ಕಾರವಾರ : ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ತಾಲೂಕಾ ಘಟಕದ ಕಾರ್ಯನಿರತ ಪತ್ರಕರ್ತರ ನೂತನ ಸಂಘದ ಪದಾಧಿಕಾರಿಗಳ ಆಯ್ಕೆಯನ್ನ‌ ಪತ್ರಿಕಾಭವನದಲ್ಲಿ ನಡೆಸಲಾಗಿದ್ದು, ಪದಾಧಿಕಾರಿಗಳನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ಪವರ್‌ ಟಿವಿ ಜಿಲ್ಲಾ ವರದಿಗಾರ ಉದಯ ಬರ್ಗಿ, ಉಪಾಧ್ಯಕ್ಷರಾಗಿ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಪ್ರಮೋದ ಹರಿಕಂತ್ರ, ಕಾರ್ಯದರ್ಶಿಯಾಗಿ ನ್ಯೂಸ್ 18 ಜಿಲ್ಲಾ ವರದಿಗಾರ ದರ್ಶನ ನಾಯ್ಕ, ಖಜಾಂಚಿಯಾಗಿ ಸುವರ್ಣವಾಹಿನಿ ಜಿಲ್ಲಾ ವರದಿಗಾರ ಭರತರಾಜ್ ಕಲ್ಲಡಕ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ, ದೀಪಕ್ ಕುಮಾರ್ ಶೆಣ್ವಿ, ದೀಪಕ್ ಗೋಕರ್ಣ, ಗಿರೀಶ್ ನಾಯ್ಕ‌ ಬಾಡ, ಗಣೇಶ್ ಹೆಗಡೆ, ಪ್ರವೀಣ್ , ಗೌತಮ್ ಬಾಡಕರ್, ಗಿರೀಶ್ ಬಾಂದೇಕರ್, ಕಿಶನ್, ಸುರೇಂದ್ರ ಕಲ್ಗುಟಕರ್, ದೀಪಕ್ ರೇವಣಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ‌

error: Content is protected !!