ಮುಂಡಗೋಡ: ರಾಜ್ಯ ಬಿಜೆಪಿ ಸರಕಾರ 11 ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸಹಾಯ ಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ನೆರವಾಗುವ ನಿಟ್ಟಿನಲ್ಲಿ ತಾಲೂಕಾ ಬಿಜೆಪಿ ಯುವ ಮೋರ್ಚಾ “ಶ್ರಮಿಕರಿಗೆ ನೆರವು ” ಕಾರ್ಯಕ್ರಮ ಆಯೋಜಿಸಿದೆ. ಯಲ್ಲಾಪುರ ಕ್ಷೇತ್ರದ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಕಾರ್ಯಕ್ರಮ ಉದ್ಘಾಟಿಸಿ, ಅಸಂಘಟಿತ ಕಾರ್ಮಿಕರು ಸರ್ಕಾರದ ಘೋಷಿಸಿರೋ ಸಹಾಯಧನ ಪಡೆದುಕೊಳ್ಳುವಂತೆ ಕರೆ ನೀಡಿದ್ರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ, ಯುವಮೋರ್ಚಾ ತಾಲೂಕಾ ಅಧ್ಯಕ್ಷ ಗಣೇಶ ಶಿರಾಲಿ, ಪಟ್ಟಣ ಪಂಚಾಯತ ಉಪಾಧ್ಯಕ್ಷ ಮಂಜುನಾಥ ಹರ್ಮಲಕರ್ , ಪಕ್ಷದ ಮುಖಂಡರಾದ ಉಮೇಶ್ ಬಿಜಾಪುರ, ರವಿ ಹಾವೇರಿ, ಹಾಗೂ ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು ಕಾರ್ಮಿಕರು ಉಪಸ್ಥಿತರಿದ್ದರು.
Top Stories
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಇಂದೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ..!
ಮುಂಡಗೋಡ: ತಾಲೂಕಿನ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ 7 ಜನ ಆಶಾ ಕಾರ್ಯಕರ್ತೆಯರು ಕೊರೋನಾ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಆಶಾ ಕಾರ್ಯಕರ್ತರ ಸೇವೆ ಪರಿಗಣಿಸಿ ತಾಲೂಕಿನೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸನ್ಮಾನ ಸಮಾರಂಭದಲ್ಲಿ ಇಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಅರುಣ ಸಿಂಗ್ “ಪರ್ಸನಲ್” ಭೇಟಿಗೆ 28 ಶಾಸಕರು ರೆಡಿ..! ನಾಳೆ ಬೆಳಿಗ್ಗೆ ಮೂಹೂರ್ತ ಫಿಕ್ಸ್..!!
ಬೆಂಗಳೂರು: ಕೇಸರಿ ಪಡೆಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿ 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ. ಯಾವಾಗ ಭೇಟಿ..? ನಾಳೆ ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಹಾಗೂ ಕಾರವಾರ ಶಾಸಕಿ ರೂಪಾಲಿ ನಾಯಕ್ ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ. ಯಾರ್ಯಾರು ಆ ಶಾಸಕರು..? ಹರತಾಳು ಹಾಲಪ್ಪ, ಸಿದ್ದು ಸವದಿ, ರಾಜೇಶ ಗೌಡ, ಅಭಯ ಪಾಟೀಲ, ಕುಮಾರ ಬಂಗಾರಪ್ಪ, ಸಿ.ಪಿ.ಯೋಗೀಶ್ವರ, ರೂಪಾಲಿ ನಾಯಕ, ಸುನೀಲ ಕುಮಾರ, ಪರಪ್ಪ ಮುನವಳ್ಳಿ, ಅಪ್ಪಚ್ಚು ರಂಜನ್, ಉದಯ ಗರುಡಾಚಾರ, ಜ್ಯೋತಿ ಗಣೇಶ, ಪ್ರೀತಂ ಗೌಡ, ಅರವಿಂದ ಬೆಲ್ಲದ್, ಮಹೇಶ ಕುಮಠಳ್ಳಿ, ಸೋಮಶೇಖರ ರೆಡ್ಡಿ, ಸಿದ್ದು ಸವದಿ, ಮಹಾದೇವಪ್ಪ ಯಾದವಾಡ ಸೇರಿದಂತೆ 28...
