ಮುಂಡಗೋಡಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಾಚಣಕಿ ಡ್ಯಾಂ ನಲ್ಲಿ ಶವವಾಗಿ ಪತ್ತೆ..!

ಮುಂಡಗೋಡಿನಿಂದ ನಾಪತ್ತೆಯಾಗಿದ್ದ ವ್ಯಕ್ತಿ ಬಾಚಣಕಿ ಡ್ಯಾಂ ನಲ್ಲಿ ಶವವಾಗಿ ಪತ್ತೆ..!

ಮುಂಡಗೋಡ ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ನಿಂದ ಕಳೆದ ರವಿವಾರ ಆಗಷ್ಟ 13 ರಂದು ನಾಪತ್ತೆಯಾಗಿದ್ದ ವ್ಯಕ್ತಿ ತಾಲೂಕಿನ ಬಾಚಣಕಿ ಡ್ಯಾಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇಂದು ಬೆಳಿಗ್ಗೆಯಷ್ಟೇ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಕುಟುಂಬಸ್ಥರು ಹುಡುಕಿ ಕೊಡುವಂತೆ ಮನವಿ ಮಾಡಿದ್ದರು. ಆದ್ರೀಗ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಕಂಬಾರಗಟ್ಟಿ ಪ್ಲಾಟಿನ ಬಸವರಾಜ್ ಮಲ್ಲಪ್ಪ ಇಳಿಗೇರ್ (49), ಎಂಬುವವನೇ ಶವವಾಗಿ ಪತ್ತೆಯಾಗಿದ್ದು, ಇಂದು ಶವ ಜಲಾಶಯದಲ್ಲಿ ತೇಲಾಡುತ್ತಿರೋದನ್ನು ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಆಗಮಿಸಿರೋ ಮುಂಡಗೋಡ ಪೊಲೀಸರು ಶವ ಹೊರತೆಗೆದಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.

ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?

ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ರೂಮರ್ರು.. ಅಷ್ಟಕ್ಕೂ, ಹೆಬ್ಬಾರ್ ಸಾಹೇಬ್ರು ಮತ್ತೆ “ಘರ್ ವಾಪಸಿ” ಅಗ್ತಾರಾ..? ಏನಿದೆ ಲೆಕ್ಕಾಚಾರ..?

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಸುದ್ದಿಯಾಗ್ತಿದೆಯಾ..? ರಾಜ್ಯ ರಾಜಕಾರಣದಲ್ಲಿ ಸದ್ಯ ಯಲ್ಲಾಪುರ ಕ್ಷೇತ್ರವನ್ನು ಬಹುಶಃ ಓರೇಗಣ್ಣಿನಿಂದ ನೋಡುವಂತಹ ಊಹಾಪೋಹಗಳು ಜಾರಿಯಲ್ಲಿವೆ. ಯಾಕಂದ್ರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವಲಸಿಗರ ಟೀಂ ನಲ್ಲಿ ಕೆಲವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗೋದು ಪಕ್ಕಾ ಎನ್ನುವಂತಹ ಮಾತುಗಳು ಕೇಳಿ ಬರ್ತಿವೆ. ಅದ್ರಲ್ಲೂ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರೂ ಕಾಂಗ್ರೆಸ್ ಗೆ ಸೇರ್ತಾರೆ ಅನ್ನೋ ಸುದ್ದಿಗಳು ಹರಿದಾಡ್ತಿದೆ. ಆದ್ರೆ, ಇದೇಲ್ಲ ಜಸ್ಟ್ ರೂಮರ್ರು ಅಂತಾ ಶಾಸಕರ ಆಪ್ತ ವಲಯ ಸರಾಸಗಾಟಾಗಿ ತಳ್ಳಿ ಹಾಕ್ತಿದೆ. ನಿಜಕ್ಕೂ ಸಾಧ್ಯವಾ..? ಅಸಲು, ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿಯನ್ನು ಸದ್ಯ ಪ್ರಬಲವಾಗಿಯೇ ಮುನ್ನಡೆಸ್ತಿರೋ ಶಾಸಕ ಶಿವರಾಮ್ ಹೆಬ್ಬಾರ್, ಇಂತಹದ್ದೊಂದು ಪಕ್ಷಾಂತರದ ತೀರ್ಮಾನ ಕೈಗೊಳ್ಳೊಕೆ ಸಾಧ್ಯವಾ..? ಇಂತಹ ಪ್ರಶ್ನೆಗಳು ಸಹಜವಾಗೇ ಕಾಡ್ತಿವೆ. ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಗಾಳಿ ಬೀಸಿ, ಗೆಲ್ಲೋದೇ ಅನುಮಾನ ಅನ್ನೊ ವಾತಾವರಣ ಇದ್ದಾಗಲೇ ಗೆದ್ದು ಬಂದವರು ಹೆಬ್ಬಾರ್. ಕ್ಷೇತ್ರದಲ್ಲಿ ಅದೇಂತದ್ದೇ ವಾತಾವರಣ ಇದ್ರೂ ನಾನು ಗೆಲ್ಲೋದೇ ಫಿಕ್ಸು ಅಂತ ಎದೆ ತಟ್ಟಿ ಹೇಳುವ...

ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರ ಮಿಂಚಿನ ದಾಳಿ, ಟಿಬೇಟಿಯನ್ ಕ್ಯಾಂಪ್ ಬಳಿ ಗಾಂಜಾ “ದಂಧೆ” ಗಿಳಿದಿದ್ದ ಇಬ್ಬರು ಅಂದರ್..!

ಮುಂಡಗೋಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಎಳೆದು ತಂದಿದ್ದಾರೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕಾಲೋನಿ ನಂಬರ್ ಒಂದರ ಬಳಿ ಇಬ್ಬರನ್ನು ಹೆಡೆಮುರಿ ಕಟ್ಟಿದ್ದಾರೆ. 948 ಗ್ರಾಂ ಗಾಂಜಾ..! ಅಂದಹಾಗೆ, ಪಕ್ಕಾ ಮಾಹಿತಿಗಳ ಆಧಾರದಲ್ಲಿ ಅಕ್ರಮಿಗಳ ಬೆನ್ನು ಬಿದ್ದಿದ್ದ ಪೊಲೀಸರು ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಡಗೋಡ ನೆಹರು ನಗರದ ಸಂದೇಶ ಸಂಗಪ್ಪ ಕೋಕರೆ, ತಾಲೂಕಿನ ಮಜ್ಜಿಗೇರಿಯ ರಿಯಾಜ್ ಅಹ್ಮದ್ ಹಜರೆಸಾಬ್ ಮುಗಳಿಕಟ್ಟಿ ಎಂಬುವ ಇಬ್ಬರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ. ಇವ್ರಿಂದ ಬರೋಬ್ಬರಿ 948 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ಏನಿಲ್ಲವೆಂದ್ರೂ 10 ಸಾವಿರ ರೂಪಾಯಿ. ಇದ್ರ ಜೊತೆ 550 ರೂ. ನಗದು ಸೇರಿದಂತೆ ಮಾರಾಟಕ್ಕೆ ಬಳಸಿದ್ದ ವಸ್ತುಗಳನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ. ಸಿಪಿಐ ಬರಮಪ್ಪ ಲೋಕಾಪುರ್ ನೇತೃತ್ವದಲ್ಲಿ ಪಿಎಸ್ಐ ಯಲ್ಲಾಲಿಂಗ ಕುನ್ನೂರು, ಕ್ರೈಂ ಪಿಎಸ್ ಐ ಹನ್ಮಂತಪ್ಪ ವಡಗುಂಟಿ, ಸಿಬ್ಬಂದಿಗಳಾದ ಅನ್ವರ್ ಖಾನ್ , ಸಲೀಂ ಕೊಲ್ಲಾಪುರ,...

ಇಂದಿರಾನಗರ ಬಳಿ ಬೈಕಿಗೆ ಕಾರ್ ಡಿಕ್ಕಿ, ಕೊಪ್ಪ ಗ್ರಾಮದ ಬೈಕ್ ಸವಾರನಿಗೆ ಗಾಯ..!

ಇಂದಿರಾನಗರ ಬಳಿ ಬೈಕಿಗೆ ಕಾರ್ ಡಿಕ್ಕಿ, ಕೊಪ್ಪ ಗ್ರಾಮದ ಬೈಕ್ ಸವಾರನಿಗೆ ಗಾಯ..!

ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಇಂದಿರಾನಗರ ಬಳಿ ಕಾರು ಬೈಕ್ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರನಿಗೆ ಗಾಯವಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನ ಪಾದದ ಮಾಂಸ ಹೊರ ಬಿದ್ದಿದೆ. ಹೀಗಾಗಿ, ಸದ್ಯ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ. ಕೊಪ್ಪ (ಇಂದೂರು) ಗ್ರಾಮದ ಬಸವರಾಜ್ ಹಡಪದ ಎಂಬುವವನೇ ಗಾಯಗೊಂಡಿರೋ ಬೈಕ್ ಸವಾರನಾಗಿದ್ದಾನೆ. ಮುಂಡಗೋಡ ಕಡೆಯಿಂದ ಕಲಘಟಗಿ ಕಡೆಗೆ ಹೋಗುತ್ತಿದ್ದ ಕಾರ್, ಬೈಕ್ ಗೆ ಡಿಕ್ಕಿಯಾಗಿದೆ. ಹೀಗಾಗಿ, ಕಾರಿನ ಮುಂಬಾಗ ಕೂಡ ನುಜ್ಜುಗುಜ್ಜಾಗಿದೆ. ಅಲ್ಲದೇ ಬೈಕ್ ಕೂಡ ಡಿಕ್ಕಿಯ ರಭಸಕ್ಕೆ ರಸ್ತೆ ಬದಿಯಲ್ಲಿ ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ************

ಬಾಚಣಕಿಯಲ್ಲಿ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ, ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಲ್ಲಿ ಧ್ವಜಕ್ಕೆ ಇದೇಂತಾ ಗತಿ..? ಏನ್ ಮಾಡ್ತಿದ್ದಿರಿ ಅಧಿಕಾರಿಗಳೆ..?

ಬಾಚಣಕಿಯಲ್ಲಿ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ, ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿಯಲ್ಲಿ ಧ್ವಜಕ್ಕೆ ಇದೇಂತಾ ಗತಿ..? ಏನ್ ಮಾಡ್ತಿದ್ದಿರಿ ಅಧಿಕಾರಿಗಳೆ..?

 ಇಡೀ ದೇಶ ಇವತ್ತು ರಾಷ್ಟ್ರಭಕ್ತಿಯ ಸಿಹಿ ಸಂಭ್ರಮದಲ್ಲಿದೆ. 77 ನೇಯ ಸ್ವತಂತ್ರ ದಿನಾಚರಣೆಯ ಮಹಾ ಸಂಭ್ರಮದಲ್ಲಿ ಎಲ್ಲೆಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿವೆ. ಆದ್ರೆ, ಮುಂಡಗೋಡ ತಾಲೂಕಿನ ಇದೊಂದು ಗ್ರಾಮದಲ್ಲಿ ಸರ್ಕಾರದ ಆದೇಶವಿದ್ದರೂ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ ಮಾಡಲಾಗಿದೆ. ಧ್ವಜ ಸ್ತಂಬ ಕಟ್ಟಿ, ಹೆಮ್ಮೆಯ ಧ್ವಜವನ್ನೂ ಕಂಬಕ್ಕೆ ಏರಿಸಿಟ್ಟು, ಇನ್ನೇನು ಧ್ವಜಾರೋಹಣ ಮಾಡಬೇಕಿದ್ದವರು ಭಾರೀ ಅಪಮಾನ ಮಾಡಿದ್ದಾರೆ. ಧ್ವಜ ಹಾರಿಸದೇ ಇಡೀ ಧ್ವಜ ಸ್ತಂಬವನ್ನೇ ಕಿತ್ತು ಹಾಕಿ ಏನೂ ಆಗಿಲ್ಲದವರಂತೆ ಬೆಪ್ಪಗೆ ಕುಳಿತಿದ್ದಾರೆ. ನಡೆದದ್ದು ಎಲ್ಲಿ..? ಅಂದಹಾಗೆ ಇದು ನಡೆದಿದ್ದು ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ಅಷ್ಟಕ್ಕೂ ಇದನ್ನ ಬಾಚಣಕಿ ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿ ಅನ್ನಬೇಕೋ ಅಥವಾ ಹುಂಬತನ ಅನ್ನಬೇಕೋ ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ಸ್ವತಂತ್ರ ದಿನಾಚರಣೆ ದಿನ ಇಲ್ಲಿನ ಅಮೃತ ಸರೋವರದ ಹತ್ತಿರ ಹಾರಾಡಬೇಕಿದ್ದ ಧ್ವಜ ಹಾರಾಡಲೇ ಇಲ್ಲ. ಬದಲಾಗಿ, ಸಂಪೂರ್ಣ ತಯಾರಿ ಆಗಿದ್ದರೂ, ಇಡೀ ಧ್ವಜ ಸ್ತಂಭವನ್ನೇ ಅನಾಮತ್ತಾಗಿ ಕಿತ್ತು ಹಾಕಿದ್ದಾರೆ. ಇದ್ರೊಂದಿಗೆ ರಾಷ್ಟ್ರಧ್ವಜಕ್ಕೆ ಭಾರೀ ಅಪಮಾನ...

ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಧ್ವಜಾರೋಹಣಕ್ಕೆ ಹೋಗುತ್ತಿದ್ದ ಶಾಲಾ ಶಿಕ್ಷಕ ಬೈಕ್ ಅಪಘಾತದಲ್ಲಿ ಸಾವು..!

ಕುಮಟಾ : ಧ್ವಜಾರೋಹಣಕ್ಕೆಂದು ಬೈಕ್ ಮೇಲೆ ಶಾಲೆಗೆ ಹೋಗುತ್ತಿದ್ದ ಶಿಕ್ಷಕರೊಬ್ಬರು ದಾರುಣ ಸಾವು ಕಂಡಿದ್ದಾರೆ. ಬೋಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮೀಪ‌ ಘಟನೆ ನಡೆದಿದ್ದು, ಅಪಘಾತದಲ್ಲಿ ಹೆಗಡೆ ಗ್ರಾಮದ ಮೇಲಿನಕೇರಿ ನಿವಾಸಿಯಾಗಿದ್ದ ಗೋಪಾಲ ಪಟಗಾರ (50) ಮೃತಪಟ್ಟ ಶಿಕ್ಷಕರಾಗಿದ್ದಾರೆ. ಇವರು ಗುಡೆಅಂಗಡಿ ಶಾಲೆ ಶಿಕ್ಷಕರಾಗಿದ್ದು, ಧ್ವಜಾರೋಹಣಕ್ಕಾಗಿ ಬೆಳಿಗ್ಗೆ ಹೆಗಡೆಯ ಮೇಲಿನ ಕೇರಿಯಲ್ಲಿರುವ ತಮ್ಮ ಮನೆಯಿಂದ ಬೈಕ್ ಮೇಲೆ‌ ಶಾಲೆಗೆ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬಂದ ಬೋಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಿಕ್ಷಕ ಗೋಪಾಲ ಪಟಗಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಧ್ವಜಾರೋಹಣ, ಹೇಗಿತ್ತು ಗೊತ್ತಾ ಸಂಭ್ರಮ..!

ಮುಂಡಗೋಡ ತಾಲೂಕಿನಲ್ಲಿ ಸಂಭ್ರಮದ ಧ್ವಜಾರೋಹಣ, ಹೇಗಿತ್ತು ಗೊತ್ತಾ ಸಂಭ್ರಮ..!

ಮುಂಡಗೋಡ ತಾಲೂಕಿನೆಲ್ಲೆಡೆ 77 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಜೋರಾಗಿತ್ತು. ಬೆಳಿಗ್ಗೆಯಿಂದ ತಾಲೂಕಿನ ಪ್ರತೀ ಗ್ರಾಮಗಳಲ್ಲೂ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುಂಡಗೋಡಿನಲ್ಲಿ..! ಇನ್ನು ತಾಲೂಕಾಡಳಿತದಿಂದ ತಾಲೂಕಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಿತು. ತಹಶೀಲ್ದಾರ್ ಶಂಕರ್ ಗೌಡಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ರು.ಮಾಜಿ ಶಾಸಕ ವಿ.ಎಸ್.ಪಾಟೀಲ್, ಮಾಜಿ ಜಿಪಂ ಸದಸ್ಯ ಎಲ್.ಟಿ.ಪಾಟೀಲ್, ಸಿಪಿಐ ಬರಮಪ್ಪ ಲೋಕಾಪುರ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ತಾಲೂಕಿನ ಹಲವು ಸಾಧಕರಿಗೆ ತಾಲೂಕಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಪೊಲೀಸ್ ಠಾಣೆಯಲ್ಲಿ..! ಮುಂಡಗೋಡ ಪೊಲೀಸ್ ಠಾಣೆಯಲ್ಲಿಯೂ 77ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಯೂನಿಫಾರ್ಮ್ ತೊಟ್ಟ ಪೊಲೀಸ್ ಅಧಿಕಾರಿಗಳು, ಪೊಲೀಸ್ ಪೇದೆಗಳು ಶಿಸ್ತಿನಿಂದ ಧ್ವಜಾರೋಹಣದಲ್ಲಿ ಪಾಲ್ಗೊಂಡರು. ನೂತನ ಸಿಪಿಐ ಬರಮಪ್ಪ ಲೋಕಾಪುರ್ ಧ್ಜಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದ್ರು. ಹುನಗುಂದದಲ್ಲಿ..! ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಆವರಣದಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ ಷರೀಫಸಿಂಗ್ ಶಿಗ್ಗಟ್ಟಿ ಧ್ವಜಾರೋಹಣ ನೆರವೇರಿಸಿದ್ರು....

