿದ ನೆತ್ತರು, 24 ವರ್ಷದ ಹುಡುಗನ ಬರ್ಬರ ಹತ್ಯೆ..! ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ ಪೊಲೀಸ್ರು..!
ಮುಂಡಗೋಡಿನ NMD ಜಮೀರ್ ಕಿಡ್ನ್ಯಾಪ್ ಕೇಸ್: ಮತ್ತಿಬ್ಬರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸ್ರು..!
ನ್ಯಾಸರ್ಗಿಯಲ್ಲಿ ಶ್ರೀಗಂಧದ ಮರ ಕಡಿದುಕೊಂಡು ಹೋದ್ರು ಕಳ್ಳರು, ಆಮೇಲೆ ಓಡೋಡಿ ಬಂದ್ರು “ಅ”ರಣ್ಯ ಅಧಿಕಾರಿಗಳು..!
ಯಲ್ಲಾಪುರ ಅರಬೈಲು ಘಟ್ಟದಲ್ಲಿ ಭೀಕರ ಅಪಘಾತ, 10 ಜನ ಸ್ಥಳದಲ್ಲೇ ಸಾವು..! 15 ಜನರಿಗೆ ಗಾಯ..!
ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬಂದಿದ್ದ ಅಪ್ರಾಪ್ತೆಯನ್ನ ಆ ಹುಡುಗ ಅತ್ಯಾಚಾರ ಮಾಡಿದ್ನಾ..? ಹಾಗಿದ್ರೆ ಕೇಸ್ ಏನಾಯ್ತು..?
ಟ್ಯಾಕ್ಸ್ ವಸೂಲಿಯಲ್ಲಿ ಮುಂಡಗೋಡ ತಾಲೂಕು ರಾಜ್ಯಕ್ಕೇ ಪ್ರಥಮ..! ತಾಪಂ ಗ್ರಾಪಂ ಅಧಿಕಾರಿ, ಸಿಬ್ಬಂದಿಗಳ ಸಾಧನೆ..!!
ಮುಂಡಗೋಡ ಬೆಂಡಿಗೇರಿ ಪೆಟ್ರೊಲ್ ಬಂಕ್ ಹತ್ತಿರ ಬೈಕ್ ಅಪಘಾತ, ವೃದ್ದನ ಕಾಲು ಕಟ್..!
ಮಳಗಿ-ಬನವಾಸಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ, ಓರ್ವ ಸ್ಥಳದಲ್ಲೇ ಓರ್ವ ಸಾವು, ಮತ್ತೋರ್ವ ಗಂಭೀರ..!
NMD ಕಿಡ್ನ್ಯಾಪ್ ಕೇಸ್, ಮತ್ತೆ ಐವರು ಆರೋಪಿಗಳು ಅಂದರ್, ಪೊಲೀಸರು ಆರೋಪಿಗಳಮದ್ಯೆ ಭಾರೀ ಕಾಳಗ..! ಗುಂಡೇಟು..!
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಉತ್ತರ ಕನ್ನಡದ ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ರಾಜ್ಯ ಡಕಾಯಿತರ ಬಂಧನ..!
ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ಟೀಂ ನಿಜಕ್ಕೂ ಅದ್ಭುತ ಕಾರ್ಯ ಮಾಡಿದೆ. ದರೋಡೆಗೆ ಸಂಚು ರೂಪಿಸಿ ಬಸ್ ಹತ್ತಿ ಹೊರಟಿದ್ದ, ಇಬ್ಬರು ಖತರ್ನಾಕ್ ಅಂತರ್ ರಾಜ್ಯ ದರೋಡೆಕೋರರನ್ನ ಹೆಡೆಮುರಿ ಕಟ್ಟಿದ್ದಾರೆ. ಫಿಲ್ಡಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಕ್ರಿಮಿಗಳು ಮಾತ್ರ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಅನಮೋಡ್ ಚೆಕ್ ಪೊಸ್ಟ್..! ಅಂದಹಾಗೆ, ನಿನ್ನೆ ಶನಿವಾರ, ಅಂದ್ರೆ, ಜುಲೈ 27 ರಂದು ರಾಮನಗರದ ಅನಮೋಡ್ ಅಬಕಾರಿ ಚೆಕ್ ಪೊಸ್ಟ್ ನಲ್ಲಿ ಸಿಬ್ಬಂದಿಯವ್ರು ತಪಾಸಣೆ ಕಾರ್ಯ ಮಾಡ್ತಿರ್ತಾರೆ. ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುವ ಅಕ್ರಮಿಗಳ ಮೇಲೆ ಹದ್ದಿನ ಕಣ್ಣಿಟ್ಟಿರ್ತಾರೆ. ಈ ವೇಳೆ ಪೊಲೀಸ್ರನ್ನ ನೋಡಿ ಅದೊಂದಿಷ್ಟು ಜನ ಮೆಲ್ಲಗೇ ಕಾಲ್ಕಿಳೋಕೆ ಟ್ರೈ ಮಾಡ್ತಾ ಇರ್ತಾರೆ. ಹೀಗಾಗಿ ಅಲರ್ಟ್ ಆದ ಪೊಲೀಸ್ರು ಅವ್ರನ್ನ ಬೆನ್ನತ್ತಿ ಹೋಗಿದ್ದಾಗ ಅವ್ರೇಲ್ಲ ಕಾಡಿನಲ್ಲಿ ಪರಾರಿಯಾಗಿ ಬಿಡ್ತಾರೆ. ಅವ್ರು ನಾಲ್ಕು ಜನ..! ಹೀಗಾಗಿ, ರಾತ್ರಿಯಿಡಿ ಆಗಂತುಕರಿಗಾಗಿ ಕಣ್ಣಿಟ್ಟು ಕೂತಿದ್ದ ರಾಮನಗರ ಪೊಲೀಸರಿಗೆ ಕೊನೆಗೂ ಆ...
ಶಿರೂರು ಗುಡ್ಡ ಕುಸಿತ, ಶೋಧ ಕಾರ್ಯ ಸ್ಥಗಿತವಾಗಿಲ್ಲ, ಆದ್ರೆ ಸದ್ಯ ಕಾರ್ಯಾಚರಣೆ ಮಾಡಲು ಸಾಧ್ಯವಾಗ್ತಿಲ್ಲ- ಮಂಕಾಳು ವೈದ್ಯ
ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆ ಸದ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ಥಗಿತವಾಗಿದೆ ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ರು. ಕಳೆದ 13 ದಿನಗಳಿಂದ ಕಾರ್ಯಾಚರಣೆ ನಡೆದಿದೆ. 8 ಜನರ ಶವ ಪತ್ತೆಯಾಗಿದೆ ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಆದ್ರೆ ,ಇದು ಅಂದಾಜು ಮಾತ್ರ ಇನ್ನೂ ಎಷ್ಟು ಜನರ ಶವ ಇದೆಯೋ ಗೊತ್ತಿಲ್ಲ. ನಾವು ಪ್ರಾಮಾಣಿಕವಾಗಿ ಕಾರ್ಯಾಚರಣೆ ಮಾಡಿದ್ದಿವಿ, ಇಲ್ಲಿನ ಶಾಸಕರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಾನೂ ಕೂಡ ಆರು ದಿನಗಳಿಂದ ಇಲ್ಲೇ ಇದ್ದಿನಿ. ಆರ್ಮಿ, ಅಗ್ನಿಶಾಮಕ ಸೇರಿ ಪರಿಣಿತ ತಂಡಗಳೂ ಕೂಡ ಕಾರ್ಯಾಚರಣೆ ಮಾಡಿವೆ. ಆದ್ರೆ ಇನ್ನೂ ಮೂವರ ಶವಗಳು ಪತ್ತೆಯಾಗಿಲ್ಲ. ಅದರ ಬಗ್ಗೆ ತುಂಬಾ ಬೇಸರವಿದೆ ಅಂತಾ ಮಂಕಾಳು ವೈದ್ಯ ಬೇಸರ ತೋಡಿಕೊಂಡ್ರು. ಇನ್ನು, ಪತ್ತೆಯಾದ ಎಂಟು ಶವಗಳ ಕುಟುಂಬಸ್ಥರಿಗೆ ಪರಿಹಾರದ ಹಣ ಈಗಾಗಲೇ ನೀಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಈಗಾಗಲೇ ನಾಪತ್ತೆಯಾದ ಮೂವರ ಕುಟುಂಬಗಳಿಗೂ ಪರಿಹಾರದ ಹಣ ನೀಡಲು ತಯಾರಾಗಿದ್ದೇವೆ...