ಹಣ್ಣಿನ ಗಾಡಿಯಲ್ಲಿ ಗೋಮಾಂಸ ಸಾಗಾಟ: ಮೂವರು ಆರೋಪಿಗಳು ಅಂದರ್..!
ಭಟ್ಕಳ: ಹಣ್ಣಿನ ಗಾಡಿಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸ್ರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೊಸ್ಟ್ ನಲ್ಲಿ ಕಾರ್ಯಾಚರಣೆ ನಡೆಸಿ, 500 ಕೆಜಿಗೂ ಅಧಿಕ ಗೋಮಾಂಸ ವಶಕ್ಕೆ ಪಡೆಯಲಾಗಿದೆ. ಹಾನಗಲ್ ತಾಲೂಕಿನ ಮೌಲಾ ಅಲಿ ಬಾಷಾ ಸಾಬ್, ಭಟ್ಕಳದವರಾದ ಜೀಲಾನಿ ಮೋಹಿದ್ದೀನ್, ಮುಝರಪ್ ಎಂಬುವ ಆರೋಪಿಗಳೆ ಬಂಧನಕ್ಕೊಳಗಾದವರು. ಈ ಕುರಿತು, ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೆ ನೀರಿನಲ್ಲಿ ತೇಲಿ ಬಂದ ಶವ ಯಾರದ್ದು..?
ಹುಬ್ಬಳ್ಳಿ: ಅಪರಿಚಿತ ಶವವೊಂದು ನೀರಿನಲ್ಲಿ ತೇಲಿಕೊಂಡು ಬಂದಿರುವ ಘಟನೆ ಹುಬ್ಬಳ್ಳಿಯ ಹೆಗ್ಗೇರಿಯ ನಾಲಾದಲ್ಲಿ ನಡೆದಿದೆ. ಸುಮಾರು 35 ವರ್ಷದ ಆಸುಪಾಸಿನ ವ್ಯಕ್ತಿಯ ಶವವು ನಾಲಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಯುವ ಮುಖಂಡ ಪರ್ವೀಜ್ ಕಟ್ಟಿಮನಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರು ಶವವನ್ನು ಹೊರ ತೆಗೆದು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಬಗ್ಗೆ ಹಾಗೂ ಆತನ ಸಾವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
15 ವಾರ್ಡಿನ ಜನರ ನೀರಿನ ಬವಣೆ ನೀಗಿಸಿದ ಪ ಪಂ ಅಧ್ಯಕ್ಷೆ..!
ದೇವರಹಿಪ್ಪರಗಿ: ಕಳೆದ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ವಾರ್ಡ್ ನಂ-15 ಮತದಾರರಿಗೆ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದೆ ಇಂದು ಅವರ ನೀರಿನ ಬವಣೆ ನೀಗಿಸಿ ಋಣ ತೀರಿಸಿ ದಂತಾಗಿದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷರ ಪ್ರತಿನಿಧಿಯಾದ ಮುನೀರ ಅಹ್ಮದ್ ಮಳಖೇಡ ಹೇಳಿದರು. ಪಟ್ಟಣದಲ್ಲಿ ಬುಧವಾರದಂದು ಪ ಪಂ 15ನೇ ಹಣಕಾಸಿನ ಯೋಜನೆಯಲ್ಲಿ ವಾರ್ಡ ನಂ-15 ರ ಕುಡಿಯುವ ನೀರಿನ ಪೈಪ್ ಲೈನ್ ಸುಮಾರು 4 ಲಕ್ಷ ರೂ ವೆಚ್ಚದ ಕಾಮಗಾರಿ ಆರಂಭಿಸಿ ಮಾತನಾಡಿದ ಅವರು ನಮ್ಮ ವಾರ್ಡಿನ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಮುಕ್ತವಾಗಿ ನೆರವೇರಿಸಿದ್ದು ಸಂತೋಷವಾಗಿದೆ. ಕಳೆದ ತಿಂಗಳ ಬೋರ್ವೆಲ್ ಹಾಕಿಸಿದ್ದು ಹಾಗೂ ಶೀಘ್ರದಲ್ಲಿ 3 ಲಕ್ಷ ರೂ ವೆಚ್ಚದಲ್ಲಿ ಮನೆಮನೆಗೆ ನಲ್ಲಿ ಮಾಡಿಸುವ ಕಾರ್ ವಾರ್ಡ್ ನಂಬರ್ 15,16 ರಲ್ಲಿ ಆರಂಭಿಸಲಾಗುವುದು. ಇದರಿಂದ ಸಂಪೂರ್ಣ ವಾರ್ಡಿನ ಜನರ ಕುಡಿಯುವ ನೀರಿನ ಬವಣೆ ನೀಗಿಸಿದಂತಾಗಿದೆ, ನಮ್ಮ ವಾರ್ಡ್ನಲ್ಲಿ ಹಲವಾರು ರಸ್ತೆಗಳನ್ನು ಸಿ ಸಿ ರಸ್ತೆಯನ್ನಾಗಿ ಮಾಡಿದ್ದು ಇನ್ನೂ ಹಲವು ಸಮಸ್ಯೆಗಳಿಂದ...
