ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!

ಮುಂಡಗೋಡ ತಾಲೂಕಿನ ಇಂದೂರ ಸಮೀಪದ, ಮಲಬಾರ್ ಕಾಲೋನಿಯ ಅರಣ್ಯದಲ್ಲಿ ಅಕ್ರಮ ಮಣ್ಣು ಸಾಗಾಟ ನಿರಂತರವಾಗಿದೆ ಅನ್ನೋ ಆರೋಪವಿದೆ. ಹೀಗಾಗಿ, ನಿನ್ನೆ ಶನಿವಾರ ತಡ ರಾತ್ರಿ ಮಲಬಾರ್ ಕಾಲೋನಿಯ ಹಾರನಕೇರಿಯ ಹತ್ತಿರ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ದಾಳಿ ಮಾಡಿದ್ದಾರೆ. ಪರಿಣಾಮ ಅಕ್ರಮವಾಗಿ ಮಣ್ಣು ಸಾಗಾಟದಲ್ಲಿ ತೊಡಗಿದ್ದ ಒಂದು JCB ಹಾಗೂ ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.

ಇಂದೂರು ಸೆಕ್ಷೆನ್ ನ ಅರಣ್ಯ ಇಲಾಖೆಗೆ ಸಂಬಂಧಿಸಿದ ಕೆರೆಯ ಪಕ್ಕದಲ್ಲಿನ ಅರಣ್ಯದಲ್ಲಿ ಅಕ್ರಮವಾಗಿ ರಾತ್ರೋ ರಾತ್ರಿ ಮಣ್ಣು ತೆಗೆದು ಸಾಗಾಟ ಮಾಡುತ್ತಿದ್ದರು. ಹೀಗಾಗಿ, ಖಚಿತ ಮಾಹಿತಿ ಸಿಕ್ಕ ಕೂಡಲೇ ಅರಣ್ಯ ರಕ್ಷಕ ಶ್ರೀಕಾಂತ್ ವೇ್ಣೇಕರ್, ಗಸ್ತು ಅರಣ್ಯ ಪಾಲಕ ನಾರಾಯಣ ಸಿಂಗ್ ರಜಪೂತ್ ಹಾಗೂ ಈರಪ್ಪ ಉಗ್ನಿಕೇರಿ ದಾಳಿ ಮಾಡಿ, ಒಂದು ಜೆಸಿಬಿ, ಮತ್ತೆ ಒಂದು ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಇನ್ನೂ ಹಲವು ಟ್ರ್ಯಾಕ್ಟರ್ ಗಳು ಪರಾರಿಯಾಗಿವೆ.

error: Content is protected !!