ಬೆಂಗಳೂರು : ರಾಜ್ಯ ಸರ್ಕಾರದಿಂದ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಈ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದ್ದು, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಶಿವ ಪ್ರಕಾಶ್ ದೇವರಾಜು ಅವರನ್ನು ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ವರ್ತಿಕಾ ಕಟಿಯಾರ್ ಅವರನ್ನು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಿದೆ. ಇನ್ನು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ದಿವ್ಯಾ ಶರಾ ಥಾಮಸ್ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ನೂತನ ಎಸ್ಪಿಯಾಗಿ ಸಂಗೀತಾ ಜಿ ಅವರನ್ನು ನೇಮಿಸಿದೆ. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಅನುಪಮ್ ಅಗರ್ವಾಲ್ ಅವರನ್ನು ಎತ್ತಂಗಡಿ ಮಾಡಿದ್ದು, ಅವರ ಜಾಗಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೆಚ್ ಡಿ ಆನಂದ್ ಕುಮಾರ್ ಅವರನ್ನು ನೇಮಕ ಮಾಡಿದೆ.
Top Stories
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಗ್ರಾಮ ಪಂಚಾಯತಿ ಉಪ ಚುನಾವಣೆಗೆ ದಿನಾಂಕ ನಿಗದಿ, ಹುನಗುಂದ ಗ್ರಾಮ ಪಂಚಾಯತಿ 1 ಸ್ಥಾನಕ್ಕೆ ಎಲೆಕ್ಷನ್ ಫಿಕ್ಸ್..!
ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ್ ದೇವರಾಜು ವರ್ಗಾವಣೆ, ವರ್ತಿಕಾ ಕಟಿಯಾರ್ ನೂತನ ಎಸ್ಪಿ..!
ಕೇಳಿದ್ದು 48 ಗಂಟೆ ಟೈಮ್, ಆದ್ರೆ ಮನೆಬಾಗಿಲಿಗೇ ಬಂದಿದ್ದು 16 ಗಂಟೆಯಲ್ಲೇ..! ಇದು ಹೆಬ್ಬಾರ್ ಸ್ಟೈಲ್..!!
ಶಿರಸಿ : ಸಚಿವ ಶಿವರಾಮ್ ಹೆಬ್ಬಾರ್ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ. ಶಿರಸಿ ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಘಟನೆ ನಡೆದು ಕೇವಲ 16 ಗಂಟೆಯೊಳಗೆ ನೊಂದ ಕುಟುಂಬಕ್ಕೆ ಪರಿಹಾರದ ಮೊತ್ತ ತಲುಪಿಸಿದ್ದಾರೆ. 48 ಅಲ್ಲ 16 ಗಂಟೆ..! ಅಂದಹಾಗೆ, ನಿನ್ನೆ ಮಂಗಳವಾರ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಯಶೋದಾ ಬಂಗಾರಿ ಗೌಡ ಮೃತಪಟ್ಟಿದ್ರು. ಅದ್ಯಾವುದೋ ಬೇರೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದ ಸಚಿವ ಶಿವರಾಮ್ ಹೆಬ್ಬಾರ್ ಕಾರ್ಯಕ್ರಮ ಮೊಟಕುಗೊಳಿಸಿ ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ರು, ಸಾಂತ್ವನ ಹೇಳಿದ್ರು. ಮುಂದಿನ 48 ಗಂಟೆಯೊಳಗೆ ಪರಿಹಾರದ ಹಣ ಕೈಗಿಡುತ್ತೇನೆ ಅಂತಾ ಮಾತು ಕೊಟ್ಟಿದ್ರು.. ಆ ಮಾತಿನಂತೆ ಇಂದು ಖುದ್ದಾಗಿ ತೆರಳಿ ನೊಂದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಇದೇ ಅಲ್ವಾ ಭರವಸೆ..? ನಿಜ, ಯಲ್ಲಾಪುರ ಕ್ಷೇತ್ರದಲ್ಲಿ ಇದೊಂದೇ ಪ್ರಕರಣವಲ್ಲ, ಬದಲಾಗಿ ಕ್ಷೇತ್ರದಲ್ಲಿ ಕಳೆದ ಬಾರಿ...
ಜುಲೈ 17 ರವರೆಗೆ ಭಾರೀ ಮಳೆ ಮುನ್ಸೂಚನೆ..! ಕರಾವಳಿಯಲ್ಲಿ ಆರೆಂಜ್ ಅಲರ್ಟ್..!!
