ಯಲ್ಲಾಪುರ: ಭಾರೀ ಮಳೆಯಿಂದ ಗುಳ್ಳಾಪುರ ಸೇತುವೆ ಕುಸಿದು ಹಾನಿಯಾಗಿದ್ದ ಸ್ಥಳಕ್ಕೆ ನೂತನ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದ್ರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಶಿರಸಿ, ಯಲ್ಲಾಪುರ ಸೇರಿದಂತೆ ಹಲವೆಡೆ ಬಹಳಷ್ಟು ಹಾನಿಯಾಗಿದೆ, ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದೇನೆ.. ಪಶ್ಚಿಮ ಘಟ್ಟ ಬಹಳ ಸೂಕ್ಷ್ಮವಾದ ಪ್ರದೇಶ. ತುಂಬಾ ಮಳೆ ಬೀಳೋ ಪ್ರದೇಶ ಕೂಡ ಹೌದು. ಇಲ್ಲಿನ ಮಣ್ಣು ಬಹಳ ಬೇಗ ಕುಸಿತಕ್ಕೆ ಒಳಗಾಗುತ್ತಿದೆ
ಇಲ್ಲಿನ ಸೇತುವೆ ಕುಸಿತ ತುಂಬಾ ಭಯಾನಕವಾಗಿದೆ ಅಂತಾ ತಿಳಿಸಿದ್ರು.
ಅಲ್ದೆ, ಮನೆ ಬಿದ್ದವರಿಗೆ ಈ ಕೂಡಲೇ ಪರಿಹಾರ ನೀಡಲಾಗುವುದು, ರಾಜ್ಯ ಮಟ್ಟದಲ್ಲಿ ಸೇತುವೆಯ ಬಗ್ಗೆ ಚರ್ಚಿಸಲಾಗುವುದು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಅಂತಾ ಭರವಸೆ ನೀಡಿದ್ರು. ಈ ವೇಳೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಸಿಎಂ ಗೆ ಸಾಥ್ ನೀಡಿದ್ರು.