ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಗ್ರಾಮಗಳಲ್ಲಿ ಪಂ.ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ..!

ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಗ್ರಾಮಗಳಲ್ಲಿ ಪಂ.ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಆಚರಣೆ..!

ಮುಂಡಗೋಡ- ತಾಲೂಕಿನ ಹುನಗುಂದ, ಕೊಪ್ಪ, ಇಂದೂರು, ನಂದಿಕಟ್ಟಾ ಸೇರಿದಂತೆ ತಾಲೂಕಿನಾದ್ಯಂತ ಇಂದು ಹಲವು ಗ್ರಾಮಗಳಲ್ಲಿ ಜನಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ 105ನೇ ಜನ್ಮದಿನ ಆಚರಿಸಲಾಯಿತು. ಬಿಜೆಪಿ ಕಾರ್ಯಕರ್ತರು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿದರು. ಹುನಗುಂದ ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ, ಬೂತ್ ಗಳ ಅಧ್ಯಕ್ಷರುಗಳು, ಗ್ರಾಮಗಳ ಪ್ರಮುಖರು, ಬಿಜೆಪಿಯ ಹಿರಿಯರು ಹಾಗೂ ಊರಿನ ಗಣ್ಯರು ಭಾಗವಹಿಸಿದ್ದರು.

ನಕಲಿ ಸಹಿ ಮಾಡಿ ಭೂಮಿ ನೋಂದಾಯಿಸಿದ್ದ ಗ್ರೇಡ್2 ತಹಶೀಲ್ದಾರ್ ಅರೆಸ್ಟ್..!

ನಕಲಿ ಸಹಿ ಮಾಡಿ ಭೂಮಿ ನೋಂದಾಯಿಸಿದ್ದ ಗ್ರೇಡ್2 ತಹಶೀಲ್ದಾರ್ ಅರೆಸ್ಟ್..!

ಚಿಕ್ಕೋಡಿ: ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ನೊಂದಾಯಿಸಿದ್ದ ಚಿಕ್ಕೋಡಿ ಗ್ರೇಡ್ 2 ತಹಶೀಲ್ದಾರ್ ಅರೆಸ್ಟ್‌ ಆಗಿದ್ದಾರೆ. ಚಿಕ್ಕೋಡಿ‌ ತಹಶೀಲ್ದಾರರ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಶ್ರೀಖಂಡೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಏನದು ಕೇಸ್..? ಬಂಧಿತ ಗ್ರೇಡ್ 2 ತಹಶೀಲ್ದಾರ್ ಶ್ರೀಖಂಡೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಮಾರುತಿ ಕರಿಗಾರ ಎಂಬುವರಿಗೆ ಸೇರಿದ್ದ ರಿ.ನಂ 436/5ಮತ್ತು 436/6 ರ ಜಮೀನು ಕೊಟ್ಟಿ ದಾಖಲೆ ಸೃಷ್ಠಿಸಿ, ಖರೀದಿ ಮಾಡಿ, ಪೋರ್ಜರಿ ಸಹಿ ಮಾಡಿ ಭೂಮಿಯನ್ನು ನೊಂದಾಯಿಸಿದ್ದ ಆರೋಪವಿತ್ತು. ಈ ಬಗ್ಗೆ ಮಾರುತಿ ಕರಿಗಾರ ಎಂಬುವವರು ನೀಡಿದ ದೂರಿನ ಮೇರೆಗೆ ಗ್ರೇಡ್ 2 ತಹಶಿಲ್ದಾರ್ ಅವರನ್ನು ಚಿಕ್ಕೋಡಿ ಪೊಲೀಸ್ರು ಬಂಧಿಸಿದ್ದಾರೆ.

ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ಮುಂಡಗೋಡ: ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಲಮಾಣಿಯವರ ಮೇಲೆ ದೈಹಿಕ ಹಲ್ಲೆ ನಡೆಸಿದವರ ಮೇಲೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾಯತಿ ಪಿಡಿಓಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನವಿ ಅರ್ಪಿಸಿದ್ರು. ನಂದಿಕಟ್ಟಾ ಗ್ರಾಮ ಪಂಚಾಯತ ಪಿಡಿಓ ವೆಂಕಪ್ಪ ಕೆ.ಲಮಾಣಿ ರವರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗೌಸುಸಾಬ ಮೌಲಾಲಿ ಯಳ್ಳುರ ಎಂಬುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅಪರಾಧಿಗೆ ತಕ್ಕೆ ಶಿಕ್ಷೆಯಾಗಬೇಕು ಅಂತಾ ನೌಕರರು ಆಗ್ರಹಿಸಿದ್ದಾರೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಸರ್ಕಾರದ ವಿವಿದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸ್ಥಳೀಯ ಮಟ್ಟದಲ್ಲಿ ಇದ್ದುಕೊಂಡು ಗ್ರಾಮದ ಕಟ್ಟ ಕಡೆಯ ವ್ಯಕ್ತಿಗಳಿಗೂ ಕೂಡ ಜನರ ಮನೆ ಮನೆಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತ ಬರುತ್ತಿರುವ ಗ್ರಾಮ ಪಂಚಾಯತ ನೌಕರ ವೃಂದವಾದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು, ಎಸ್.ಡಿ.ಎ ಗಳು, ಬಿಲ್ ಕಲೆಕ್ಟರ್, ಕ್ಲರ್ಕ, ಕಂಪ್ಯೂಟರ್ ಆಪರೇಟರ್, ಸಿಪಾಯಿ, ವಾಟರಮನ್ ಗಳ ಮೇಲೆ...

ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ನಿಜಕ್ಕೂ ಮುಂಡಗೋಡಿನ ಮಣ್ಣ ಕಣಕಣದಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇವತ್ತಿನ ಈ ಘಟನೆಯೇ ಸಾಕ್ಷಿ. ಯುವತಿಯೊಬ್ಳು ರಸ್ತೆಯ ಮದ್ಯದಲ್ಲೇ ಪ್ರಜ್ಞಾಹೀನವಾಗಿ ಬಿದ್ದಾಗ ಸಾರ್ವಜನಿಕರೇ ಆ ಯುವತಿಯನ್ನ ಆಸ್ಪತ್ರೆಗೆ ಸೇರಿಸಿರೋ ಘಟನೆ ನಡೆದಿದೆ‌. ಏನಾಯ್ತು..? ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸಮೀಪ ಬಂಕಾಪುರ ರಸ್ತೆಯಲ್ಲಿ ಇಂದು ಮದ್ಯಾಹ್ನ ಓರ್ವ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲೆ ಬಿದ್ದಿದ್ದಾಳೆ. ಆ ಹೊತ್ತಲ್ಲಿ ಆಕೆಯ ಜೊತೆಗಿದ್ದ ಓರ್ವ ಅಜ್ಜಿ ಆತಂಕದಲ್ಲಿ ಚೀರಾಟ ಶುರುವಿಟ್ಟಿದ್ದಾಳೆ. ಆ ಕ್ಷಣ ನಿಜಕ್ಕೂ ಈ ಘಟನೆ ಯಾರಿಗೂ ಅರ್ಥವೇ ಆಗಿಲ್ಲ. ಏಕಾ ಏಕಿ ಹಾಗೆ ರಸ್ತೆಯಡಿ ಬಿದ್ದ ಯುವತಿಗೆ ಏನಾಗಿದೆ ಅನ್ನೋದೂ ಯಾರಿಗೂ ಗೊತ್ತಾಗಿಲ್ಲ. ತಕ್ಷಣವೇ ಅಲ್ಲಿನ ಕೆಲ ಯುವಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವ್ರು, ಅಂಬ್ಯುಲೆನ್ಸ್ ಗೂ ಕರೆ ಮಾಡಿದ್ದಾರೆ. ಆದ್ರೆ, ಕರೆ ಮಾಡಿದ್ರೂ ಅಂಬ್ಯುಲೆನ್ಸ್ ಬರಲೇ ಇಲ್ಲ. ಹೀಗಾಗಿ, ಸಾರ್ವಜನಿಕರು ಕೆಲಹೊತ್ತು ಆತಂಕಕ್ಕೀಡಾಗಿದ್ದಾರೆ. ಪಿಟ್ಸ್ ಅನಕೊಂಡ್ರು..! ಹಾಗೆ, ರಸ್ತೆಯಲ್ಲಿ ಏಕಾಏಕಿ ಬಿದ್ದು ನರಳಾಡುತ್ತಿದ್ದ ಯುವತಿಗೆ ಬಹುಶಃ ಪಿಟ್ಸ್ ಬಂದಿರಬಹುದು...

ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ. ಸಾಂಕ್ರಾಮಿಕ ಜ್ವರದ ಬಾಧೆ..! ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ ತಾಲೂಕೂ ಇದಕ್ಕೆ ಹೊರತಾಗಿಲ್ಲ. ಆಸ್ಪತ್ರೆಗಳಲ್ಲಿ ವೈದ್ಯರು ಜ್ವರದಿಂದ ಬಳಲುತ್ತಿರೋ ಮಕ್ಕಳ ದೇಖರೇಕಿ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಎರಡನೇ ಅಲೆಯ ಹೊಡೆತ..! ಅಂದಹಾಗೆ, ಕಳೆದ ಎರಡನೇ ಅಲೆಯ ಹೊಡೆತಕ್ಕೆ ಮುಂಡಗೋಡ ತಾಲೂಕು ಇಡಿ ಇಡಿಯಾಗಿ ನರಳಿತ್ತು. ಅದೇಷ್ಟೋ ಜನ ಕೊರೊನಾ ಕಾಟಕ್ಕೆ ತುತ್ತಾಗಿ ಇನ್ನೂ ಅದರ ಸೈಡ್ ಎಫೆಕ್ಟ್ ನಿಂದ ಹೊರಬಂದಿಲ್ಲ. ನಿನ್ನೆಯಷ್ಟೇ ನನ್ನ ಜೊತೆ ಕೂತು ಟೀ ಕುಡಿದಿದ್ದಾ ರೀ, ಇವತ್ತು...

ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಶಿರಸಿ: ಮನೆಯ ಛಾವಣಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಸುರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು. ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ ಪ್ರದೇಶದ ರಕ್ಷಿತಾರಣ್ಯದಲ್ಲಿ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಯಿತು. ಈ ಸಂದರ್ಭದಲ್ಲಿ ಹುಲೇಕಲ್ ವಲಯ ಆರ್.ಎಫ್.ಓ ಮಂಜುನಾಥ ಹೆಬ್ಬಾರ, ಡಿ.ವೈ.ಆರ್.ಎಫ್.ಓ ರಾಘವೇಂದ್ರ ಹೆಗಡೆ, ಅರಣ್ಯ ರಕ್ಷಕ ರಾಜೇಶ ನಾಯ್ಕ, ದಾವಲಸಾಬ ಎರಗಟ್ಟಿ, ವಾಹನ ಚಾಲಕ ನಾಗರಾಜ ಉಪಸ್ಥಿತರಿದ್ದರು.

ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡ: ಪಟ್ಟಣದಲ್ಲಿ ಸೆಪ್ಟೆಂಬರ್ 3 ರ ರಾತ್ರಿ ನಡೆದಿದ್ದ , ಪೋಟೊ ಸ್ಟುಡಿಯೋ ಹಾಗೂ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಾಳಬಾವಿಕೇರಿಯ ಇಮಾಮಸಾಬ ದಾವಲಸಾಬ ಅಲ್ಲಿಬಾಯಿ (21) ಎಂಬುವವನೇ ಕಳ್ಳತನದ ಆರೋಪಿಯಾಗಿದ್ದಾನೆ. ಬಂಧಿತ ಅಂತರ್ ಜಿಲ್ಲಾ ಕಳ್ಳನಿಂದ ಪೇನಾಸಾನಿಕ್ ಎ.ಜಿ.ಎಸ್.ಸಿ-90 ವಿಡಿಯೋ ಕ್ಯಾಮರಾ, ನಿಕಾನ್ ಡಿ- 3500 ಡಿ.ಎಸ್.ಎಲ್.ಆರ್ ಫೋಟೋ ಕ್ಯಾಮರಾ, 20 ಮೊಬೈಲ್ ಗಳು ಹಾಗೂ ಮೊಬೈಲ್ ನ ಬಿಡಿ ಭಾಗಗಳು ಸೇರಿ, ಸುಮಾರು ಒಂದೂವರೇ ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿವಪ್ರಕಾಶ್ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದರಿನಾಥ, ಡಿವೈಎಸ್ಪಿ ರವಿ ನಾಯ್ಕ ರವರ ಮಾರ್ಗದರ್ಶನದಲ್ಲಿ ಮುಂಡಗೋಡ ಪೊಲೀಸ್ ಠಾಣೆಯ ಪಿಐ ಸಿದ್ಧಪ್ಪ ಎಸ್. ಸಿಮಾನಿ ರವರ ನೇತೃತ್ವದಲ್ಲಿ ಪಿಎಸ್‌ಐ ಬಸವರಾಜ ಮಬನೂರ, ಪಿ.ಎಸ್.ಐ ನಿಂಗಪ್ಪ ಜಕ್ಕಣ್ಣವರ್ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಧರ್ಮರಾಜ, ಸುರೇಶ್ ವಿ, ವಿನೋದಕುಮಾರ, ಅರುಣಕುಮಾರ ಬಿ,...

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಮುಂಡಗೋಡ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕರ್ತರು, 2ಎ ಮೀಸಲಾತಿಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು, ಆ ವೇಳೆ, ಸಿಎಂ ಆಗಿದ್ದ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಲು ಆರು ತಿಂಗಳು ಸಮಯ ಕೇಳಿದ್ದರು, ಆದ್ರೆ ಈಗ ಯಡಿಯೂರಪ್ಪರ ಸಮಯದ ಅವಧಿ ಮುಗಿದಿದೆ. ಈಗ ನೂತನವಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ‌. ಹೀಗಾಗಿ, ಕೂಡಲೇ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಸಂಘದ ಮುಖಂಡರು ಹಾಗೂ ಸಮಾಜದ ಬಾಂಧವರು ಸರ್ಕಾರಕ್ಕೆ ಒತ್ತಾಯಿಸಿದ್ರು. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಅಂತಾ ಇದೇ ವೇಳೆ ಎಚ್ಚರಿಸಿದ್ರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ರಾಮಣ್ಣ ಕುನ್ನೂರ್, ಗುಡ್ಡಪ್ಪ ಕಾತೂರು, ಶಿವಾನಂದ್ ನಿಡಗುಂದಿ, ಶೇಕಪ್ಪ ಹೊನ್ನಳ್ಳಿ, ಚಂದ್ರು ಹಡಪದ, ವಿನೋದ್ ಬಿಸನಳ್ಳಿ, ಮಲ್ಲಿಕಾರ್ಜುನ್ ಗೌಳಿ, ಸುರೇಶ್ ಗೌಳಿ,...

ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ದಾವಣಗೇರೆಯಲ್ಲಿ ಮನಕಲುಕುವ ದೃಷ್ಯ..!

ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ದಾವಣಗೇರೆಯಲ್ಲಿ ಮನಕಲುಕುವ ದೃಷ್ಯ..!