“ಅಣಬೆ ಪಲ್ಯ, ಬಿಸಿ ರೊಟ್ಟಿ ಮಾಡಿ ಇಡ್ರಿ, ಬಂದು ಉಣ್ತಿನಿ” ಅಂತ ಹೇಳಿ ಹೋದ ಹುಡುಗ ಹೆಣವಾಗಿ ಬಿಟ್ಟ..! ಪಾಳಾ ಯುವಕನ ಆತ್ಮಹತ್ಯೆ ಹಿಂದೆ ಹಲವು ಅನುಮಾನ..?
ಮುಂಡಗೋಡ ತಾಲೂಕಿನ ಪಾಳಾದ ಹುಡುಗ ರವಿ ಅಕ್ಕಸಾಲಿ ಸಾವಿನ ಹಿಂದೆ ಅನುಮಾನ ಇದೆಯಾ..? ಹುಡೇಲಕೊಪ್ಪದ ಮಾವಿನ ಗಿಡದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ರವಿಯ ಸಾವಿನ ಸುತ್ತ ಹತ್ತಾರು ಪ್ರಶ್ನೆಗಳು ಎದ್ದಿವೆ. ವಯಸ್ಸಲ್ಲದ ವಯಸ್ಸಲ್ಲಿ ಆತನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದರ್ದಾದ್ರೂ ಏನಿತ್ತು ಅನ್ನೋದು ಕೆಲವರ ಪ್ರಶ್ನೆ..! ಅಣಬೆ ತಂದಿದ್ದ..! ಅಸಲು, ನಿನ್ನೆ ಇಡೀ ದಿನವೂ ಲವಲವಿಕೆಯಿಂದಲೇ ಇದ್ದ ರವಿ, ಮದ್ಯಾನ ಮನೆಗೆ ಕಾಡಿನಿಂದ ತಾಜಾ ಮಶರೂಮ್ (ಅಣಬೆ) ತಂದಿದ್ದ. ನಿಮಗೆ ಗೊತ್ತಿರಲಿ, ಉತ್ತರ ಕನ್ನಡದ ಕಾಡಲ್ಲಿ ಈ ಅಣಬೆಗಳು ಹೇರಳವಾಗಿ ಸಿಕ್ತವೆ. ಮಳೆಗಾಲ ಬಂತದ್ರೆ ಸಾಕು ಈ ಪಾಳಾ ಭಾಗದ ಕಾಡಲ್ಲಿ ನಿತ್ಯವೂ ಅಣಬೆಗಳಿಗಾಗಿ ಜನ ತಡಕಾಡುತಿರ್ತಾರೆ. ಹಾಗೆನೇ ರವಿ ಕೂಡ ಅಣಬೆಗಳನ್ನು ತಂದು ಖುಶಿಯಿಂದಲೇ ಮನೆಲಿ ರಾತ್ರಿ ಭರ್ಜರಿ ಊಟ ಮಾಡುವ ಆಸೆ ಇಟ್ಟುಕೊಂಡಿದ್ದ. ಹೀಗಾಗಿನೇ ಮನೆಲಿ ಅಡುಗೆ ಮಾಡಲು ಹೇಳಿದ್ದ. ರೊಟ್ಟಿ ಮಾಡಿಡಿ ಅಂದಿದ್ನಂತೆ..! ಇನ್ನು ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ ಬಿಸಿ ರೊಟ್ಟಿ ಮಾಡಿ ಇಡ್ರಿ...