ಬೆಂಗಳೂರು : ರಾಜ್ಯದ ಕರಾವಳಿ, ಒಳನಾಡು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನ ಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ಜುಲೈ 17ರ ವರೆಗೂ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅಲ್ಲದೇ ಮಲೆನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಜುಲೈ 15 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಬಾರಿ ವಾಡಿಕೆಯಂತೆ ಮಳೆಯಾಗಿಲ್ಲ. ಆದ್ರೆ ಜುಲೈ ತಿಂಗಳಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಮಳೆ ಯ ಆರ್ಭಟ ಇನ್ನಷ್ಟು ದಿನಗಳ ವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಾಡದೋಣಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆಯನ್ನು ನೀಡಲಾಗಿದೆ. ಕರಾವಳಿ ಹಾಗೂ...
ಮನೆ ಗೋಡೆ ಕುಸಿದು ಮೃತಪಟ್ಟ ಮಹಿಳೆಯ ಬಡ ಕುಟುಂಬದ ಕಣ್ಣೀರು ಒರೆಸಿದ ಸಚಿವ..! ಮಾನವೀಯತೆ ಅಂದ್ರೆ ಇದೇ ಅಲ್ವಾ..?
ಶಿರಸಿ: ಮನೆ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ವಿಶೇಷ ಚೇತನ ಮಹಿಳೆಯೊರ್ವಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರದ ಮುಂಡಗೆಹಳ್ಳಿಯಲ್ಲಿ ನಡೆದಿದೆ. ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಂಡಗೆಹಳ್ಳಿಯ 45 ವರ್ಷ ವಯಸ್ಸಿನ ಯಶೋಧಾ ಬಂಗಾರಿ ಗೌಡ ಮೃತಪಟ್ಟ ವಿಶೇಷ ಚೇತನ ಮಹಿಳೆ. ಈಕೆ ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಳೆಯದಾಗಿದ್ದ ಗೋಡೆ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾವಿಸಿ ಬಂದ್ರು ಸಚಿವ್ರು..! ಮದಹಾಗೆ, ಬನವಾಸಿ ಭಾಗದಲ್ಲಿ ಇಂದು ಕಾರ್ಯಕ್ರಮದ ನಿಮಿತ್ತ ಹಾಜರಿದ್ದ ಸಚಿವ ಶಿವರಾಮ್ ಹೆಬ್ಬಾರ್, ಮಹಿಳೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಬಂದ್ರು. ಅಕ್ಷರಶಃ ಕಣ್ಣೀರಲ್ಲಿ ಮುಳುಗಿ ಹೋಗಿದ್ದ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನದ ಮಾತು ಹೇಳಿದ್ರು. ಕುಟುಂಬದ ಕಣ್ಣೀರು ಒರೆಸುವ ಪ್ರಯತ್ನ ಮಾಡಿದ್ರು, ನಾನು ನಿಮ್ಮ ಜೊತೆಲಿದ್ದಿನಿ ಭಯ ಪಡಬೇಡಿ ಅಂತಾ ದೈರ್ಯ ತುಂಬಿದ್ರು. ಜಸ್ಟ್ 48 ಗಂಟೆ...
ಹೀಗೆ ಹುಲಿರಾಯ ಹೆಜ್ಜೆ ಹಾಕಿದ್ದು ಬೆಡಸಗಾಂವ್ ಅರಣ್ಯದಲ್ಲಾ..?
ಮುಂಡಗೋಡ: ತಾಲೂಕಿನ ಬೆಡಸಗಾಂವ ಅರಣ್ಯ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಅಂತಾ ಹೇಳಲಾದ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಲ್ಲಿ ನಿರ್ಭಿಡೆಯಿಂದ ಓಡಾಡುತ್ತಿರೋ ಹುಲಿರಾಯ ಘರ್ಜನೆ ಮೊಳಗಿಸಿದ್ದಾನೆ. ಆದ್ರೆ ಈ ವಿಡಿಯೋ ಮುಂಡಗೋಡ ತಾಲೂಕಿ ಬೆಡಸಗಾಂವ್ ಅರಣ್ಯ ಪ್ರದೇಶದಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಸ್ಪಷ್ಟವಾಗಿಲ್ಲ. ಅದ್ರೆ ಸಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಾತ್ರ ಹರಿದಾಡುತ್ತಿದೆ.
ಆ ಹುಬ್ಬಳ್ಳಿ ಹುಡುಗನ ಮರ್ಡರ್ ಹಿಂದೆ ಇದ್ದಿದ್ದು “ಗಾಜಿನ ಪುರಾಣ”
ಹುಬ್ಬಳ್ಳಿ: ಆ ಯುವಕ ತನ್ನ ಮುಂದಿನ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡವನು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿದ್ದ ಆ ಯುವಕ ಗೆಳೆಯರ ಜೊತೆ ಎಂಜಾಯ್ ಮಾಡುತ್ತಾ ಮನೆಯ ಮುದ್ದು ಮಗನಾಗಿದ್ದವನು. ಆದ್ರೆ ಆ ಯುವಕನ ಮೇಲೆ ಅದಾಗಲೇ ಒಂದು ಗ್ಯಾಂಗ್ ನ ಕಣ್ಣು ಬಿದ್ದಿತ್ತು. ನಿನ್ನೆ ಯುವಕನ ಜೊತೆ ಸಣ್ಣದಾಗಿ ಜಗಳ ಮಾಡಿದ್ದ ಆ ಗ್ಯಾಂಗ್ ಸದ್ದಿಲ್ಲದೆ ಯುವಕನ ಪ್ರಾಣ ತಿಂದು ಹಾಕಿದೆ. ಸ್ಮಾರ್ಟ್ ಹುಡುಗ ಕಣ್ರಿ..! ಆಸ್ಪತ್ರೆಯ ಎದುರು ನಿಂತಿರೋ ನೂರಾರು ಜನರು..ಶವಾಗರದ ಬಳಿ ಬಂದು ಗೆಳೆಯನನ್ನ ಕೊನೆಯದಾಗಿ ನೋಡಬೇಕು ಅಂತ ಕಾಯುತ್ತಿರುವ ಸ್ನೇಹಿತರು. ಹೌದು ಹುಬ್ಬಳ್ಳಿಯ ಕಿಮ್ಸ್ ನ ಶವಾಗಾರದ ಬಳಿ ಇವರೆಲ್ಲ ಹೀಗೆ ಜಮಾಯಿಸೋಕೆ ಕಾರಣವೇ ಹೀಗೆ ಫೋಟೋದಲ್ಲಿ ಸ್ಮಾರ್ಟ್ ಆಗಿ ಡಿಫರೆಂಟ್ ಡಿಫರೆಂಟ್ ಪೋಸ್ ಕೊಟ್ಟಿರುವ ಹುಬ್ಬಳ್ಳಿಯ ಅಮರ ಕಾಲೋನಿ ನಿವಾಸಿ ಅಭಿಷೇಕ ರುದ್ರಗೌಡ ಪಾಟೀಲನ ಶವ ಕೊನೆಯದಾಗಿ ನೋಡೋಕೆ.. ಹೇಗಾಯ್ತು ಮರ್ಡರ್..? ನಿನ್ನೆ ಸಂಜೆ ಮನೆಯಲ್ಲಿದ್ದ ಅಭಿಷೇಕನ್ನ ಮೂವರು ಹಂತಕರು ಹೊರಗೆ ಕರೆದಿದ್ದಾರೆ. ಹೊರ...
ಪವಾಡ ಮಾಡಿ ವಂಚಿಸುತ್ತಿದ್ದ ಡೋಂಗಿ ಬಾಬಾಗೆ ಹೇಗೇಲ್ಲ ಥಳಿಸಿದ್ರು ಗೊತ್ತಾ..?
