ಮುಂಡಗೋಡಿನಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡುವಂತೆ ಮನವಿ..!

ಮುಂಡಗೋಡ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪಿಸುವಂತೆ ಇಂದು ಮುಂಡಗೋಡಿನ ರಾಯಣ್ಣ ಅಭಿಮಾನಿ ಬಳಗದಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಪಟ್ಟಣದ ಯಲ್ಲಾಪುರ-ಬಂಕಾಪುರ ರಸ್ತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆ ಅಂತಾ ನಾಮಕರಣ ಮಾಡಲಾಗಿದೆ. ಆ ಕುರಿತು ಪಟ್ಟಣ ಪಂಚಾಯತಿಯಲ್ಲಿ ದಾಖಲಾಗಿದೆ. ಆದ್ರೆ ತಾಲೂಕಿನ ಸುಮಾರು 50 ಕಿಮಿ ವ್ಯಾಪ್ತಿಯಲ್ಲಿ ಎಲ್ಲಿಯೂ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆಯಾಗಿಲ್ಲ‌. ಹೀಗಾಗಿ, ಪಟ್ಟಣದ ಕಂಬಾರಗಟ್ಟಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು, ಮುಂದಿನ ಪೀಳಿಗೆಗೆ ರಾಯಣ್ಣನವರ ಆದರ್ಶ, ತ್ಯಾಗ ಹಾಗೂ ದೇಶಭಕ್ತಿಯ ಸಂದೇಶ ನೀಡುವಂತಾಗಬೇಕು ಅಂತಾ ರಾಯಣ್ಣನ ಅಭಿಮಾನಿ ಬಳಗ, ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ಮೂಲಕ ಸಿಎಂ ಗೆ ಮನವಿ ಅರ್ಪಿಸಿದ್ರು‌.

ಈ ವೇಳೆ, ಅರುಣ ಬಜಂತ್ರಿ, ಶಿವಣ್ಣ ಕುಂದರಗಿ, ಅಯ್ಯಪ್ಪ ಬಜಂತ್ರಿ, ಬಸರಾಜ್ ಕುಂದರಗಿ, ಮಂಜುನಾಥ್ ಕುರುಬರ, ಮಂಜುನಾಥ್ ಕಟ್ಟಿಮನಿ, ಕೃಷ್ಣ ಕುಂದರಗಿ, ಪ್ರವೀಣ ಕಳಸಗೇರಿ, ಗುಡ್ಡಪ್ಪ ಸುಣಗಾರ, ರಾಜೇಶ್ ಕ್ಯಾಸಿನಕೆರಿ, ಆಸಿಫ್ ನದಾಫ್,
ಸಂಕೇತ ಗೌಡ್ರು ಸೇರಿ ಹಲವರು ಉಪಸ್ಥಿತರಿದ್ದರು.

 

error: Content is protected !!