ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ಛತ್ರಪತಿ ಶಿವಾಜಿ ಮಂಡಳದ ವತಿಯಿಂದ ಗೌರವ ಸಮರ್ಪಣೆ ಹಾಗೂ ಶೃದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಭಕ್ತಿಯ ಘೋಷಣೆಗಳೊಂದಿಗೆ ನಿವೃತ್ತ ಯೋಧರಿಗೆ ಸನ್ಮಾನಿಸಲಾಯಿತು. ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಯೋಧರಾದ ಗಣಪತಿ ರವಳಪ್ಪನವರ್, ಯಲ್ಲಪ್ಪ ನಾಯ್ಕರ್, ಅಣ್ಣಪ್ಪ ಶಿಗ್ಗಾವಿ ಹಾಗೂ ಗಣಪತಿ ಮಟ್ಟಿಮನಿ ಎಂಬುವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಈ ವೇಳೆ ಹಲವು ಮುಖಂಡರು ಭಾಗಿಯಾಗಿದ್ರು.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಹುನಗುಂದದ ಸಹಕಾರಿ ಧುರೀಣ ಸಿದ್ದಪ್ಪ ಬೀರವಳ್ಳಿ ವಿಧಿವಶ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಸಹಕಾರಿ ಧುರೀಣ, ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದಪ್ಪ ಸಣ್ಣಕಲ್ಲಪ್ಪ ಬೀರವಳ್ಳಿ(65) ಹೃದಯಾಘತದಿಂದ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿರೋ ಸಿದ್ದಪ್ಪ ಬೀರವಳ್ಳಿ, ಮೃದುಸ್ವಭಾವದ, ಜನಾನುರಾಗಿ ವ್ಯಕ್ತಿತ್ವದವರಾಗಿದ್ದರು. ಈ ಹಿಂದೆ ವೀರೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಸಿದ್ದಪ್ಪ ಬೀರವಳ್ಳಿ, ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರೋ, ಸಿದ್ದಪ್ಪ ಬೀರವಳ್ಳಿಯವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಅಗಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ರಾ ಅಧಿಕಾರಿಗಳು..?
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಂದಿದ್ರು.. ಆದ್ರೆ ಈ ಕಾರ್ಯಕ್ರಮದ ಸಲುವಾಗಿ ಬರೋಬ್ಬರಿ 24 ವಿದ್ಯಾರ್ಥಿಗಳ ಜೀವ ಒತ್ತೆ ಇಡಲಾಗಿತ್ತಾ ಅನ್ನೊ ಆತಂಕ ಇತ್ತು. ಯಾಕಂದ್ರೆ ಆ ವಿದ್ಯಾರ್ಥಿಗಳ ಕಾಲಡಿಯೇ ಯಮರೂಪಿ ವಿದ್ಯುತ್ ತಂತಿ ಹಾದು ಹೋಗಿತ್ತು. ಇಲಾಖಾ ಅಧಿಕಾರಿಗಳ ಎದುರೇ..! ಅಸಲು, ಹಾಗೆ ವಿದ್ಯುತ್ ತಂತಿ ಹಾದು ಹೋಗಿತ್ತು ಅನ್ನೊದಕ್ಕಿಂತ ಆ ಕಾರ್ಯಕ್ರಮದ ಆಯೋಜಕರೇ ಹಾಗೆ ಬೇಜಾವಾಬ್ದಾರಿ ತೋರಿಸಿದ್ರು. ಇದು ಖುದ್ದು ಆ ಕ್ಲಾಸ್ ನಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ಆತಂಕಕ್ಕೂ ಕಾರಣವಾಗಿತ್ತು. ನಿಜ ಅಂದ್ರೆ, ಶಿಕ್ಷಣ ಇಲಾಖೆಯ ದೊಡ್ಡ ದೊಡ್ಡ ತಾಲೂಕಾಧಿಕಾರಿಗಳೇ ಅಲ್ಲಿ ಹಾಜರಿದ್ರು. ಆದ್ರೂ ಆ ಅಧಿಕಾರಿಗಳ ಕಣ್ಣಿಗೆ ಇದೇಲ್ಲ ಕಾಣಲೇ ಇಲ್ಲ. ಅವ್ರು ಸಚಿವರ ಆಗಮನಕ್ಕಾಗಿ ಕಾಯುತ್ತ ಹರಟೆ ಹೊಡೆಯುವುದರಲ್ಲೇ ಬ್ಯುಸಿಯಾಗಿದ್ರು. ತುಂಡು ತುಂಡಾದ ವೈಯರ್..! ಅಂದಹಾಗೆ, ಸಚಿವರು ನೂತನವಾಗಿ ನಿರ್ಮಾಣಗೊಳ್ಳುತ್ತಿರೋ ಶಾಲಾ ಕಟ್ಟಡದ ಶಂಕು ಸ್ಥಾಪನೆಗೆ ಬಂದಿದ್ರು. ಹಾಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ...
