ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ್” ವೀರ ಸೈನಿಕರಿಗೆ ಗೌರವದ ಬೆಂಬಲ..!

Mundgod News:”ಆಪರೇಷನ್ ಸಿಂಧೂರ”ನಲ್ಲಿ ಭಾರತೀಯ ಸೈನಿಕರು ತೋರಿದ ಅಪ್ರತಿಮ ಹೋರಾಟವನ್ನು ಬೆಂಬಲಿಸಿ ಮುಂಡಗೋಡ ಪಟ್ಟಣದಲ್ಲಿ ಜಾತ್ಯಾತೀತವಾಗಿ “ತಿರಂಗಾ ಯಾತ್ರೆ” ನಡೆಯಿತು.

ಪಟ್ಟಣದ ಹಳೂರಿನ ಶ್ರೀ‌ಮಾರಿಕಾಂಬಾ ದೇವಸ್ಥಾನದಿಂದ ಬೃಹತ್ ರಾಷ್ಟ್ರಧ್ವಜದೊಂದಿಗೆ ಯಾತ್ರೆ ಹೊರಟು, ಶಿವಾಜಿ ಸರ್ಕಲ್ ಬಳಿ ಬಂದು ಸೇರುತ್ತಿದೆ. ಯಾತ್ರೆಯುದ್ದಕ್ಕೂ ಭಾರತ ಮಾತಾ ಕೀ ಜೈ, ಹಾಗೂ ಸೈನಿಕರ ಪರ ಜಯಘೋಷಗಳನ್ನು ಕೂಗಿ ಬೆಂಬಲಿಸಿದ್ರು.

error: Content is protected !!