ಶಿರೂರು ಗುಡ್ಡ ಕುಸಿತ: ನಾಪತ್ತೆಯಾದವರ ಶೋಧ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ
ಅಂಕೋಲಾ : ಶಿರೂರು ಗುಡ್ಡಕುಸಿತವಾಗಿ ಇಂದಿಗೆ 13ದಿನಗಳು ಕಳೆದಿವೆ. ದುರಂತದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ನಿರಂತರ 13 ದಿನಗಳಿಂದಲೇ ಕಾರ್ಯಾಚರಣೆ ನಡೆಯುತ್ತಿದೆ. ಇದುವರೆಗೆ 8 ಜನರ ಶವ ಹೊರ ತೆಗೆಯಲಾಗಿದ್ದು, ಇನ್ನುಳಿದ ಮೂವರಿಗಾಗಿ ನಿರಂತರ ಶೋಧ ನಡೆಸಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಅಂತಾ ಖುದ್ದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಮಾಹಿತಿ ನೀಡಿದ್ದಾರೆ. ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಲೋಕೇಶ್ ನಾಯ್ಕ ಹಾಗೂ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಚಾಲಕ ಅರ್ಜುನ್ಗಾಗಿ ತೀವ್ರ ಶೋಧ ನಡೆಸಲಾಗಿತ್ತು. ನಿನ್ನೆಯಿಂದ ಉಡುಪಿಯ ಪರಿಣಿತ ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನ ತಂದು ಗಂಗಾವಳಿ ನದಿಯಲ್ಲಿ ಶೋಧ ನಡೆಸಲಾಗಿತ್ತು. ಆದರೆ ಅದು ಎಷ್ಟೆ ಕಾರ್ಯಾಚರಣೆ ನಡೆಸಿದರೂ ಸಹ ನಾಪತ್ತೆ ಆದವರ ಹಾಗೂ ಲಾರಿ ಪತ್ತೆ ಆಗದೆ ಇರುವ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ ತಿಳಿಸಿದ್ದಾರೆ.
ಪಾಳಾ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಯುವಕನ ಶವ, ನೇಣಿಗೆ ಶರಣಾದ ಯುವಕ..!
ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಹುಡೇಲಕೊಪ್ಪದ ಮಾವಿನ ತೋಪಿನಲ್ಲಿ ಮಾವಿನ ಗಿಡಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಡಗೋಡ ತಾಲೂಕಿನ ಬದ್ರಾಪುರದ ರವಿ ಮಾರುತಿ ಅಕ್ಕಸಾಲಿ(25) ಎಂಬುವವನೇ ನೇಣಿಗೆ ಶರಣಾದ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಶಿಗ್ಗಾವಿಯಲ್ಲಿ ಶರಣ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..!
ಶಿಗ್ಗಾವಿ ಪಟ್ಟಣದಲ್ಲಿ ಶ್ರೀ ಶರಣ ಹಡಪದ ಅಪ್ಪಣ್ಣನವರ 890ನೇ ಜಯಂತ್ಯೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ನಂತರ, ಶಿಗ್ಗಾವಿ-ಸವಣೂರ ತಾಲೂಕಿನಿ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಹಾವೇರಿ ಜಿಲ್ಲಾ ಸಮಾವೇಶ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಅನ್ನದಾನಿಭಾರತಿ ಅಪ್ಪಣ್ಣ ಮಹಾಸ್ವಾಮಿಗಳು, ಹಾಗೂ ಸಾನಿದ್ಯವನ್ನು ಶ್ರೀ ಮ ನಿ ಪ್ರ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾದ್ಯಕ್ಷ ಸಿದ್ದಪ್ಪ ಹಡಪದ, ಜಿಲ್ಲಾ ಅದ್ಯಕ್ಷ ಷಣ್ಮುಖಪ್ಪ ಕಾಯಕದ, ಮಾಜಿ ಸಚಿವ ಅರ್ ಶಂಕರ್, ಸೋಮಣ್ಣ ಬೇವಿನಮರದ್, ಸಂಜೀವ ಕುಮಾರ ನೀರಲಗಿ, ಸಿ. ಎಂ. ಪೈಜ್, ಮೋಹನ ಚಂದಪ್ಪನವರ್, ಮಲ್ಲಿಕಾರ್ಜುನ ಹಡಪದ, ಹರೀಶ ಕ್ಷೌರದ್ ಉಪಸ್ಥಿತರಿದ್ದರು.