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ತಾಲೂಕಿನ ಕಾತೂರ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪದ ಅನಿಲ್ ಶಿವಪ್ಪ ಬಂಡಿವಡ್ಡರ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಜೂನ್ 6.. ಅಂದಹಾಗೆ, ಜೂನ್ 6 ರಂದು ಕಾತೂರಿನ ಸಿರಾಜ್ ಬಾಷಾಸಾಬ್ ಬೊಮ್ಮನಳ್ಳಿ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಸ್ಪೆಂಡರ್ ಪ್ರೊ ಬೈಕ್, ಬೆಳಗಾಗುವಷ್ಟರಲ್ಲೇ ಕಳ್ಳರು ಎಗರಿಸಿಕೊಂಡು ಹೋಗಿದ್ದರು. ಹೀಗಾಗಿ, ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಿರಾಜ್ ಬೊಮ್ಮನಳ್ಳಿ ಕಳೆದು ಹೋಗಿದ್ದ ಬೈಕ್ ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಹೀಗಾಗಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಬೈಕ್ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿ ತಂದಿದ್ದಾರೆ. ಈ ಪ್ರಕರಣವನ್ನು ಭೇದಿಸಲು ಎಸ್ಪಿ ಡಾ. ಸುಮನ ಪೆನ್ನೆಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರಿನಾಥ, ಶಿರಸಿ...
ಇಂದೂರು ಸಮೀಪ ಮರಕ್ಕೆ ಡಿಕ್ಕಿ ಹೊಡೆದ ಕಾರ್, ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ: ಇಂದೂರು ಕೊಪ್ಪ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಹಳೆಯರೂ ಸೇರಿ ನಾಲ್ವರಿಗೆ ಗಾಯವಾಗಿದೆ. ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಕಾರ್ ನಂ. KA-31-N-5760 ನಂಬರಿನ ಕಾರ್ ವೇಗವಾಗಿ ಬಂದಿದೆ. ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ, ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಅದ್ರೆ ಅದೃಷ್ಟವಶಾತ್ ಬೈಕ್ ಗೆ ಡಿಕ್ಕಿ ಹೊಡೆದಿಲ್ಲ. ಬದಲಾಗಿ ವೇಗವಾಗಿ ಬಂದು ಬೃಹತ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಹೀಗಾಗಿ, ಕಾರಲ್ಲಿದ್ದ ಮಹಿಳೆಯರೂ ಸೇರಿ ಐವರು ಕಾರಲ್ಲೇ ಸಿಲುಕಿದ್ದಾರೆ. ಹೊರಬರಲು ಚೀರಾಟ ಶುರುವಿಟ್ಟಿದ್ದಾರೆ. ತಕ್ಷಣವೇ ಸ್ಥಳೀಯರು ಪಲ್ಟಿಯಾದ ಕಾರನ್ನು ಮೇಲಕ್ಕೆ ಎತ್ತಿ ಕಾರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಇನ್ನು ಡಿಕ್ಕಿಯ ರಭಸಕ್ಕೆ ಕಾರಿನ ಎಂಜಿನ್ ನಲ್ಲಿ ಹೊಗೆ ತುಂಬಿಕೊಂಡು ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು, ಘಟನೆಯಲ್ಲಿ ತೀವ್ರ ಗಾಯದಿಂದ ಬಳಲುತ್ತಿದ್ದ ಮಹಿಳೆಯರೂ...
ಗೊಬ್ಬರ ಸಿಂಪಡಿಸುವಾಗ ಕಚ್ಚಿದ ವಿಷಕಾರಿ ಸರ್ಪ, ಚಿಗಳ್ಳಿಯಲ್ಲಿ ಅನ್ನದಾತನ ದುರಂತ ಸಾವು..!
ಮುಂಡಗೋಡ: ತಾಲೂಕಿನ ಚಿಗಳ್ಳಿಯಲ್ಲಿ ವಿಷಕಾರಿ ಹಾವು ಕಚ್ಚಿ ರೈತ ಸಾವನ್ನಪ್ಪಿದ್ದಾನೆ. ಪಾಂಡುರಂಗ ಚೆನ್ನಾಪುರ(48) ಹಾವು ಕಚ್ಚಿ ಮೃತಪಟ್ಟ ರೈತನಾಗಿದ್ದಾನೆ. ಇಂದು ಬೆಳಿಗ್ಗೆ ತನ್ನ ಗೋವಿನಜೋಳದ ಗದ್ದೆಯಲ್ಲಿ ಗೊಬ್ಬರ ಸಿಂಪಡಿಸುವ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ. ಹೀಗಾಗಿ, ತೀವ್ರ ಅಸ್ವಸ್ಥಗೊಂಡಿದ್ದ ರೈತನನ್ನು ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ತೆ ಚಿಕಿತ್ಸೆ ಫಲಕಾರಿಯಾಗದೆ ರೈತ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹುಬ್ಬಳ್ಳಿ ತಾರಿಹಾಳದಲ್ಲಿ ಭೀಕರ ಅಗ್ನಿ ದುರಂತ, ಮೂರಕ್ಕೇರಿದ ಮೃತರ ಸಂಖ್ಯೆ..!
