ವಿದ್ಯುತ್ ತಗುಲಿ ಇಬ್ಬರು ರೈತರ ದಾರುಣ ಸಾವು..!

ಶಿಗ್ಗಾವಿ : ಪಂಪ್ ಸೆಟ್ ಚಾಲನೆಗೊಳಿಸಲು ಹೋದ ವೇಳೆ ವಿದ್ಯುತ್ ತಗಲಿ ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ರಾತ್ರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಸವನಾಳ ಗ್ರಾಮದಲ್ಲಿ ನಡೆದಿದೆ.

ಸಾವನ್ನಪ್ಪಿದ ರೈತರನ್ನು ರೇವಣಯ್ಯ ಪಂಚಾಕ್ಷರಿಮಠ (50) ಮತ್ತು ಯಲ್ಲಪ್ಪ ಹಡಪದ (55) ಎಂದು ಗುರುತಿಸಲಾಗಿದೆ. ತೋಟದಲ್ಲಿನ ಬೋರವೆಲ್ ಗೆ ಸ್ಟಾರ್ಟರ್ ಕೂಡಿಸಲು ಹೋಗಿದ್ದ ವೇಳೆ ದುರ್ಘಟ‌ನೆ ನಡೆದಿದ್ದು. ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಇಬ್ಬರು ರೈತರು ಮೃತಪಟ್ಟಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.