IPL 2025 RCB vs SRH Match: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 42 ರನ್‌ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್ಸಿಬಿಯ ಕನಸನ್ನು ಭಗ್ನಗೊಳಿಸಿದೆ.
ಏಕಾನ ಮೈದಾನದಲ್ಲಿ ನಡೆದಿದ್ದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರೆಂಜ್ ಆರ್ಮಿ, ಇಶನ್ ಕಿಶನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಹಯಾದಿಂದಾಗಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 231 ರನ್ ಬಾರಿಸಿತು. ಇದಕ್ಕುತ್ತರವಾಗಿ ಬೆಂಗಳೂರು ತಂಡ 189 ರನ್ ಗಳಿಸಲಷ್ಟೇ ಶಕ್ತವಾಯಿತು.
ಬೃಹತ್ ಸ್ಕೋರ್ ಬೆನ್ನಟ್ಟಿದ ಬೆಂಗಳೂರು ಉತಮ್ಮ ಆರಂಭವನ್ನು ಪಡೆದಿತ್ತು. ಆರಂಭಿಕ ಬ್ಯಾಟರ್ಗಳಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಪವರ್ಪ್ಲೇನಲ್ಲಿ ಹೈದರಾಬಾದ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಆದರೇ ಕೊಹ್ಲಿ 43 ರನ್ಗಳಿಸಿದ್ದ ವೇಳೆ ಕ್ಯಾಚೌಟ್ ಆಗಿ ಪೆವಿಲಿಯನ್ ಸೇರಿದರು. ಇಲ್ಲಿಂದ ಆರ್ಸಿಬಿ ಪತನ ಆರಂಭವಾಯಿತ. ಬಳಿಕ ಬಂದ ಮಯಾಂಕ್ ಅಗರ್ವಾಲ್ 11ರನ್ ಗಳಿಸಿ ನಿರ್ಗಮಿಸಿದರು.
ಮತ್ತೊಂದೆಡೆ ಆರಂಭಿಕರಾಗಿ ಬ್ಯಾಟಿಂಗ್ಗೆ ಬಂದಿದ್ದ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿದ್ದರು. 32 ಎಸೆತಗಳಲ್ಲಿ 4 ಬೌಂಡರಿ 5 ಸಿಕ್ಸರ್ ಸಿಡಿಸಿ 62 ರನ್ ಬಾರಿಸಿದ್ದರು. ಆದರೆ ಕಮಿನ್ಸ್ ಎಸೆತದಲ್ಲೆ ಪೆವಿಲಿಯನ್ ದಾರಿ ಹಿಡಿದರು. ಇದರ ಬೆನ್ನಲ್ಲೆ ಆರ್ಸಿಬಿ ವಿಕೆಟ್ಗಳನ್ನು ಕಳೆದುಕೊಳ್ಳಲಾರಂಭಿಸಿತು. ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬ್ಯಾಟರ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.
ಇದನ್ನೂ ಓದಿ: ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಕಿಶನ್ ಸ್ಫೋಟಕ ಬ್ಯಾಟಿಂಗ್: ಇದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ್ದ ಇಶನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಅವರು 48 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 94 ರನ್ ಬಾರಿಸಿದರು. ಇದರಿಂದಾಗಿ ತಂಡ ಬೃಹತ್ ಮೊತ್ತದ ಕಲೆಹಾಕಲು ಸಾಧ್ಯವಾಯ್ತು.
ಆರ್ಸಿಬಿ ಕನಸು ಭಗ್ನ: ಈ ಸೋಲಿನೊಂದಿಗೆ ಆರ್ಸಿಬಿಯ ಅಗ್ರಸ್ಥಾನದ ಕನಸು ಬಹುತೇಕ ಭಗ್ನಗೊಂಡಿದೆ. ಈ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸಿದ್ದರೇ, ಅಗ್ರಸ್ಥಾನಕ್ಕೆ ತಲುಪಬಹುದಾಗಿತ್ತು. ಇದೀಗ ಎರಡನೇ ಸ್ಥಾನದಲ್ಲಿ ಉಳಿಯಬೇಕಾದರೇ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲೇಬೆಕಾಗಿದೆ. ಮತ್ತೊಂದೆಡೆ ಪಂಜಾಬ್ ಮತ್ತು ಗುಜರಾತ್ ಟೈಟಾನ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಸೋಲನ್ನು ಕಂಡರೇ ಆರ್ಸಿಬಿಗೆ ಲಾಭವಾಗಲಿದೆ. ಆಗ ಎರಡನೇ ಸ್ಥಾನಕ್ಕೆ ತಲುಪಲು ಆರ್ಸಿಬಿಗೆ ಸುವರ್ಣವಕಾಶ ಇರುತ್ತದೆ.
ಇದನ್ನೂ ಓದಿ: ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಒಂದು ವೇಳೆ ಗುಜರಾತ್ ತನ್ನ ಕೊನೆಯ ಪಂದ್ಯ ಸೋತರೇ ಮತ್ತು ಪಂಜಾಬ್ ಉಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸದಿದ್ದರೇ ಆರ್ಸಿಬಿ ಅಗ್ರಸ್ಥಾನಕ್ಕೆ ತಲುಪಬಹುದಾಗಿದೆ. ಆದ್ರೆ ಈ ಎರಡೂ ತಂಡಗಳು ಪ್ರಸ್ತುತ ಉತ್ತಮ ಫಾರ್ಮ್ನಲ್ಲಿರುವ ಕಾರಣ ಇದು ಸಂಭವಿಸುವುದು ಅನುಮಾನವಾಗಿದೆ