ಬೆಂಗಳೂರು ಆತ್ಮಹತ್ಯೆ ಘಟನೆ ಮಾಸುವ ಮುನ್ನವೆ ದಾವಣಗೆರೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿದ್ದಾರೆ. ದಾವಣಗೆರೆಯ ಭಾರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು ಕೃಷ್ಣಾನಾಯ್ಕ್ (35)ಆತನ ಪತ್ನಿ ಸರಸ್ವತಿ ಬಾಯಿ, ಎಂಟು ವರ್ಷದ ಮಗು ಧ್ರುವ ಮೃತಪಟ್ಟವರು. ಭಾರತ್ ಕಾಲೋನಿ ಶೇಖರಪ್ಪ ಬಿ ಬ್ಲಾಕ್ ನಲ್ಲಿ ವಾಸವಾಗಿದ್ದ ಕೃಷ್ಣನಾಯ್ಕ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸರಸ್ವತಿ ಬಾಯಿ ಮೂಲವ್ಯಾಧಿಯಿಂದ ಬಳಲುತ್ತಿದ್ದರು. ಕೃಷ್ಣಾನಾಯ್ಕ್ ರಿಗೆ ಸಹ ಆರೋಗ್ಯ ಸಮಸ್ಯೆ ಇತ್ತು, ಕೃಷ್ಣನಾಯ್ಕ್ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು.ಅನಾರೋಗ್ಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಎಂಟು ವರ್ಷ ವಯಸ್ಸಿನ ಧ್ರುವ ಹಾಗೂ ತಾಯಿ ಸರಸ್ವತಿ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿದ್ದಾರೆ. ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕೃಷ್ಣಾನಾಯ್ಕ್ ಶವ ಪತ್ತೆಯಾಗಿದೆ‌. ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯ ಕೈಕೊಟ್ಟ ಹಿನ್ನೆಲೆ ಈ ನಿರ್ಧಾರ ಕೈಗೊಂಡ್ರಾ...

ನಾಳೆಯಿಂದ ದಾವಣಗೇರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ..! ಏನೇಲ್ಲ ಇರತ್ತೆ, ಯಾರೇಲ್ಲ ಬರ್ತಾರೆ ಗೊತ್ತಾ..?

ನಾಳೆಯಿಂದ ದಾವಣಗೇರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ..! ಏನೇಲ್ಲ ಇರತ್ತೆ, ಯಾರೇಲ್ಲ ಬರ್ತಾರೆ ಗೊತ್ತಾ..?

ದಾವಣಗೇರೆ: ನಾಳೆ ಶನಿವಾರದಿಂದ ಬೆಣ್ಣೆ ನಗರಿ, ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಲಿದೆ. ಕಾರ್ಯ ಕಾರಿಣಿಗೆ ಈಗಾಗಲೇ ಸ್ಮಾರ್ಟ್ ಸಿಟಿ ಸಿದ್ದಗೊಂಡಿದ್ದು, ಮುಂಬರುವ ಸ್ಥಳೀಯ ಹಾಗೂ ವಿಧಾನ ಸಭಾ ಚುನಾವಣೆಗೆ ಈಗಲೇ ತಂತ್ರ ಹೆಣಿಯುತ್ತಿದೆ. ರಾಜಕೀಯ ಹಾಟ್ ಸ್ಪಾಟ್..! ಹೌದು.. ವಿಕೆಂಡ್ ನಲ್ಲಿ ದಾವಣಗೆರೆ ಎರಡು ದಿನಗಳ ಕಾಲ ರಾಜಕೀಯ ಹಾಟ್ ಸ್ಪಾಟ್ ಆಗಿ ಬದಲಾಗಲಿದೆ‌. ಏಕೆಂದ್ರೆ‌. ಬಿಜೆಪಿಯ ರಾಜ್ಯ ಕಾರ್ಯ ಕಾರಿಣಿ ಸಭೆ ನಡೆಯಲಿದ್ದು ಜಿಲ್ಲೆಗೆ ಬಿಜೆಪಿ ರಾಜ್ಯ, ಹಾಗೂ ರಾಷ್ಟ್ರ ನಾಯಕರ ದಂಡೆ ಹರಿದು ಬರಲಿದೆ. ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಹಾಗೂ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ನಾಯಕರು ಬೂತ್ ಮಟ್ಟದಿಂದ ಪಕ್ಷವನ್ನ ಬಲ ಪಡಿಸಲು ಈಗಲೇ ತಂತ್ರ ಹೆಣೆಯುತ್ತಿದ್ದಾರೆ. ಬೆಣ್ಣೆ ನಗರಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯ ಕಾರಿಣಿ ಸಭೆಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ...

error: Content is protected !!