ಮುಂಡಗೋಡಿನಲ್ಲಿ ಸಿಕ್ತು ಬಳೆಯ ಚೀಲ, ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ  ಅಟೋ ಚಾಲಕ..!

ಮುಂಡಗೋಡಿನಲ್ಲಿ ಸಿಕ್ತು ಬಳೆಯ ಚೀಲ, ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ..!

ಮುಂಡಗೋಡ: ಬಸ್ಸಿನಲ್ಲಿ 50 ಸಾವಿರ ಮೌಲ್ಯದ ಬಳೆ ಇದ್ದ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಗೆ ಪೊಲೀಸರ ಮೂಲಕ ವಾಪಸ್ ನೀಡಲಾಗಿದೆ. ಮುಂಡಗೋಡಿನ ಆಟೋ ಚಾಲಕನ ಸಮಯ ಪ್ರಜ್ಞೆ ಹಾಗೂ ಪ್ರಮಾಣಿಕತೆಯಿಂದ ಒಂದೊಳ್ಳೆ ಕೆಲಸವಾಗಿದೆ. ಅಂದಹಾಗೆ, ನಿನ್ನೆ ಶನಿವಾರ ಬನವಾಸಿಯ ಶಾರದಾ ಪಕ್ಕೀರಪ್ಪ ಬಜಂತ್ರಿ, ಎಂಬುವವರು ಬಸ್ಸಿನಲ್ಲಿ ತಮ್ಮ ಚೀಲವನ್ನು ಕಳೆದುಕೊಂಡಿದ್ದರು. ಹಾಗೆ ಕಳೆದುಕೊಂಡಿದ್ದ ಚೀಲದಲ್ಲಿ ಬರೋಬ್ಬರಿ 50 ಸಾವಿರ ರೂ. ಮೌಲ್ಯದ ಬಳೆ ಇತ್ತು. ಮುಂಡಗೋಡಿನ ಪಟ್ಟಣ ಪಂಚಾಯತಿ ಎದುರು ಅದ್ಯಾರೋ ಏನೋ ಆ ಚೀಲವನ್ನು ಇಳಿಸಿ ಬಿಟ್ಟಿದ್ದರು. ಹೀಗಾಗಿ, ಆ ಮಹಿಳೆಗೆ ಮಳಗಿಗೆ ಹೋದ ನಂತರ ತನ್ನ ಚೀಲ ಕಳೆದುಕೊಂಡಿದ್ದರ ಬಗ್ಗೆ ಗಮನಕ್ಕೆ ಬಂದಿದೆ. ಆಟೋ ಚಾಲಕನ ನಿಯತ್ತು..! ಅಸಲು, ಹಾಗೆ ಅನಾಥವಾಗಿ ಬಿದ್ದಿದ್ದ ಚೀಲ ಮುಂಡಗೋಡಿನ ಆಟೋ ಚಾಲಕ ಬಸವರಾಜ್ ನಿಡಗುಂದಿ ಎಂಬುವರ ಕಣ್ಣಿಗೆ ಬಿದ್ದಿದೆ. ಇದೇನು ಇರಬಹುದು ಅಂತಾ ಚೀಲ ತೆರೆದು ನೋಡಿದಾಗ ಅದ್ರಲ್ಲಿ ಬಳೆಗಳು ಇರೋದು ತಿಳಿದಿದೆ. ತಕ್ಷಣವೇ ಆ ಚೀಲದಲ್ಲಿ ತಡಕಾಡಿದ ಆಟೋ ಚಾಲಕನಿಗೆ ಸಂಬಂಧಪಟ್ಟ...

ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

ಕರೆಂಟ್ ಶಾಕ್ ಹೊಡೆದು ಅಜ್ಜ, ಅಜ್ಜಿ ಮೊಮ್ಮಗಳ ದುರಂತ ಸಾವು, ವಾಚಮನ್ ಕೆಲಸ ಮಾಡ್ತಿದ್ದ ಕುಟುಂಬದ ಮೂವರ ದುರ್ಮರಣ..!

 ಬೆಳಗಾವಿ: ಕರೆಂಟ್ ಶಾಕ್ ಹೊಡೆದು ಮೂವರು ಸ್ಥಳದಲ್ಲಿ ಸಾವು ಕಂಡ ದಾರುಣ ಘಟನೆ ಬೆಳಗಾವಿಯ ಶಾಹುನಗರದಲ್ಲಿ ಬೆಳ್ಳಂಬೆಳಗ್ಗೆ ನಡೆದಿದೆ. ಅಜ್ಜ, ಅಜ್ಜಿ, ಮೊಮ್ಮಗಳು ಸ್ಥಳದಲ್ಲಿ ಸಾವು ಕಂಡಿದ್ದಾರೆ. ಈರಪ್ಪ ರಾಠೋಡ, ಶಾಂತವ್ವ ರಾಠೋಡ, 3 ನೇ ತರಗತಿ ಓದುತ್ತಿದ್ದ ಅನ್ನಪೂರ್ಣಾ ರಾಠೋಡ ಮೃತಪಟ್ಟ ದುರ್ದೈವಿಗಳು. ನಿರ್ಮಾಣ ಹಂತದ ಮನೆಗೆ ವಾಚಮನ್ ಕೆಲಸ ಮಾಡುತ್ತಿದ್ದ ರಾಠೋಡ ಕುಟುಂಬ, ಏಕಕಾಲದಲ್ಲಿ ಮೂವರಿಗೆ ಕರೆಂಟ್ ಶಾಕ್ ಹೊಡೆದು ದುರ್ಘಟನೆ ನಡೆದಿದೆ. ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾ ನಿವಾಸಿಗಳು ಅಂತಾ ತಿಳಿದು ಬಂದಿದೆ. ಇನ್ನು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ ಸ್ಥಳಕ್ಕೆ ಎಪಿಎಂಸಿ ಠಾಣೆ ಸಿಪಿಐ ವಿಶ್ವನಾಥ ಕಬ್ಬೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ತಡಸ ಬಳಿ ತಿಮ್ಮಾಪುರ ಕ್ರಾಸನಲ್ಲಿ ಭೀಕರ ಅಪಘಾತ, ಮದುವೆ ಆಗಬೇಕಿದ್ದ ಜೋಡಿ ಸ್ಥಳದಲ್ಲೇ ಸಾವು..!

ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿ ನಸುಕಿನ ಜಾವ ಭೀಕರ ಅಪಘಾತವಾಗಿದೆ. ಲಾರಿ ಹಾಗೂ ಕಾರು ಮುಖಾಮುಕಿ ಡಿಕ್ಕಿಯಾದ ಪರಿಣಾಮ, ಇನ್ನೇನು ಮದುವೆ ಆಗಬೇಕೆಂಬ ಕನಸು ಹೊತ್ತಿದ್ದ ಜೋಡಿ ಸ್ಥಳದಲ್ಲೇ ದಾರುಣ ಸಾವು ಕಂಡಿದೆ. ಮತ್ತಿಬ್ಬರಿಗೆ ಗಂಭೀರ ಗಾಯವಾಗಿದೆ. ಮನೋಹರ್ (38), ಪ್ರಿಯಾಂಕಾ(23) ಸಾವನ್ನಪ್ಪಿದ ದುರ್ದೈವಿಗಳು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪುರ ಕ್ರಾಸ್ ಬಳಿಯ NH4 ರಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬಾಂಬೆಗೆ ಹೊರಟಿದ್ದ ಇವರ, ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೃತರು ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ. ಮೃತ ಮನೋಹರ್ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯದಲ್ಲೆ ಮನೋಹರ್ ಗೂ ಪ್ರಿಯಾಂಕಗೂ ಮದುವೆ ನಿಶ್ಚಯ ಆಗಿತ್ತು. ಸ್ಥಳಕ್ಕೆ ತಡಸ ಪೋಲಿಸರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ತಡಸ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!