ಮೊಹರಂ ಹುಲಿವೇಷಧಾರಿ ಹಾಗೂ ತಮಟೆ ಕಲಾವಿದನ ಜುಗಲ್ ಬಂದಿ..!

ಮುಂಡಗೋಡ: ತಾಲೂಕಿನಲ್ಲಿ ಸದ್ಯ ಮೊಹರಂ ಆಚರಣೆ ಭಕ್ತಿ ಭಾವದಿಂದ ನೆರವೇರುತ್ತಿದೆ. ತಾಲೂಕಿನಾಧ್ಯಂತ ಪಂಜಾಗಳನ್ನು ಪ್ರತಿಷ್ಟಾಪಿಸಲಾಗಿದೆ. ಹೀಗಾಗಿ, ಹುಲಿ ವೇಷಧಾರಿಗಳ ಕುಣಿತವೂ ಎಲ್ಲೆಲ್ಲೂ ಕಂಡು ಬರುತ್ತಿದೆ.

ಅದ್ರಂತೆ, ಇಂದು ಮುಂಡಗೋಡ ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಹುಲಿವೇಷಧಾರಿ ಬಂದಿದ್ದರು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಬಂದಿದ್ದ ಪ್ರಸಿದ್ಧ ತಮಟೆ ಕಲಾವಿದ ಪ್ರತಾಪ್ ಅವರು ತಮಟೆ ಬಾರಿಸಿದ್ರು. ತಮಟೆ ಶಬ್ದಕ್ಕೆ ಹುಲಿ ವೇಷಧಾರಿ ಸಕತ್ ಸ್ಟೆಪ್ ಹಾಕಿದ್ರು‌‌. ಮುಂಡಗೋಡಿನ ಶಿವಾಜಿ ಸರ್ಕಲ್ ಬಳಿ ಹುಲಿಯ ನೃತ್ಯಕ್ಕೆ ಜನರು ಫಿದಾ ಆಗಿ ಚಪ್ಪಾಳೆ ತಟ್ಟಿದ್ರು.

error: Content is protected !!