ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್ ಕಳ್ಳತನ ಮಾಡಿದ್ದ ಅಂತರ ಜಿಲ್ಲಾ ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ತಾಲೂಕಿನ ಕಾತೂರ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಲಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪದ ಅನಿಲ್ ಶಿವಪ್ಪ ಬಂಡಿವಡ್ಡರ ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಜೂನ್ 6..
ಅಂದಹಾಗೆ, ಜೂನ್ 6 ರಂದು ಕಾತೂರಿನ ಸಿರಾಜ್ ಬಾಷಾಸಾಬ್ ಬೊಮ್ಮನಳ್ಳಿ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಸ್ಪೆಂಡರ್ ಪ್ರೊ ಬೈಕ್, ಬೆಳಗಾಗುವಷ್ಟರಲ್ಲೇ ಕಳ್ಳರು ಎಗರಿಸಿಕೊಂಡು ಹೋಗಿದ್ದರು‌. ಹೀಗಾಗಿ, ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಿರಾಜ್ ಬೊಮ್ಮನಳ್ಳಿ ಕಳೆದು ಹೋಗಿದ್ದ ಬೈಕ್ ಹುಡುಕಿಕೊಡುವಂತೆ ಮನವಿ ಮಾಡಿದ್ದರು. ಹೀಗಾಗಿ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಬೈಕ್‌ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಬಂಧಿಸಿ ತಂದಿದ್ದಾರೆ.

ಈ ಪ್ರಕರಣವನ್ನು ಭೇದಿಸಲು ಎಸ್ಪಿ ಡಾ. ಸುಮನ ಪೆನ್ನೆಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಬದರಿನಾಥ, ಶಿರಸಿ ಡಿವೈಎಸ್ಪಿ ರವಿ ಡಿ, ನಾಯ್ಕ ರವರ ಮಾರ್ಗದರ್ಶನದಲ್ಲಿ ಪಿಐ ಸಿದ್ದಪ್ಪ ಎಸ್‌. ಸಿಮಾನಿ, ಪಿಎಸ್ಐ ಬಸವರಾಜ ಮಬನೂರ, ಕ್ರೈಂ ಪಿಸ್ಐ ಎನ್.ಡಿ.ಜಕ್ಕಣ್ಣವರ, ಎಎಸ್ಐ ಮಣಿಮಾಲನ ಮೆಸ್ತ್ರಿ ಹಾಗೂ ಸಿಬ್ಬಂದಿಗಳಾದ ಸಲೀಂ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ್‌ ಲಮಾಣಿ, ವಿವೇಕ ಪಟಗಾರ, ಸಹದೇವ, ಶರತ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ರು‌.

error: Content is protected !!