ಹುಬ್ಬಳ್ಳಿ: ತಾರಿಹಾಳ ಕಾರ್ಖಾನೆಯಲ್ಲಿ ನಿನ್ನೆ ನಡೆದಿದ್ದ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಅಗ್ನಿ ಅವಘಡದಲ್ಲಿ ಗಾಯಗೊಂಡವರನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕಿಮ್ಸ್ ನಲ್ಲಿ ಚಿಕಿತ್ಸೆ ಫಲಿಸದೆ ಮತ್ತಿಬ್ಬರು ಸಾವು ಕಂಡಿದ್ದಾರೆ. ಗೌರಮ್ಮ ಹಾಗೂ ಮಾಲೇಶ್ ಮೃತ ದುರ್ದೈವಿಗಳಾಗಿದ್ದು, ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ಮೂವರು ಸಾವನ್ನಪ್ಪಿರೋದಾಗಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ. ಇನ್ನುಳಿದ ಐವರು ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಸಾವು ಕಂಡಿರೋ ಮೂವರಿಗೂ ಶೇ.80 ರಿಂದ 90 ರಷ್ಟು ಸುಟ್ಟ ಗಾಯಗಳಾಗಿದ್ದವು. ವೈದ್ಯರ ಸತತ ಪ್ರಯತ್ನದ ನಂತರವೂ ಚಿಕಿತ್ಸೆ ಫಲಿಸದೆ ಮೂವರೂ ಸಾವು ಕಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿಗೆ ಬೆಂಕಿ, 8 ಜನರಿಗೆ ಗಂಭೀರ ಗಾಯ, ನಾಲ್ವರು ಸಜೀವ ದಹನವಾದ್ರಾ..?
ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿರೋ ಸ್ಪಾರ್ಕಲ್ ಕ್ಯಾಂಡಲ್ ತಯಾರಿಸುವ ಫ್ಯಾಕ್ಟರಿಗೆ ಬೆಂಕಿ ಬಿದ್ದಿದ್ದು ಬರೋಬ್ಬರಿ 8 ಜನರಿಗೆ ಗಂಭೀರ ಗಾಯವಾಗಿದೆ. ಇನ್ನೂ ನಾಲ್ವರು ಫ್ಯಾಕ್ಟರಿ ಒಳಗಡೆ ಸಿಲುಕಿ ಸಜೀವ ದಹನವಾಗಿರೋ ಅನುಮಾನವಿದೆ. ಬರ್ಥ ಡೇ ಪಾರ್ಟಿಯಲ್ಲಿ ಬಳಸುವ ಸ್ಪಾರ್ಕಲ್ ಕ್ಯಾಂಡಲ್ ತಯಾರಿಸುವ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಕಳೆದ ಒಂದು ಗಂಟೆಯ ಹಿಂದೆ ಘಟನೆ ನಡೆದಿದ್ದು, ಪ್ರತೀಕ್ಷಣವೂ ಸ್ಪೋಟದ ಶಬ್ದ ಕೇಳಿಸುತ್ತಿದೆ. ಬೆಂಕಿಯ ಕಡಿಮೆ ನ್ನಾಲಿಗೆ ಹರಡುತ್ತಿದೆ. ಹೀಗಾಗಿ, ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿ ನಂದಿಸುವ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ಇನ್ನು ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೈಕೋರ್ಟ್ ಮದ್ಯಂತರ ಆದೇಶ, ನಾಗನೂರು ಗ್ರಾಪಂ ಅಧ್ಯಕ್ಷ ಸುನಿಲ್ ಸಳಕೆ ರಾಜೀನಾಮೆ ದಿಢೀರ್ ವಾಪಸ್..!
ಮುಂಡಗೋಡ: ತಾಲೂಕಿನ ನಾಗನೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರ ಹಾವು ಏಣಿ ಆಟ ಮುಂದುವರೆದಿದೆ. ಅಧ್ಯಕ್ಷ ಸುನಿಲ್ ವಾಗು ಸಳಕೆ ಜುಲೈ 16 ರಂದು ತಮ್ಮ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಈ ಮೂಲಕ ಮತ್ತೊಂದು ಆಟ ಶುರುವಿಟ್ಟು ಸೆಡ್ಡು ಹೊಡೆದಿದ್ದಾರೆ. ಮದ್ಯಂತರ ಆದೇಶ..! ಅಂದಹಾಗೆ, ನಾಗನೂರು ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯುವಂತೆ ಕೆಲವು ಸದಸ್ಯರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗದ ಸಹಾಯಕ್ ಆಯುಕ್ತರು ಜುಲೈ 25 ರಂದು ಸಭೆ ನಡೆಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜುಲೈ 16 ರಂದು ಸುನಿಲ್ ಸಳಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ಮದ್ಯಂತರ ತಡೆಯಾಜ್ಞೆ ನೀಡಿದೆ. ಕೋರ್ಟ್ ಹೇಳಿದ್ದೇನು..? ನಾಗನೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಸುನೀಲ ವಾಗು ಸಳಕೆ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪ್ರಕರಣವನ್ನು ಗುರುವಾರ ವಿಚಾರಣೆ ನಡೆಸಿದ ಹೈಕೋರ್ಟ್ ಧಾರವಾಡ ಪೀಠವು ಮಧ್ಯಂತರ...
ಮತ್ತೆ ಕೋಮಾ ಸ್ಥಿತಿಗೆ ತಲುಪೇ ಬಿಡ್ತಾ ಮುಂಡಗೋಡ ಕಾಂಗ್ರೆಸ್..? ಅಷ್ಟಕ್ಕೂ ಎಲ್ಲಿದ್ದಾರೆ ಪ್ರಶಾಂತಣ್ಣ..?
ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಅನ್ನೋದು ಕೋಮಾ ಸ್ಥಿತಿಗೆ ತಲಪೇ ಬಿಡ್ತಾ..? ಸದ್ಯದ ಪರಿಸ್ಥಿತಿ ನೋಡಿದ್ರೆ ಹಾಗೇ ಅನ್ನಿಸ್ತಿದೆ. ತಾಲೂಕಿನಲ್ಲಿ ಒಂದೊಳ್ಳೆ ಅವಕಾಶ ಹೊಂದಿದ್ದ ಕೈ ಪಡೆಗೆ, ಸಿಕ್ಕ ಅವಕಾಶ ಬಳಸಿಕೊಳ್ಳುವ ಯಾವೊಂದೂ ಕಾರ್ಯಗಳೂ ಜಾರಿಯಾಗಲೇ ಇಲ್ಲ ಅನ್ನೋದು ಖುದ್ದು ಅದೇ ಪಕ್ಷದ ನಿಷ್ಟಾವಂತರನ್ನು ಚಿಂತೆಗೀಡು ಮಾಡಿದೆ. ಇನ್ನು, ನಾನೇ ಅಭ್ಯರ್ಥಿ ಅಂತಾ ಗುಂಗು ಹಿಡಿಸಿ, ಅದೇಲ್ಲೋ ಕುಳಿತು ರಿಮೋಟ್ ಒತ್ತುವ ಪ್ರಶಾಂತಣ್ಣ, ಅದೇಷ್ಟೋ ದಿನಗಳಿಂದ ಕ್ಷೇತ್ರದಲ್ಲಿ ಮುಖ ತೋರಿಸಿಲ್ಲ. ಹೀಗಾಗಿ, ಪಕ್ಷ ಕ್ಷೇತ್ರದಲ್ಲಿ ವಿಲ ವಿಲ ಅಂತಿದೆ. ಗಟ್ಟಿತನ..! ಅಸಲು, ಮುಂಡಗೋಡ ತಾಲೂಕಿನಲ್ಲಿ ಹಲವರ ಶ್ರಮದಿಂದ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾಲೂಕಿನ ಒಟ್ಟೂ 16 ಗ್ರಾಮ ಪಂಚಾಯತಿಗಳ ಪೈಕಿ ಬರೋಬ್ಬರಿ 7 ರಲ್ಲಿ ಕಾಂಗ್ರೆಸ್ ಬಾವುಟ ಹಾರಿತ್ತು. ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಸತ್ಯ ಅಂದ್ರೆ ಇದೇಲ್ಲ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ತೊರೆದು ಹೋದ ನಂತ್ರ, ಇನ್ನೇನು ಕಾಂಗ್ರೆಸ್ ಕತೆ ಮುಗಿದೇ ಹೋಗಿದೆ ಅನ್ನೋ ಸಂದರ್ಭದಲ್ಲೇ ಬಂದಿದ್ದ ಫಲಿತಾಂಶವಾಗಿತ್ತು. ತಾಲೂಕಿನಲ್ಲಿ ಕೈ...