ಉತ್ತರ ಕನ್ನಡದಲ್ಲಿ ನಾಳೆ ಶನಿವಾರವೂ ಶಾಲಾ ಕಾಲೇಜುಗಳಿಗೆ ರಜೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರ ಕಡಿಮೆಯಾಗಿಲ್ಲ. ಜಿಲ್ಲಾಧ್ಯಂತ ಇನ್ನಿಲ್ಲದ ಸಂಕಷ್ಟ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶನಿವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ. ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ, ಹಳಿಯಾಳ, ದಾಂಡೇಲಿ ಹಾಗೂ ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶನಿವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎಲ್ಲ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 27 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ. ಇಂದಿನ ಮಳೆಯ ಹಾನಿ ಇಷ್ಟು..! ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1 ಮನೆ ಸಂಪೂರ್ಣ ಹಾನಿ, 3 ಮನೆಗಳಿಗೆ ತೀವ್ರ ಹಾನಿ,49 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದ 2 , ಕುಮಟಾ ಮತ್ತು ಅಂಕೋಲಾದ ತಲಾ 1 ಸೇರಿದಂತೆ ಒಟ್ಟು 4...
ಮಳಗಿ ಧರ್ಮಾ ಜಲಾಶಯ ಭರ್ತಿ: ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತ..! ಸಂಚಾರ ಬಂದ್..!!
ಮುಂಡಗೋಡ ತಾಲೂಕಿನ ಮಳಗಿ ಧರ್ಮಾ ಜಲಾಶಯ ಭರ್ತಿಯಾಗಿದೆ. ಹೀಗಾಗಿ, ಜಲಾಶಯ ಉಬ್ಬು ಬಿದ್ದು, ಮಳಗಿ- ದಾಸನಕೊಪ್ಪ ರಸ್ತೆ ಜಲಾವೃತವಾಗಿದೆ. ಮಿನಿ ಬ್ರಿಡ್ಜ್ ಮೇಲೆ ಮೂರು ಅಡಿಗಳಷ್ಟು ನೀರು ಹರಿಯುತ್ತಿರೊ ಕಾರಣ ರಸ್ತೆ ಸಂಚಾರ ಸ್ಥಗಿತವಾದಂತಾಗಿದೆ. ನಿರಂತರ ಮಳೆ ಹಿನ್ನೆಲೆಯಲ್ಲಿ ಧರ್ಮಾ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹೀಗಾಗಿ, ಮಳಗಿ ಬನವಾಸಿ ರಸ್ತೆಯ ದಾಸನಕೊಪ್ಪ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.
ಉ.ಕನ್ನಡದಲ್ಲಿ ನಾಳೆ ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ, ನಿರಂತರ ಮಳೆ ಹಿನ್ನೆಲೆ ಡಿಸಿ ಆದೇಶ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಕಾರಣದಿಂದ, ಜಿಲ್ಲಾಧ್ಯಂತ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಜಿಲ್ಲೆಯ ಕೆಲವು ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ಶುಕ್ರವಾರ ರಜೆ ಘೊಷಿಸಿ ಡಿಸಿ ಲಕ್ಷ್ಮೀ ಪ್ರಿಯ ಆದೇಶಿಸಿದ್ದಾರೆ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡಾ, ಹಳಿಯಾಳ, ದಾಂಡೇಲಿ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಮಳೆಯ ಅರ್ಭಟ ಜೋರಾಗಿದೆ. ಹೀಗಾಗಿ, ನಾಳೆ ಶುಕ್ರವಾರ ಈ ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಎಲ್ಲ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 26 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ..