ನಿಜ ಈ ಸುದ್ದಿ ಮುಂಡಗೋಡಿಗರ ಪಾಲಿಗೆ ನಿಜಕ್ಕೂ ಬಲೂ ನೋವು, ಅಚ್ಚರಿ, ಆತಂಕ ತರುವಂತದ್ದು. ಯಾಕಂದ್ರೆ, ಕಳೆದ 45 ವರ್ಷಗಳಿಂದ ನಡೆದುಕೊಂಡು ಬಂದಿದ್ದ, ಭಕ್ತಿ ಭಾವುಕತೆಗೆ ಸಾಕ್ಷಿಯಾಗಿದ್ದ ತ್ರಿಮೂರ್ತಿಗಳ ಪ್ರತಿರೂಪದಂತೆ ಇದ್ದ ಆ ದೀಪಗಳು ಆರಿ ಹೋಗಿವೆ ಅನ್ನೋ ಸುದ್ದಿ ಇದೆ. ಆದ್ರೆ, ಖಚಿತತೆಯ ಅವಶ್ಯಕತೆ ಇದೆ.
ಮುಂಡಗೋಡ ತಾಲೂಕಿನ ಹೆಮ್ಮೆಯಾಗಿದ್ದ, ಐತಿಹಾಸಿಕ, ಚಿಗಳ್ಳಿಯ ವಿಶ್ವ ವಿಖ್ಯಾತ, ಎಂದೂ ಆರದ ದೀಪಗಳು ಆರಿಹೋದ್ವಾ..? ಇಂತಹದ್ದೊಂದು ಅಚ್ಚರಿಯ, ಆತಂಕದ ಸುದ್ದಿ ಹೊರಬಿದ್ದಿದೆ. ಇವತ್ತು ಅಂದ್ರೆ, ಬುಧವಾರ ಸಂಜೆ ಹೊತ್ತಿನಲ್ಲಿ ಈ ಸುದ್ದಿ ಇಡೀ ಚಿಗಳ್ಳಿಗರಿಗೆ ಅಚ್ಚರಿ ಮೂಡಿಸಿದೆಯಂತೆ. ಬರೋಬ್ಬರಿ ನಾಲ್ಕೂವರೇ ದಶಕಗಳಿಂದ ಎಣ್ಣೆ ಇಲ್ಲದೇ ಉರಿಯುತ್ತಿದ್ದ ಮೂರೂ ದೀಪಗಳು ಶಾಂತವಾಗಿವೆ ಅಂತಾ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಬಂದಿದೆ. ಆದ್ರೆ, ಈ ಬಗ್ಗೆ ದೇವಸ್ಥಾನದ ಆಡಳಿತ ವರ್ಗ ಖಾತ್ರಿ ಪಡಿಸಬೇಕಿದೆ.
ಪೂಜಾರಿಯ ಸಾವಿನೊಂದಿಗೆ..!?
ಅಸಲು, ಕಳೆದ ಹದಿನಾಲ್ಕು ದಿನಗಳ ಹಿಂದೆ ಇದೇ ದೀಪನಾಥೇಶ್ಬರ ದೇವಸ್ಥಾನದ ಪೂಜಾರಿ, ಹಾಗೂ ನಾಲ್ಕು ದಶಕದ ಹಿಂದೆ ಅಂದ್ರೆ 1980 ರಲ್ಲಿ, ದೀಪ ಹಚ್ಚಿಟ್ಟಿದ್ದ ಅಜ್ಜಿ ಶಾರಾದಾಬಾಯಿಯವರ ಸಾಕು ಮಕ್ಕಳ ಕುಡಿ, ವೆಂಕಟೇಶ್ ರಾಯ್ಕರ್ ನಿಧನರಾಗಿದ್ದರು. ಹೀಗಾಗಿ, ಕಳೆದ 14 ದಿನಗಳಿಂದ ದೇವಸ್ಥಾನದ ಬಾಗಿಲು ತೆರೆದಿರಲಿಲ್ಲ ಎನ್ನಲಾಗಿದೆ. ಆದ್ರೆ, ಇಂದು ಬಾಗಿಲು ತೆರೆದು ನೋಡಿದಾಗ ದೀಪಗಳು ಶಾಂತವಾಗಿದ್ದು (ಆರಿ ಹೋಗಿದ್ದು) ಕಂಡುಬಂದಿದೆ ಎನ್ನಲಾಗಿದೆ. ಹೀಗಾಗಿ, ಗ್ರಾಮಸ್ಥರು ದೆವಸ್ಥಾನದ ಬಳಿ ಸೇರಿ ಈ ಕುರಿತು ಮಾಹಿತಿ ಪಡೆಯಲು ಮುಂದಾದಾಗ, ದೇವಸ್ಥಾನಕ್ಕೆ ಸಂಬಂಧಪಟ್ಟವರು ಯಾವುದೇ ಖಚಿತ ಮಾಹಿತಿ ನೀಡದೇ, ಮಾದ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ 45 ವರ್ಷಗಳ ಎಣ್ಣೆ ಇಲ್ಲದೇ ಉರಿಯುತ್ತಿದ್ದ ದೀಪಗಳು ಆರಿಹೋಗಿದ್ದ ಸುದ್ದಿ, ಭಾರೀ ಆತಂಕಕ್ಕೆ ಕಾರಣವಾಗಿದೆ..!
ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.