ಮುಂಡಗೋಡ; ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ ಅನ್ನೋದು ಇದೆಯಾ ಅಥವಾ ಬೀಗ ಜಡಕೊಂಡು ಎಲ್ಲಾದ್ರೂ ಹಾಳಾಗಿ ಹೋಗಿದೆಯಾ..? ಇಂತಹದ್ದೊಂದು ಪ್ರಶ್ನೆ ಮುಂಡಗೋಡ ತಾಲೂಕಿನ ಮಂದಿ ಕೇಳ್ತಿದಾರೆ. ಯಾಕಂದ್ರೆ ತಾಲೂಕಿನ ಬಹುತೇಕ ರಸ್ತೆಗಳ ಸ್ಥಿತಿ ಹಡಾಲೆದ್ದು ಹೋಗಿದೆ. ಆದ್ರೆ, PWD ಅನ್ನೋ ಇಲಾಖೆಯ ಅಧಿಕಾರಿಗಳು ಮಾತ್ರ ಅದೇಲ್ಲೋ ಹೋಗಿ ಗಡದ್ದಾಗಿ ನಿದ್ದೆ ಮಾಡ್ತಿದಾರೆ.
ವಡಗಟ್ಟಾ- ಅಗಡಿ ರಸ್ತೆ ಕತೆ..!
ನಿಜ, ಈ ಲೋಕೋಪಯೋಗಿ ಇಲಾಖೆಯ ಅಡಿಯಲ್ಲೇ ಬರುವ ವಡಗಟ್ಟಾ-ಅಗಡಿ ರಸ್ತೆ, ಹುನಗುಂದದ ದೇಶಪಾಂಡೆ ನಗರದ ಹತ್ತಿರ ಹದಗೆಟ್ಟು ಹಳ್ಳ ಹಿಡಿದಿದೆ. ಕಳೆದ ಎರಡು ತಿಂಗಳ ಹಿಂದೆ ಇದೇ, ಲೋಕೋಪಯೋಗಿ ಇಲಾಖೆಯವರ ನಿರ್ಲಕ್ಷದಿಂದ ಬಸವಳಿದಿದ್ದ ಅಲ್ಲಿನ ಜನ ರಸ್ತೆ ಅಗೆದು ಆಕ್ರೋಶ ವ್ಯಕ್ತ ಪಡಿಸಿದ್ರು. ಆದ್ರೆ ಅವಾಗಷ್ಟೇ ಅದ್ಯಾರೋ ಸಿಬ್ಬಂದಿಗಳನ್ನ ಕಳಿಸಿ ತೆಪೆ ಹಾಕಿ ಹೋಗಿದ್ದ ಇಲಾಖೆ, ಅಲ್ಲಿಂದ ಈ ವರೆಗೂ ಇತ್ತ ತಿರುಗಿ ನೋಡಿಯೇ ಇಲ್ಲ.
ಕೈಕಾಲು ಮುರಿದು ಕೊಳ್ತಿದಾರೆ..!
ಹಾಗೆ, ತೆಪೆ ಹಾಕಿದ್ದ ವಡಗಟ್ಟಾ-ಅಗಡಿ ರಸ್ತೆಯಲ್ಲಿ ನಡೆದಾಡಲೂ ಆಗದ ಸ್ಥಿತಿ ಇದೆ. ನಿತ್ಯವೂ ಹತ್ತಾರು ಜನ ಬಿದ್ದು ಕೈಕಾಲು ಮುರಿದುಕೊಳ್ತಿದಾರೆ. ಅದೇಷ್ಟೋ ಕಾರುಗಳು ಇಲ್ಲಿ ಸಿಲುಕಿಕೊಂಡು ಪರಬಾರದ ಕಷ್ಟ ಪಡ್ತಿವೆ. ಹೀಗಿದ್ರೂ ಆ ಅಧಿಕಾರಿಗಳು ಮಾತ್ರ ನಿದ್ದೆಯಿಂದ ಈ ವರೆಗೂ ಎದ್ದೇ ಇಲ್ಲ. ಇಲ್ಲಿನ ಮಂದಿ ಅದೇಷ್ಟು ಬಾರಿ ಹೇಳಿದ್ರೂ ಅವ್ರ ನಿರ್ಲಕ್ಷ ಮಾತ್ರ ಹಾಗೇ ಇದೆ.
ಪ್ಯಾಚ್ ವರ್ಕ್ ದಂಧೆ..!
