ಇಂದೂರು ಸಮೀಪ ಮರಕ್ಕೆ ಡಿಕ್ಕಿ ಹೊಡೆದ ಕಾರ್, ನಾಲ್ವರಿಗೆ ಗಾಯ, ಆಸ್ಪತ್ರೆಗೆ ದಾಖಲು..!


ಮುಂಡಗೋಡ: ಇಂದೂರು ಕೊಪ್ಪ ಸಮೀಪದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಹಳೆಯರೂ ಸೇರಿ ನಾಲ್ವರಿಗೆ ಗಾಯವಾಗಿದೆ.

ಇಂದೂರಿನಿಂದ ಮುಂಡಗೋಡ ಕಡೆಗೆ ಹೊರಟಿದ್ದ ಕಾರ್ ನಂ. KA-31-N-5760 ನಂಬರಿನ ಕಾರ್ ವೇಗವಾಗಿ ಬಂದಿದೆ. ಅತಿವೇಗದಿಂದ ಚಾಲನೆ ಮಾಡುತ್ತಿದ್ದ ಚಾಲಕನ ನಿಯಂತ್ರಣ ತಪ್ಪಿ, ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಅದ್ರೆ ಅದೃಷ್ಟವಶಾತ್ ಬೈಕ್ ಗೆ ಡಿಕ್ಕಿ ಹೊಡೆದಿಲ್ಲ. ಬದಲಾಗಿ ವೇಗವಾಗಿ ಬಂದು ಬೃಹತ್ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ.

ಕಾರ್ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಹೀಗಾಗಿ, ಕಾರಲ್ಲಿದ್ದ ಮಹಿಳೆಯರೂ ಸೇರಿ ಐವರು ಕಾರಲ್ಲೇ ಸಿಲುಕಿದ್ದಾರೆ. ಹೊರಬರಲು ಚೀರಾಟ ಶುರುವಿಟ್ಟಿದ್ದಾರೆ. ತಕ್ಷಣವೇ ಸ್ಥಳೀಯರು ಪಲ್ಟಿಯಾದ ಕಾರನ್ನು ಮೇಲಕ್ಕೆ ಎತ್ತಿ ಕಾರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಇನ್ನು ಡಿಕ್ಕಿಯ ರಭಸಕ್ಕೆ ಕಾರಿನ ಎಂಜಿನ್ ನಲ್ಲಿ ಹೊಗೆ ತುಂಬಿಕೊಂಡು ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇನ್ನು, ಘಟನೆಯಲ್ಲಿ ತೀವ್ರ ಗಾಯದಿಂದ ಬಳಲುತ್ತಿದ್ದ ಮಹಿಳೆಯರೂ ಸೇರಿದಂತೆ ನಾಲ್ವರನ್ನು ಮುಂಡಗೋಡ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ನಲ್ಲಿ ಚಾಲಕನ ಅಜಾಗರುಕತೆ ಹಾಗೂ ವೇಗದ ಚಾಲನೆಯಿಂದ ಅನಾಹುತ ನಡೆದಿದೆ

error: Content is protected !!