ಕೊರೋನಾ 3 ನೇ ಅಲೆ ಅನ್ನೋದೇ ಶುದ್ಧ ಸುಳ್ಳು; ಅದು ಮಿಸ್ಸಿ ರೋಗ: ಸಚಿವ ಈಶ್ವರಪ್ಪ
ಶಿರಸಿ: ಕೊರೊನಾ 3 ನೇ ಅಲೆ ಬರುತ್ತೆ ಅನ್ನೋದು ಶುದ್ಧ ಸುಳ್ಳು. ಕೊರೊನಾ 3 ನೇ ಅಲೆ ಅಲ್ಲ ಅದು. ಅದೊಂದು ಮಿಸ್ಸಿ ಅನ್ನೋ ಕಾಯಿಲೆ. ಇದು ಉಸಿರಾಟ ಅಥವಾ ಸ್ಪರ್ಶದಿಂದಾಗಿ ಒಬ್ಬರಿಂದ ಒಬ್ಬರಿಗೆ ಹರಡೋದಿಲ್ಲ ಅಂತ ಶಿರಸಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ, ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಮಕ್ಕಳಿಗೆ 3 ನೇ ಅಲೆಯಿಂದ ತೊಂದರೆಯಾಗುತ್ತೆ, 3 ನೇ ಅಲೆ ಭೀಕರವಾಗಿರಲಿದೆ ಅನ್ನೋದೆಲ್ಲ ಊಹಾಪೋಹ. ಇದು ಮಿಸ್ಸಿ ಅನ್ನೋ ಖಾಯಿಲೆ. ಇದು ಹರಡೋದಿಲ್ಲ. ಇದಕ್ಕೆ ಮಾಸ್ಕ್, ಸಾಮಾಜಿಕ ಅಂತರ ಇವ್ಯಾವುದರ ಅವಶ್ಯಕತೆಯೂ ಇಲ್ಲ. ಮಗು ಹತ್ರ ತಾಯಿ ಹೋಗಿ ಆರೈಕೆ ಮಾಡ್ಬಹುದು. ಇದು ಟೆಸ್ಟ್ ಮಾಡುವಾಗಲೇ ವಾಸಿ ಆದ್ರೂ ಆಗ್ಬಹುದು. ಇದು ಮುಂದುವರಿದ್ರೆ ಒಂದು ಬದಿಯಲ್ಲಿ ಕಣ್ಣು ಕೆಂಪು ಆಗ್ಬಹುದು. ಬೆರಳುಗಳು ಬಿಳುಚಿಕೊಳ್ಳುತ್ತೆ. ಬಾಯಿಯಲ್ಲಿ ಹುಣ್ಣಾಗುತ್ತೆ. ಇದನ್ನ 5-6 ದಿನದಲ್ಲಿ ಗುರ್ತಿಸಿ ಅದಕ್ಕೆ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ. ತಾತ್ಕಾಲಿಕವಾಗಿ 2 ಕಂಪೆನಿಗಳಲ್ಲಿ ಲಭ್ಯವಿದ್ದು, ತರಿಸುತ್ತಿದ್ದಾರೆ. ಪರಿಹಾರ ಆಗುತ್ತೆ ಅಂತಾ ಈಶ್ವರಪ್ಪ ಹೇಳಿದ್ದಾರೆ.
ಮಳೆ ಬಂದ್ರೆ ಸಾಕು ಕೆರೆಯಂತಾಗತ್ತೆ ಬಂಕಾಪುರ ರಸ್ತೆ: ಅಧಿಕಾರಿಗಳೇ ಶಾಶ್ವತ ಕ್ರಮ ಕೈಗೊಳ್ಳಲು ಇನ್ನೇಷ್ಟು ದಿನ ಬೇಕು..?
ಮುಂಡಗೋಡ: ಪಟ್ಟಣದಲ್ಲಿ ಮಳೆ ಬಂದ್ರೆ ಸಾಕು ಬಂಕಾಪುರ ರಸ್ತೆಯ ಜನ ಅಂಗೈಯಲ್ಲಿ ಜೀವ ಹಿಡಿದು ಬದುಕುವ ಸ್ಥಿತಿ ಇದೆ. ಪ್ರತೀ ವರ್ಷವೂ ಇಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುವುದು ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಾಗ್ತಿಲ್ಲ. ಹೌದು ನಿನ್ನೆಯಿಂದ ತಾಲೂಕಿನಲ್ಲಿ ಭಾರೀ ಮಳೆಯಾಗ್ತಿದೆ. ಮುಂಡಗೋಡ ಪಟ್ಟಣದಲ್ಲೂ ಮಳೆರಾಯನ ಅರ್ಭಟ ನಿಂತಿಲ್ಲ. ಹೀಗಾಗಿ ಮಳೆರಾಯ ಮುಂಡಗೋಡ ಮಂದಿಗೆ ಇನ್ನಿಲ್ಲದ ಕಿರಿಕಿರಿ ತಂದಿಟ್ಟಿದ್ದಾನೆ. ಅದ್ರಲ್ಲೂ ಪಟ್ಟಣದ ಬಂಕಾಪುರ ರಸ್ತೆಯ ಜನರ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಒಂದು ಜೋರು ಮಳೆ ಬಂದ್ರೆ ಸಾಕು ರಸ್ತೆಯೆಲ್ಲ ಕೆರೆಯಂತಾಗತ್ತೆ. ರಸ್ತೆಯಲ್ಲಿನ ಮಳೆಯ ನೀರು ಮನೆಗಳಿಗೆ ನುಗ್ಗತ್ತೆ, ಇನ್ನು ಈ ರಸ್ತೆಯಲ್ಲಿ ಸಂಚರಿಸೋ ವಾಹನ ಸವಾರರ ಪಾಡು ದೇವರಿಗೇ ಪ್ರೀತಿ. ಹೀಗಾಗಿ ಎದ್ನೊ ಬಿದ್ನೊ ಅಂತಾ ಅಂಗೈಯಲ್ಲಿ ಜೀವ ಹಿಡಿದು ಓಡಾಡುವ ಪರಿಸ್ಥಿತಿ ಇಲ್ಲಿನ ನಾಗರೀಕರದ್ದು. ಅಯ್ಯೋ ಇದು ಯಾವಾಗ್ಲೂ ಇದ್ದಿದ್ದೇ ಗೋಳು..! ಅಂದಹಾಗೆ, ಇದು ನಿನ್ನೆ ಮೊನ್ನೆಯ ಪ್ರಶ್ನೆಯಲ್ಲ. ಪ್ರತೀ ವರ್ಷವೂ ಮಳೆಗಾಲದಲ್ಲಿ ಇಲ್ಲಿನ ಜನ್ರ ಗೋಳು...
ತೋಟಕ್ಕೆ ಹಾಕಿದ್ದ ವಿದ್ಯುತ್ ಬೇಲಿಗೆ ತಾಗಿ ವ್ಯಕ್ತಿ ದಾರುಣ ಸಾವು..!
ಶಿರಸಿ: ವಿದ್ಯುತ್ ತಂತಿ ಬೇಲಿ ತಗುಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಮತ್ತೀಘಟ್ಟಾ ಸಮೀಪದ ಸೂರಗುಪ್ಪದಲ್ಲಿ ನಡೆದಿದೆ. ಲವ ಗೌಡ (38) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಕಾಡು ಪ್ರಾಣಿ ಹಾವಳಿಯಿಂದ ತೋಟವನ್ನು ರಕ್ಷಿಸಿಕೊಳ್ಳುವ ಉದ್ದೇಶಕ್ಕೆ ಹಾಕಿದ್ದ ಐಬೇಕ್ಸ್ ಬೇಲಿಗೆ ತಗುಲಿ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಕ್ರೈಂ ವಿಭಾಗದ ಪಿಎಸ್ಐ. ಶ್ಯಾಮ ಪಾವಸ್ಕರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.