ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನ ಭೀಕರ ಹತ್ಯೆ| ಮನೆಯ ಬಳಿಯೇ ಕೊಚ್ಚಿ ಕೊಚ್ಚಿ ಕೊಂದ್ರು ಹಂತಕರು..!!



ವಿಜಯಪುರ: ಭೀಮಾತೀರದ ಡೆಡ್ಲಿ ಹಂತಕ ಬಾಗಪ್ಪ ಹರಿಜನನ ಭೀಕರ ಹತ್ಯೆಯಾಗಿದೆ.ನಿನ್ನೆ ರಾತ್ರಿ 9.25ರ ಸುಮಾರಿಗೆ ಬಾಗಪ್ಪ ಹರಿಜನ್ ಹತ್ಯೆ ನಡೆದಿದ್ದು, ಮನೆಯ ಎದುರೇ ಭೀಕರವಾಗಿ ಹತ್ಯೆ ಮಾಡಲಾಗಿದೆ.

 

ನಿನ್ನೆ ರಾತ್ರಿ ಬಾಗಪ್ಪ ಊಟ ಮಾಡಿ ವಾಕಿಂಗ್‌ಗೆ ಹೊರ ಬಿದ್ದ ವೇಳೆ ಅಟ್ಯಾಕ್ ಮಾಡಲಾಗಿದೆ. ಕರೆಂಟ್ ಕಟ್ ಮಾಡಿ, ಟಂಟಂ ನಲ್ಲಿ ಬಂದು ಅಟ್ಯಾಕ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳದಲ್ಲಿ ಮೂರು ಸುತ್ತು ಗುಂಡಿನ ಸದ್ದು ಕೇಳಿ ಬಂದಿದೆ. ನಂತ್ರ ಕೊಡಲಿಯಿಂದ ಕೊಚ್ಚಿ ಬಾಗಪ್ಪ‌ನ ಹತ್ಯೆ ಮಾಡಲಾಗಿದ್ದು, ಎಡಗೈ ಕಟ್ ಮಾಡಲಾಗಿದೆ, ಗುಪ್ತಾಂಗಕ್ಕೂ ಹಂತಕರಿಂದ ಕತ್ತರಿ ಹಾಕಲಾಗಿದೆ. ಹೀಗಾಗಿ, ಅತ್ಯಂತ ಭೀಬತ್ಸವಾಗಿ ಮರ್ಡರ್ ಆಗಿದ್ದಾನೆ ಬಾಗಪ್ಪ.

ಮೂರು ಆಯಾಮ..?
ಅಂದಹಾಗೆ, ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ವಕೀಲ ರವಿ ಅಗರಖೇಡ್ ಹತ್ಯೆಗೆ ಸಂಬಂಧಿಸಿದಂತೆ, ರಿವೆಂಜ್ ತಿರಿಸಿಕೊಂಡ್ರಾ ಹಂತಕರು..? ಅನ್ನೋ ಅನುಮಾನ ಶುರುವಾಗಿದೆ.

ಇನ್ನೂ ಹಣದ ವ್ಯವಹಾರಕ್ಕೆ ಬಾಗಪ್ಪನ ಮುಗಿಸಲು ಎಂಟ್ರಿ ಕೊಟ್ಟಿತ್ತಾ ಹೊಸ ಗ್ಯಾಂಗ್…? ಅನ್ನೋ ಡೌಟೂ ಇದೆ.

ಇತ್ತ ಬಾಗಪ್ಪ ಹರಿಜನ್ ವಿರೋಧಿ ಗ್ಯಾಂಗ್ ಚಂದಪ್ಪನ ಅಣ್ಣ ಯಲ್ಲಪ್ಪನ ಮಕ್ಕಳಿಂದ ನಡೆಯಿತಾ ಹತ್ಯಾಕಾಂಡ..? ಅನ್ನೋ ಬಗ್ಗೆ ಸೇರಿ, ಮೂರು ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

ಸ್ಥಳಕ್ಕೆ ಗಾಂಧಿ ಚೌಕ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಾಡಿಗೆ ಮನೆ ಮಾಡಿ ನಗರದ ಹೊರ ವಲಯದ ರೇಡಿಯೋ ಕೇಂದ್ರದ ಬಳಿ ವಾಸವಿದ್ದ ಬಾಗಪ್ಪ. ಬರುವ ದಿ.19 ರಂದು ವಿಜಯಪುರ ಕೋರ್ಟ್‌ಗೆ ಹಾಜರಾಗಲು ಬಂದಿದ್ದ ಬಾಗಪ್ಪ. ಒಂದಿಷ್ಟು ದಿನ ಉಳಿದುಕೊಂಡು ಕೋರ್ಟ್ ಗೆ ಹಾಜರಾಗಿ ಪ್ರಮುಖ ಸಾಕ್ಷಿ ನುಡಿಯಲಿದ್ದ ಬಾಗಪ್ಪ.

2017 ಆಗಷ್ಟ 8 ರಂದು ಕೋರ್ಟ್ ಆವರಣದಲ್ಲಿ ತನ್ನ ಮೇಲೆ ನಡೆದಿದ್ದ ಫೈರಿಂಗ್ ಕೇಸ್ ನಲ್ಲಿ ಸಾಕ್ಷಿ ನುಡಿಯಲು ಬಂದಿದ್ದ ಬಾಗಪ್ಪ. ಇನ್ನು ಇದೆ ಕಾರಣಕ್ಕೆ ವಿರೋಧಿ ಗ್ಯಾಂಗ್‌ಗಳಿಗೆ ಗೊತ್ತಾಗದಿರಲಿ ಎಂದು ನಗರದ ಹೊರ ವಲಯದಲ್ಲಿ ಬಾಡಿಗೆ ಮನೆ ಹಿಡಿದಿದ್ದ ಬಾಗಪ್ಪ ಹರಿಜನ್.

ಮನೆಯಲ್ಲಿ ಅಡುಗೆ ಮಾಡೊಕೆ ಸಂಜನಾ ಎನ್ನುವ ಸಂಬಂಧಿ ಮಹಿಳೆಯನ್ನು ಇರಿಸಿಕೊಂಡಿದ್ದ ಬಾಗಪ್ಪ. ಆದ್ರೆ ಅದು ಹೇಗೋ ಹಂತಕರಿಗೆ ಬಾಗಪ್ಪನ ಇರುವಿಕೆಯ ಮಾಹಿತಿ ಲಭ್ಯ. ಕೆಲ ದಿನಗಳಿಂದ ಹಂತಕರು ಬಾಗಪ್ಪ ಹತ್ಯೆಗೆ ಹೊಂಚು ಹಾಕಿರುವ ಸಂಶಯ ಮೂಡಿದೆ.

ಎಸ್ಪಿ ಹೇಳಿಕೆ..!
ಘಟನೆ ಕುರಿತು ಎಸ್ ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ವಿಜಯಪುರ ನಗರದ ಮದೀನಾ ನಗರದ ಬಾಡಿಗೆ ಮನೆಯಲ್ಲಿದ್ದ ಬಾಗಪ್ಪ ಹರಿಜನ್, ಇದೆ ಜಾಗದಲ್ಲಿ ನಾಲ್ಕೈದು ಜನರಿಂದ ಹತ್ಯೆ ಮಾಡಲಾಗಿದೆ.
ಕೊಡಲಿ ಸೇರಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದ್ದು, ಆಟೋದಲ್ಲಿ ನಾಲ್ಕೈದು ಜನರು ಬಂದು ಹತ್ಯೆ ಮಾಡಿದ್ದಾರೆ ಅಂತಾ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ‌ನೀಡಿದ್ದಾರೆ.

ಊಟ ಮಾಡಿಕೊಂಡು ಮನೆ ಎದುರು ಬಾಗಪ್ಪ ವಾಕಿಂಗ್ ಮಾಡುತಿದ್ದ ವೇಳೆ ಹತ್ಯೆಯಾಗಿದೆ. ಮಾರಕಾಸ್ತ್ರ ಹಾಗೂ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎಷ್ಟು ಜನರು ಬಂದಿದ್ದರು ನಿಖರ ಮಾಹಿತಿ ಇಲ್ಲ. ಮನೆಯವರು ನೀಡಿದ ಮಾಹಿತಿ ಆಧರಿಸಿ ಹೇಳ್ತಿದ್ದೇನೆ ಅಂದ್ರು

ಕರೆಂಟ್ ಕಟ್ ಮಾಡಿ ಹತ್ಯೆ ಮಾಡಿದ್ದ ಬಗ್ಗೆ ಮಾಹಿತಿ ಇಲ್ಲ. ಸಂಬಂಧಿಕರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಬಾಗಪ್ಪ ಮೇಲೆ 10 ಕೇಸ್‌ಗಳಿವೆ , ಈ ಪೈಕಿ 6 ಮರ್ಡರ್ ಕೇಸ್ ಇವೆ, 1993 ರಿಂದ ಬಾಗಪ್ಪನ ಕ್ರಿಮಿನಲ್ ಹಿಸ್ಟರಿ ಶುರುವಾಗಿದೆ. 2016-17ರಲ್ಲಿ ಬಾಗಪ್ಪನ ಮೇಲೆ ಸೆಕ್ಯೂರಿಟಿ ಕೇಸ್ ಹಾಕಲಾಗಿತ್ತು ಅಂತ ತಿಳಿಸಿದ್ರು.

ಎಲ್ಲ ಆಯಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ಟೀಂ ತಂಡವಾಗಿ ಕೆಲಸ ಮಾಡುತ್ತಿದೆ ಅಂತ ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ

error: Content is protected !!