ಗದಗ: ಆತ ಪವಾಡ ಪುರುಷನಂತೆ. ಸುಡುವ ಎಣ್ಣೆಯಲ್ಲಿ ಕೈ ಇಟ್ಟರೂ ಆತನ ಕೈ ಸುಡುತ್ತಿರಲಿಲ್ಲ, ಕೊತಕೊತ ಕುದಿಯುವ ಬಿಸಿ ತುಪ್ಪವನ್ನ ಬರಿಗೈಲಿ ಹಿಡಿದು ಎಲ್ಲರ ಹುಬ್ಬೇರಿಸುತ್ತಿದ್ದನಂತೆ. ಇವುಗಳ ಮೂಲಕ ಜನರಿಂದ ಸಾವಿರ ಸಾವಿರ ರೂ. ಹಣ ವಸೂಲಿ ಮಾಡ್ತಿದ್ದನಂತೆ. ಸಾಲದು ಅಂತ ಹಿಂದೂ ದೇವರುಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನಂತೆ. ಅದೇನೋ ಗೊತ್ತಿಲ್ಲ ಇವತ್ತು ಇವನ ಗ್ರಹಚಾರ ನೆಟ್ಟಗಿರಲಿಲ್ಲ. ಹೊಡಿ ಮಗಾ, ಹೊಡಿ ಮಗಾ..! ಕಪಾಳಕ್ಕೆ ಹೊಡೆಯುವನು ಒಬ್ಬ, ಇನ್ನೊಬ್ಬ ಎಳೆದು ಒದಿತಿದ್ದ. ಮತ್ತೋರ್ವಳು ಹಾದಿಯೊಳಗೆ ಪಟ ಪಟ ಅಂತ ಮುಖಕ್ಕೆ ಭಾರಿಸುತ್ತಿದ್ದಳು. ಅಯ್ಯೋ ಕೈ ಮುಗಿತಿನಿ ಬಿಟ್ಟು ಬಿಡಿ ಕೈ ಮುಗಿತಿನಿ ಅಂತ ಒದೆತಿನ್ನುತ್ತಿದ್ದ ಬಾಬಾ ಹೇಳ್ತಿದ್ದ. ಘಟನೆ ಎಲ್ಲಿ..? ಅಂದಹಾಗೆ ಇವೆಲ್ಲ ದೃಶ್ಯ ಕಂಡು ಬಂದಿದ್ದು ಗದಗನಲ್ಲಿ.. ಹೌದು. ಪವಾಡಗಳ ಹೆಸರಲ್ಲಿ ವಂಚನೆ ಮಾಡುತ್ತಿದ್ದ ನಕಲಿ ಬಾಬಾ ಒಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಘಟನೆ ನಡೆದಿದ್ದು ಡೋಂಗಿ ಬಾಬಾ ಆಸೀಫ್ ಜಾಗಿರದಾರ್...
ಪೋಷಕರೇ ಹುಶಾರು..! ಹಾಡಹಗಲೇ 2 ವರ್ಷದ ಗಂಡು ಮಗು ಅಪಹರಣ ಮಾಡಿದ ಖದೀಮ..!
ಉಡುಪಿ: ಇಲ್ಲಿನ ಕರಾವಳಿ ಜಂಕ್ಷನ್ ನಲ್ಲಿ ಹಾಡು ಹಗಲೇ 2 ವರ್ಷದ ಗಂಡು ಮಗುವಿನ ಅಪಹರಣ ಮಾಡಲಾಗಿದೆ. ಮಗುವನ್ನ ಅಪಹರಿಸಿ ಖಾಸಗಿ ಬಸ್ಸು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಗಳ ಗಂಡು ಮಗು ಅಪಹರವಾಗಿದ್ದು, ಕೆಲವು ದಿನದ ಹಿಂದೆ ಈ ದಂಪತಿಯನ್ನ ಪರಿಚಯ ಮಾಡಿಕೊಂಡಿದ್ದ ಅಪಹರಣಕಾರ, ಪ್ರತಿದಿನ ಈ ದಂಪತಿಯ ಸಮೀಪದಲ್ಲೇ ಮಲಗುತ್ತಿದ್ದ. ಇಂದು ಬೆಳಿಗ್ಗೆ ಮಗುವಿಗೆ ತಿಂಡಿ ಮಾಡಿಸಿ ಬರುತ್ತೇನೆ ಎಂದು ಕರೆದುಕೊಂಡು ಹೋಗಿ, ಮಗುವಿನ ಜೊತೆ ಬಸ್ ಏರಿ ಪರಾರಿಯಾಗಿದ್ದಾನೆ. ಇನ್ನು ಉಡುಪಿ ನಗರ ಠಾಣೆ ಪೊಲೀಸರಿಂದ ಅಪಹರಣಕಾರನಿಗಾಗಿ ಹುಡುಕಾಟ ನಡೆದಿದೆ.
ಪ್ರವಾಸಕ್ಕೆ ಬಂದವರು, ಸಮುದ್ರ ಪಾಲಾದ್ರು..!
