ಅಗಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡಿದ್ರಾ ಅಧಿಕಾರಿಗಳು..?


ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಚಿವ ಶಿವರಾಮ್ ಹೆಬ್ಬಾರ್ ಬಂದಿದ್ರು.. ಆದ್ರೆ ಈ ಕಾರ್ಯಕ್ರಮದ ಸಲುವಾಗಿ ಬರೋಬ್ಬರಿ 24 ವಿದ್ಯಾರ್ಥಿಗಳ ಜೀವ ಒತ್ತೆ ಇಡಲಾಗಿತ್ತಾ ಅನ್ನೊ ಆತಂಕ ಇತ್ತು. ಯಾಕಂದ್ರೆ ಆ ವಿದ್ಯಾರ್ಥಿಗಳ ಕಾಲಡಿಯೇ ಯಮರೂಪಿ ವಿದ್ಯುತ್ ತಂತಿ ಹಾದು ಹೋಗಿತ್ತು.

ಇಲಾಖಾ ಅಧಿಕಾರಿಗಳ ಎದುರೇ..!
ಅಸಲು, ಹಾಗೆ ವಿದ್ಯುತ್ ತಂತಿ ಹಾದು ಹೋಗಿತ್ತು ಅನ್ನೊದಕ್ಕಿಂತ ಆ ಕಾರ್ಯಕ್ರಮದ ಆಯೋಜಕರೇ ಹಾಗೆ ಬೇಜಾವಾಬ್ದಾರಿ ತೋರಿಸಿದ್ರು. ಇದು ಖುದ್ದು ಆ ಕ್ಲಾಸ್ ನಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ಆತಂಕಕ್ಕೂ ಕಾರಣವಾಗಿತ್ತು. ನಿಜ ಅಂದ್ರೆ, ಶಿಕ್ಷಣ ಇಲಾಖೆಯ ದೊಡ್ಡ ದೊಡ್ಡ ತಾಲೂಕಾಧಿಕಾರಿಗಳೇ ಅಲ್ಲಿ ಹಾಜರಿದ್ರು. ಆದ್ರೂ ಆ ಅಧಿಕಾರಿಗಳ‌ ಕಣ್ಣಿಗೆ ಇದೇಲ್ಲ ಕಾಣಲೇ ಇಲ್ಲ. ಅವ್ರು ಸಚಿವರ ಆಗಮನಕ್ಕಾಗಿ ಕಾಯುತ್ತ ಹರಟೆ ಹೊಡೆಯುವುದರಲ್ಲೇ ಬ್ಯುಸಿಯಾಗಿದ್ರು.

ತುಂಡು ತುಂಡಾದ ವೈಯರ್..!
ಅಂದಹಾಗೆ, ಸಚಿವರು ನೂತನವಾಗಿ ನಿರ್ಮಾಣಗೊಳ್ಳುತ್ತಿರೋ ಶಾಲಾ ಕಟ್ಟಡದ ಶಂಕು ಸ್ಥಾಪನೆಗೆ ಬಂದಿದ್ರು. ಹಾಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸೌಂಡ ಸಿಸ್ಟಂ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ, ಹಾಗೆ ಸೌಂಡ್ ಸಿಸ್ಟಂ ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತುಂಡು ತುಂಡಾದ ವಿದ್ಯುತ್ ವೈಯರ್ ಬಳಸಲಾಗಿತ್ತು.

ಅನಾಹುತವಾಗಿದ್ರೆ ಯಾರು ಹೊಣೆ..?
ಇನ್ನು, ವಿದ್ಯುತ್ ಸಂಪರ್ಕ ಕಲ್ಪಿಸಲು ಅಳವಡಿಸಲಾಗಿದ್ದ ವಿದ್ಯುತ್ ವೈಯರ್ ಶಾಲಾ ಕೊಠಡಿಯ ಬಾಗಿಲಿನಿಂದ ಮಕ್ಕಳ ಕಾಲಡಿಯಲ್ಲೇ ಬಿದ್ದಿತ್ತು. ಹಾಗೇನಾದ್ರೂ, ವಿದ್ಯುತ್ ವೈಯರ್ ಕಟ್ ಆಗಿ ಮಕ್ಕಳಿಗೆ ತಾಗಿ ಅನಾಹುತವಾಗಿದ್ರೆ ಯಾರು ಹೊಣೆ ಅನ್ನೋ ಪ್ರಶ್ನೆ ಎದುರಾಗಿತ್ತು. ಇಂತಹದ್ದೊಂದು ಆತಂಕವನ್ನು ಖುದ್ದು ಆ ಕೊಠಡಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೂ ವ್ಯಕ್ತ ಪಡಿಸಿದ್ರು.

ಕಣ್ಣೇ ಇಲ್ವಾ ಅಧಿಕಾರಿಗಳೇ..?
ದುರಂತ ಅಂದ್ರೆ, ಇದೇಲ್ಲ ಅದೇನೋ ಶಿಕ್ಷಣ ಸಂಯೋಜಕರು ಅದೂ ಇದೂ ಅಂತೇಲ್ಲ ಹುದ್ದೆ ಹೊತ್ತವರ ಎದುರೇ ಆಗಿದ್ದ ಅಚಾತುರ್ಯ. ಹೀಗಿದ್ದಾಗ, ಇವ್ರಿಗೇಲ್ಲ ವಿದ್ಯಾರ್ಥಿಗಳ ಬಗೆಗಿನ ಕಾಳಜಿ ಮತ್ತು ಜವಾಬ್ದಾರಿ ಅದೇಷ್ಟರ ಮಟ್ಟಿಗೆ ಇದೆ ಅನ್ನೋದನ್ನ ನೀವೇ ಅರ್ಥೈಸಿಕೊಳ್ಳಿ.. ನಿಜಕ್ಕೂ ಬೇಸರವೆನಿಸುತ್ತೆ. ಹಾಗಿದ್ರೆ, ಇಂತಹ ಬೇಜವಾಬ್ದಾರಿ ತೋರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವವರು ಯಾರು..? ಮುಂದೆ ಹೀಗಾಗದಂತೆ ಎಚ್ಚರಿಸೋರು ಯಾರು..?

error: Content is protected !!