ಅಂದಹಾಗೆ, ಸದ್ಯ ಮುಂಡಗೋಡ ಲೋಕೋಪಯೋಗಿ ಇಲಾಖೆ ಅನ್ನೋದು ತಿಂದುಂಡು ತೇಗುವವರ ಅಡ್ಡೆಯಾಗಿ ಬಿಟ್ಟಿದೆ ಅನ್ನೋ ಅರೋಪಗಳಿವೆ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ಇದೆ. ಒಂದಿಷ್ಟು ಅಳಿದುಳಿದ ರಸ್ತೆಗಳಿಗೆ ಪ್ಯಾಚ್ ವರ್ಕ್ ಮಾಡಿಕೊಂಡು ಬಿಲ್ಲು ತೆಗೆದು ತಿನ್ನೋ ಹೀನ ಚಾಳಿ ಜಾರಿಯಲ್ಲಿದೆ. ಹಾಗಂತ, ಮುಂಡಗೋಡ ತಾಲೂಕಿನ ಮಂದಿ ಆರೋಪಿಸ್ತಿದಾರೆ. ಈ ಕಾರಣಕ್ಕಾಗಿಯೆ ತಾಲೂಕಿನ ರಸ್ತೆಗಳಲ್ಲಿ ಜನರು ನಡೆದಾಡಲೂ ಆಗದ ಸ್ಥಿತಿಯಲ್ಲಿವೆ. ನಿಜ ಅಂದ್ರೆ, ಇಲ್ಲಿನ ರಸ್ತೆಗಳಲ್ಲಿ ಈಗ ಡಾಂಬರು ಒಂದನ್ನು ಬಿಟ್ರೆ ಬೇರೇಲ್ಲವೂ ಇದೆ.
ಇಂಜಿನೀಯರ್ ಎಲ್ಲಿದ್ದಾನೆ..?
ಅಂದಹಾಗೆ, ಮುಂಡಗೋಡ ಲೋಕೋಪಯೋಗಿ ಇಲಾಖೆಯಲ್ಲಿ ಈಗ ಅದ್ಯಾವನೋ ಒಬ್ಬ ಇಂಜಿನೀಯರ್ ಇದ್ದಾನಂತೆ, ಆದ್ರೆ ಆತ ಜನರ ಕೈಗೆ ಸಿಗೋದೇ ಅಪರೂಪವಾಗಿದೆಯಂತೆ. ಕೆಲಸಗಳ ಗಂಧ ಗಾಳಿಯೂ ಗೊತ್ತಿರದ ಕೆಲವು ಸಿಬ್ಬಂದಿಗಳನ್ನ ಫಿಲ್ಡಿಗೆ ಕಳಿಸಿ ತಾನು ಅದೇಲ್ಲೊ ಎಸಿ ರೂಮಲ್ಲಿ ಕೂತಿರ್ತಾನೆ ಅನ್ನೊ ಆರೋಪಗಳು ಕೇಳಿ ಬರ್ತಿವೆ. ನಿಜ ಅಂದ್ರೆ, ವಡಗಟ್ಟಾ- ಅಗಡಿ ರಸ್ತೆಯ ಅದೊಂದು ಸಣ್ಣ ಕೆಲಸದಲ್ಲಿ ಆಗಿದ್ದೂ ಇದೆ ಕತೆ. ಈ ಇಂಜನೀಯರ್ ಪುಣ್ಯಾತ್ಮ ಅದೇಷ್ಟು ಬಾರಿ ಜನ ಗೋಗರೆದ್ರೂ ಇವತ್ತಿಗೂ ಆ ಸ್ಥಳಕ್ಕೆ ಭೇಟಿ ನೀಡಲೇ ಇಲ್ಲ. ಬೇಟಿ ನೀಡಿ ಅಲ್ಲಿನ ಅಸಲಿ ಸಮಸ್ಯೆ ಏನು ಅನ್ನೋ ಕುರಿತು ಅರ್ಥ ಮಾಡಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಬದಲಾಗಿ, ಮತ್ತದೇ ಸಿಬ್ಬಂದಿಗಳನ್ನು ಕಳಿಸಿ ಅದೇನು ಮಾಡ್ಕೊತಿರೋ ಮಾಡ್ಕೊಳ್ಳಿ ಅಂತಾ ಕೈ ಬಿಟ್ಟು ಕೂತು ಬಿಟ್ಟ.
ಪರಿಣಾಮ, ಆ ಸಿಬ್ಬಂದಿಗಳು ಬಂದು ತಮಗೆ ಹೇಗ ತಿಳಿಯತ್ತೋ ಹಾಗೆ ಪೈಪುಗಳನ್ನು ಜೋಡಿಸಿ ಅದರ ಮೇಲೆ ಮಣ್ಣು ಹಾಕಿ ಹೋಗಿ ಬಿಟ್ರು. ಈ ಕೆಲಸದ ಹೆಸ್ರಲ್ಲಿ ಅದೇಷ್ಟು ಹಣ ಎತ್ತುವಳಿ ಮಾಡಿದ್ರೊ ದೇವರಿಗೇ ಗೊತ್ತು, ಆದ್ರೆ, ಆ ರಸ್ತೆಯ ಪರಿಸ್ಥಿತಿ ಈಗ ಹೇಗಿದೆ ಅಂತಾ ಆ ಇಂಜಿನೀಯರ್ ಈ ಕ್ಷಣದವರೆಗೂ ಕಣ್ಣೆತ್ತಿಯೂ ನೋಡಿಲ್ಲ. ಹೀಗಾದಾಗ, ಜನರ ಆಕ್ರೋಶದ ಕಟ್ಟೆ ಒಡೆಯದೇ ಇರತ್ತಾ..? ಪ್ರತಿನಿತ್ಯ ಇಲ್ಲಿ ಎದ್ದು ಬಿದ್ದು ಸಾಗುವವರ ಶಾಪ ತಟ್ಟದೇ ಇರತ್ತಾ..?
ಗ್ರಾಪಂ ಪಿಡಿಓ ಮೌನ..!
ಇನ್ನು ಹುನಗುಂದದ ದುರಂತ ಅಂದ್ರೆ ಇಲ್ಲಿನ ಪಿಡಿಓ ಸಾಹೇಬ್ರು ಕೂಡ ಅದ್ಯಾಕೋ ಗೊತ್ತಿಲ್ಲ ಮೌನ ಅನುಷ್ಠಾನ ಕೈಗೊಂಡಿದ್ದಾರೆ.
ಇಲ್ಲಿನ ಸಮಸ್ಯೆಗಳ ಬಗ್ಗೆ ಕಾಲ್ ಮಾಡಿದ್ರೆ ತುಂಬಾ ಸ್ಪಂಧನೆಯ ರೀತಿಯಲ್ಲೇ ಮಾತನಾಡೋ ಪಿಡಿಓ, ಕೆಲಸಕ್ಕೆ ಮಾತ್ರ ಮೌನ ತಾಳುತ್ತಾರೆ. ಅಸಲು, ಇಲ್ಲಿನ ರಸ್ತೆಯ ಸಮಸ್ಯೆ ಅವ್ರು ಕಣ್ಣಾರೆ ಕಂಡಿದ್ದರೂ ತಮ್ಮ ಪಂಚಾಯತಿಯ ಮೂಲಕ ಸಂಬಂಧಪಟ್ಟ ಇಲಾಖೆಯವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಅನ್ನುವ ಕನಿಷ್ಟ ಯೋಚನೆಯೂ ಅವ್ರಿಗೆ ಬಂದಿಲ್ಲ. ಹೀಗಾಗಿ, ಇಲ್ಲಿನ ಸಮಸ್ಯೆಗಳು, ಸಮಸ್ಯೆಗಳಾಗೇ ಉಳಿತಿವೆ.
ಸಚಿವರೇ ಸ್ವಲ್ಪ ಗಮನಿಸಿ..!
ಕಳೆದ ಎರಡು ಮೂರು ತಿಂಗಳುಗಳಲ್ಲಿ ಈ ರಸ್ತೆಯ ಅವ್ಯವಸ್ಥೆಯಲ್ಲಿ ಸಾಕಷ್ಟು ಜನ ಸಂಕಷ್ಟ ಅನುಭವಿಸಿದ್ದಾರೆ. ಪಾಪ, ಅದೇಷ್ಟೋ ಮಹಿಳೆಯರು ಇಲ್ಲಿ ಬಿದ್ದು ಪರದಾಡಿದ್ದಾರೆ. ಬೈಕ್ ಸವಾರರು ಬಿದ್ದು ಪೆಟ್ಟು ತಿಂದಿದ್ದಾರೆ. ಕಾರುಗಳು ಕೆಸರಿನಡಿ ಸಿಲುಕಿ ಏಳಲಾಗದೇ ಒದ್ದಾಡಿವೆ. ಹೀಗಿದ್ದರೂ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಈ ಅಧಿಕಾರಿಗಳು ಮಾತ್ರ ಜನರ ಕೂಗಿಗೆ ಕ್ಯಾರೇ ಅಂತಿಲ್ಲ. ಹೀಗಾಗಿ ಜನ ಆಕ್ರೋಶಗೊಂಡಿದ್ದಾರೆ. ಹೀಗಾಗಿ, ನೀವಾದ್ರೂ ಒಮ್ಮೆ ನಿಮ್ಮ ಅಧಿಕಾರಿಗಳ ಕಿವಿ ಹಿಂಡಿ ಬುದ್ದಿ ಹೇಳಿ. ಜನರ ಮಾತು ಕೇಳದೇ ಇದ್ರೂ, ಬಹುಶಃ ಉಸ್ತುವಾರಿ ಸಚಿವರಾದ ತಮ್ಮ ಮಾತನ್ನಾದ್ರೂ ಕೇಳ್ತಾರೆನೋ..? ಆ ಬರವಸೆ ಜನರಿಗಿದೆ.. ಆದ್ರೆ, ಚರ್ಮ ದಪ್ಪ ಇದ್ದವರಿಗೆ ಏನ್ ಮಾಡೋಕಾಗತ್ತೆ ಅಲ್ವಾ..? ಇದು ನಮ್ಮ ದುರಂತ..!