ಕಾರವಾರ: ಸಮುದ್ರದಲ್ಲಿ ಈಜಲು ಹೋದ ಇಬ್ಬರು ನೀರುಪಾಲಾಗಿ, ಮತ್ತಿಬ್ಬರನ್ನು ಸ್ಥಳೀಯರೇ ರಕ್ಷಣೆ ಮಾಡಿದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಣಿ ಹಾಗೂ ಬೇಕರಿ ಮಂಜುನಾಥ್ ಸಾವು ಕಂಡವರು. ನಾಗರಾಜ ಹಾಗೂ ಪ್ರವೀಣ್ ರಕ್ಷಣೆಗೊಳಗಾದವರು. ಇನ್ನು ಸಮುದ್ರ ಪಾಲಾಗಿದ್ದ ಮಣಿ ಶವ ಪತ್ತೆಯಾಗಿದೆ. ಆದ್ರೆ, ಮಂಜುನಾಥ್ ಶವ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, ಶವಕ್ಕಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರು ಸೇರಿ ಶಿವಮೊಗ್ಗ ದಿಂದ ಮುರಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ರು.. ನಾಲ್ಕೂ ಜನ ಸಮುದ್ರದಲ್ಲಿ ಈಜುವಾಗ ಅಲೆಗೆ ಕೊಚ್ಚಿ ಹೋಗಿ ದುರಂತ ಸಂಭವಿಸಿದೆ. ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.
ಆ ನೀಚ ಪತಿ ಕುಡಿದ ಮತ್ತಿನಲ್ಲಿ, ತನ್ನ ಪತ್ನಿಯ ಮೂಗನ್ನೇ ಕಚ್ಚಿ ತಿಂದುಬಿಟ್ಟ..!
ಆತ ಕುಡಿದ ಮತ್ತಿನಲ್ಲಿದ್ದ ಪತಿ, ಪತ್ನಿ ಮನೆಯಲ್ಲಿ ಬಂದು ಉಳಿದಿದ್ದ ಆತನದು ನಿತ್ಯದ ಕಾಯಕ ಕುಡಿತ ಮತ್ತು ಜಗಳ. ನಿತ್ಯ ಕುಡಿದು ಬಂದು ಬೈಯುತ್ತಲೇ ಇದ್ದರೂ ಸಹ ಪತ್ನಿ ಹೇಗೋ ಹೊಂದಿಕೊಂಡು ಹೊರಟ್ಟಿದ್ದಳು. ಇಂದಲ್ಲ ನಾಳೆ ನನ್ನ ಪತಿ ಸುಧಾರಿಸಿಯಾನೂ ಅಂತಾನೆ ಅವಳು ತಿಳಿದಿದ್ದಳು. ಆದ್ರೆ ಪತ್ನಿಯನ್ನ ಚೆನ್ನಾಗಿ ನೋಡಕೊಳ್ಳಬೇಕಾದ ದುರುಳ ಪತಿ ಮಾಡಿದ್ದು ಮಾತ್ರ ವಿಚಿತ್ರ ಕಾರ್ಯ..ಕುಡಿತದ ಮತ್ತಿನಲ್ಲೇ ತೇಲುತ್ತಿದ್ದ ಪತಿ ಮಾತ್ರ ಹೆಂಡತಿಯ ಮೂಗನ್ನೇ ಕಚ್ಚಿಬಿಟ್ಟಿದ್ದಾನೆ. ಹೌದು, ಹೀಗೆ ಸಂಪೂರ್ಣವಾಗಿ ರಕ್ತಸಿಕ್ತವಾಗಿರು ಮೂಗು..ಮೂಗಿನಿಂದ ನಿರಂತರವಾಗಿ ಸುರಿಯುತ್ತಿರುವ ರಕ್ತವನ್ನು ತಡೆಯುತ್ತ ನೋವಿನಿಂದ ನರಳುತ್ತಿರುವ ಈ ಮಹಿಳೆಯ ಹೆಸರು ಗೀತಾ ಅಂತ. ಈಕೆಯೇ ಈಗ ತನ್ನ ಪತಿಯಿಂದಲೇ ಮೂಗು ಕಚ್ಚಿಸಿಕೊಂಡ ಪತ್ನಿ. ಈಕೆಯ ಪತಿ ಉಮೇಶ ಗಂಡಗುದರಿ ಎಂಬಾತನೇ ಮೂಗು ಕಚ್ಚಿದ ಪತಿ. ಈ ಘಟನೆ ನಡೆದಿರೋದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ. ನಿನ್ನೆ ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ...