ಹುನಗುಂದದಲ್ಲಿ ಮನೆಯಲ್ಲೇ ಯುವಕ ನೇಣಿಗೆ ಶರಣು..!

ಹುನಗುಂದದಲ್ಲಿ ಮನೆಯಲ್ಲೇ ಯುವಕ ನೇಣಿಗೆ ಶರಣು..!

ಮುಂಡಗೋಡ: ಯುವಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುನಗುಂದ ದೇಶಪಾಂಡೆ ನಗರದಲ್ಲಿ ನಡೆದಿದೆ. ಸಂಜೀವ್ ಫಕ್ಕೀರಪ್ಪ ಹೊನ್ನಳ್ಳಿ(30) ನೇಣಿಗೆ ಶರಣಾದ ಯುವಕನಾಗಿದ್ದಾನೆ. ರಾತ್ರಿ 8 ಗಂಟೆಯ ಹೊತ್ತಿಗೆ ಮನೆಯಲ್ಲೇ ಎಲ್ಲರೊಂದಿಗೆ ಇದ್ದ ಮೃತ ಯುವಕ, ಮನೆಯವರೇಲ್ಲರೂ ಹೊರಗಡೆ ಕುಳಿತಿದ್ದಾಗ, ಒಳಗೆ ಹೋಗಿ ಮನೆಯ ಜಂತಿಗೆ ನೇಣು ಬಿಗಿದುಕೊಂಡಿದ್ದಾನೆ. ಪೋಷಕರು ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಅಷ್ಟೊತ್ತಿಗಾಗಲೇ ಯುವಕ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮುಂಡಗೋಡ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಪೊಲೀಸರದು ಇದೇಂಥಾ ದೈನೇಸಿ ಸ್ಥಿತಿ..? ಪವಿತ್ರ ಯೂನಿಫಾರ್ಮಗೂ ಬೆಲೆಯಿಲ್ವಾ..?

ಈ ಪೊಲೀಸರದು ಇದೇಂಥಾ ದೈನೇಸಿ ಸ್ಥಿತಿ..? ಪವಿತ್ರ ಯೂನಿಫಾರ್ಮಗೂ ಬೆಲೆಯಿಲ್ವಾ..?

ಬೆಳಗಾವಿ: ಪೊಲೀಸರಿಗೆ ಇಂಥಾ ದೈನೇಸಿ ಸ್ಥಿತಿ ಬಂತಾ ರಾಜ್ಯದಲ್ಲಿ..? ಬೆಳಗಾವಿ ಜಿಲ್ಲೆಯ ಕಿತ್ತೂರಿನ ಈ ಖಾಕಿಗಳ ವರ್ತನೆ ನೋಡಿದ್ರೆ ಈ ಪ್ರಶ್ನೆ ಸಹಜವಾಗೇ ಹುಟ್ಟತ್ತೆ. ಈ ಖಾಕಿಗಳಿಗೆ ಕನಿಷ್ಟ ಪಕ್ಷ ತಮ್ಮ ಮೈಮೇಲಿನ ಪವಿತ್ರ ಯೂನಿಫಾರ್ಮ ಬಗ್ಗೆನೂ ಖಬರು ಇಲ್ವಾ..? ಥೂ ಇವ್ರ ಜನ್ಮಕ್ಕಿಷ್ಟು.. ಹೀಗೇಲ್ಲ ಛೀ.. ಥೂ ಅಂತಿದ್ದಾರೆ ಜನ. ಯಾಕಂದ್ರೆ, ಅದ್ಯಾವನೋ ರಾಜಕಾರಣಿಯ ಹುಟ್ಟು ಹಬ್ಬ ಅಂದ್ರೆ ಈ ಪೊಲೀಸರೇಲ್ಲ ಹೂ ಮಳೆ ಸುರಿಸ್ತಿದಾರೆ. ಹೌದು, ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳು ಶಾಸಕರನ್ನು ಹಾಗೂ ಅವರ ಪತ್ನಿಯನ್ನು ರಾಜ-ರಾಣಿಯಂತೆ ಕೂರಿಸಿ ಅವರ ಮೇಲೆ ಹೂಮಳೆಗರೆದ ಘಟನೆ ಇನ್ನಿಲ್ಲದ ವಿವಾದಕ್ಕೆ ಕಾರಣವಾಗಿದೆ. ಆಗಿದ್ದಿಷ್ಟು..! ಶಾಸಕ ಮಹಾಂತೇಶ್ ದೊಡ್ಡಗೌಡರ್ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿದ್ದ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಸಾತೇನಹಳ್ಳಿ, ನೇಸರಗಿ ಪೊಲೀಸ್ ಠಾಣೆ ಪಿಎಸ್ ಐ ಶೀಗಿಹಳ್ಳಿ, ಎಸ್ಐ ವಿಶ್ವನಾಥ್ ಮಲ್ಲಣ್ಣವರ್ ಸೇರಿದಂತೆ ಪೊಲೀಸ್...

ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!

ಕಳ್ಳತನ ಕೇಸ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಪರಿಶೀಲನೆ..!

ಮುಂಡಗೋಡ: ಪಟ್ಟಣದಲ್ಲಿ ಇಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ‌. ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ಹಾಗೂ ಶ್ರೀ ಶಕ್ತಿ ಪೋಟೋ ಸ್ಟುಡಿಯೋದಲ್ಲಿ ಕಳ್ಳತನವಾದ ಹಿನ್ನೆಲೆ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ರು.

ಚಲಿಸುತ್ತಿದ್ದ ಟ್ಯಾಂಕರ್ ನಿಂದ ಉರುಳಿಬಿದ್ದ ಗ್ಯಾಸ್ ಟ್ಯಾಂಕ್..! ತಪ್ಪಿದ ಭಾರಿ ಅನಾಹುತ..!!

ಚಲಿಸುತ್ತಿದ್ದ ಟ್ಯಾಂಕರ್ ನಿಂದ ಉರುಳಿಬಿದ್ದ ಗ್ಯಾಸ್ ಟ್ಯಾಂಕ್..! ತಪ್ಪಿದ ಭಾರಿ ಅನಾಹುತ..!!

ಯಲ್ಲಾಪುರ: ಸಮೀಪದ ಅರೆಬೈಲ್ ಘಟ್ಟದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಚಲಿಸುತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಪರಿಣಾಮ ಭಾರೀ ಆತಂಕ ಮನೆಮಾಡಿತ್ತು. ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಹೊರಟಿದ್ದ, ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕ್ ಹೊತ್ತೊಯ್ಯುತಿದ್ದ ಟ್ಯಾಂಕರ್ ಇದಾಗಿದ್ದು, ಸ್ಥಳಕ್ಕೆ ತಕ್ಷಣದಲ್ಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದರಿಂದ ಗ್ಯಾಸ್ ಲೀಕ್ ಆಗದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದಿದ್ದಾರೆ. ಹೀಗಾಗಿ, ಕೆಲ ಹೊತ್ತು ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 63 ಸಂಪೂರ್ಣ ಬಂದ್ ಆಗಿತ್ತು.

12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!

12 ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿ ಮಾಜಿ ಪೊಲೀಸಪ್ಪ ಅಂದರ್..!

ಮುಂಡಗೋಡ: ಪೊಲೀಸ್ ಇಲಾಖೆಯಲ್ಲಿ ನೌಕರಿ ಕೊಡಿಸ್ತಿನಿ ಅಂತಾ ನಂಬಿಸಿ, 12 ಜನ ಯುವಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಷರಶಃ ಭೂಗತನಾಗಿ ತಲೆಮರೆಸಿಕೊಂಡಿದ್ದ ಬಂಧಿತ, ವಂಚನೆಯ ಆರೋಪಿ ಸಂತೋಷ ಗುದಗಿಯನ್ನು ಮುಂಡಗೋಡ ಪೊಲೀಸರು ಬಂಧಿಸಿ ಇನ್ನೇನು ಸಂಜೆಯಷ್ಟೊತ್ತಿಗೆ ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಇನ್ನು ಈ ವಂಚಕ ಆರೋಪಿಯನ್ನ ಮುಂಡಗೋಡ ಪೊಲೀಸರು ಬಂಧಿಸಿದ್ದೇ ರೋಚಕ ಕಣ್ರಿ.. ನಿನ್ನೆಯ ಕತೆ ಮುಂದುವರಿದ ಭಾಗ..! ಅದು ಕಳೆದ ಮಂಗಳವಾರ, ಮುಂಡಗೋಡ ಪೊಲೀಸರು, ವಂಚನೆಗೊಳಗಾದ ಯುವಕರು ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಎಳೆದು ತರೋಕೆ ಅಂತಾ ಆತನ ಊರು ಬ್ಯಾಡಗಿಗೆ ಹೋಗ್ತಾರೆ. ಅಲ್ಲಿ, ಆತನ ಪತ್ನಿ ಅರಿಯದೇ ನೀಡಿದ ಸಣ್ಣದೊಂದು ಸುಳಿವಿನ ಮೂಲಕ, ಬೆಳಗಾವಿಯ KLE ಅಂಗಳಕ್ಕೆ ಬಂದು ನಿಲ್ತಾರೆ ನಮ್ಮ ಪೊಲೀಸರು. ಬೆಳಗಾವಿಯ ಅದೊಂದು ವಿಶ್ರಾಂತಿ ಗೃಹದಲ್ಲಿ ವಂಚನೆಯ ಆರೋಪಿ ಸಂತೋಷನ ಎದುರು ಮುಂಡಗೋಡ ಪೊಲೀಸರು ನಿಂತಾಗ ಸುಖದ ನಿದ್ದೆಯಲ್ಲಿದ್ದ. ಹೀಗಾಗಿ, ಅಲ್ಲಿ ಏನು ನಡಿತಿದೆ ಅಂತಾನೇ ಅವನಿಗೆ...

ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಮುಂಡಗೋಡ: ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ದೋಚಿದ ಕಳ್ಳ ಕೊನೆಗೂ ತನ್ನ ಕುರುಹು ಬಿಟ್ಟು ಹೋಗಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿ ಮೊಬೈಲ್ ಎಗರಿಸೋ ಅಷ್ಟೂ ದೃಷ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. “ಕತ್ತಲಿನಲ್ಲಿ ಯಾರಯ್ಯಾ ನನ್ನ ನೋಡ್ತಾರೆ” ಅಂತಾ ಬೆಳ್ಳಂ ಬೆಳಿಗ್ಗೆ ನಾಲ್ಕೂವರೇ ಹೊತ್ತಲ್ಲಿ, ಪುಟ್ಟದೊಂದು ಮೊಬೈಲ್ ಟಾರ್ಚ್ ಬೆಳಕಲ್ಲೇ ಮೊಬೈಲ್ ಅಂಗಡಿಗೆ ಕನ್ನ ಹಾಕೋ ಖದೀಮ, ತನ್ನ ಲೀಲೆಗಳನ್ನು ಅಲ್ಲೇ ಕಣ್ಣರಳಿಸಿ ಕೂತಿರೋ ಸಿಸಿಟಿವಿ ದಾಖಲಿಸಿಕೊಳ್ಳತ್ತೆ ಅಂತಾ ಬಹುಶಃ ಆತನಿಗೆ ಗೊತ್ತಿರಲಿಲ್ಲವೇನೋ. ಅಂದಹಾಗೆ, ಈ ಸಿಸಿಟಿವಿಯಲ್ಲಿ ಸೆರೆಯಾಗಿರೋ ಕಳ್ಳನ ಮುಖ ಚಹರೆ ನೋಡಿದ್ರೆ, ಇವನನ್ನ ಇಲ್ಲೇ ಎಲ್ಲೋ ನೋಡಿದಿನಲ್ಲ..? ಅನ್ನುವಷ್ಟು ಪರಿಚಿತನ ಹಾಗೆ ಕಾಣ್ತಿದಾನೆ. ಆದ್ರೆ ಯಾವುದೂ ಸ್ಪಷ್ಟತೆಯಿಲ್ಲ. ಹಾಗಾದ್ರೆ, ಇಂದು ನಡೆದಿರೋ ಎರಡೂ ಕಳ್ಳತನ ಕೇಸ್ ನಲ್ಲೂ ಇವನದ್ದೇ ಕರಾಮತ್ತಾ..? ಈತನ ಜೊತೆ ಮತ್ಯಾರಾದ್ರೂ ಬಂದು ಏಕಕಾಲದಲ್ಲೇ ಎರಡೆರಡು ಕಡೆ ದೋಚಿದ್ರಾ..? ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಮುಂಡಗೋಡ: ಪಟ್ಟಣದಲ್ಲಿ ರಾತ್ರಿ ಮತ್ತೊಂದು ಕಳ್ಳತನ ನಡೆದಿದೆ. ಶ್ರೀ ಮೊಬೈಲ್ ಶಾಪ್ ದೋಚಿದ ಹಾಗೇ, ಅದೇ ಮಾದರಿಯಲ್ಲಿ ಯಲ್ಲಾಪುರ ರಸ್ತೆಯ ಶ್ರೀ ಶಕ್ತಿ ಪೋಟೋ ಸ್ಟುಡಿಯೋಗೆ ನುಗ್ಗಿ ಬೆಲೆ ಬಾಳುವ ವಿಡಿಯೊ ಕ್ಯಾಮೆರಾ, ಪೋಟೊ ಕ್ಯಾಮೆರಾ, ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತಗಳನ್ನು ಎಗರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಹುಶಃ, ನಿನ್ನೆ ರಾತ್ರಿ ಮೊಬೈಲ್ ಶಾಪ್ ದೋಚಿರೋ ಕಳ್ಳರೇ, ಪೋಟೋ ಸ್ಟುಡಿಯೋಗೂ ನುಗ್ಗಿರೋ ಸಾಧ್ಯತೆ ಇದೆ. ಇನ್ನು ಯಲ್ಲಾಪುರ ರಸ್ತೆಯ ಈ ಏರಿಯಾದಲ್ಲಿ ಕಳ್ಳರು ಅಷ್ಟೊಂದು ಲೀಲಾಜಾಲವಾಗಿ ಎರಡೆರಡು ಕಡೆ ಅದ್ಹೇಗೆ ಕಳ್ಳತನ ಮಾಡಿದ್ರು..? ಹಾಗಾದ್ರೆ, ರಾತ್ರಿ ಪೊಲೀಸರ ಗಸ್ತು ಇರಲ್ವಾ..? ಇದೇಲ್ಲ ಮುಂಡಗೋಡಿಗರಿಗೆ ಸಹಜವಾಗೇ ಆತಂಕ ಹುಟ್ಟಿಸಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ.

ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡ: ಪಟ್ಟಣದಲ್ಲಿ ಅದ್ಯಾಕೋ ಏನೋ ಕಳ್ಳರ ಕೈಚಳಕಗಳು ಕಡಿಮೆಯೇ ಆಗುತ್ತಿಲ್ಲ‌. ಪಟ್ಟಣದ ವೈನ್ ಶಾಪ್ ಕಳ್ಳತನ ನಡೆದು ಇನ್ನೂ ತಿಂಗಳಾಗಿಲ್ಲ, ಈಗ ಮತ್ತೆ ಮೊಬೈಲ್ ಅಂಗಡಿಯೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ನಿನ್ನೆ ರಾತ್ರಿ, ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ ಶ್ರೀಧರ್ ಉಪ್ಪಾರ್ ಎಂಬುವವರ “ಶ್ರೀ ಮೊಬೈಲ್” ಶಾಪ್ ನ ಮೇಲ್ಚಾವಣಿ ತೆಗೆದ ಒಳನುಗ್ಗಿರೋ ಕಳ್ಳರು ಬೆಲೆಬಾಳುವ ಮೊಬೈಲ್ ಸೇರಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ ಅಂತಾ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದ್ರೆ, ಕಳ್ಳತನವಾದ ವಸ್ತುಗಳ ಅಸಲೀ ಮೌಲ್ಯ ಎಷ್ಟು, ಎನೇನು ಕಳ್ಳತನವಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸ್ಪೀಕರ್ ಕಾಗೇರಿಯವರ ಸಂಸ್ಕೃತ ಶ್ಲೋಕ ಪಠಣ ಹೇಗಿದೆ ಗೊತ್ತಾ..?

ಸ್ಪೀಕರ್ ಕಾಗೇರಿಯವರ ಸಂಸ್ಕೃತ ಶ್ಲೋಕ ಪಠಣ ಹೇಗಿದೆ ಗೊತ್ತಾ..?

ಸಿದ್ದಾಪುರ: ಸರಳತೆ, ಸಜ್ಜನಿಕೆಯಿಂದ ಹೆಸರಾಗಿರೋ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಸ್ಕೃತ ಗುರುವಾಗಿದ್ದರು‌. ಸಿದ್ದಾಪುರ ತಾಲೂಕಿನ ಕೊರ್ಲಕೈ ಪಂಚಾಯ್ತಿ ವ್ಯಾಪ್ತಿಯ ಜಿಡ್ಡಿ ಶಾಲೆಯ ಕೊಠಡಿ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಆಗನಿಸಿದ್ದ ಅವ್ರು, ಈ ಸಂದರ್ಭದಲ್ಲಿ ಮಕ್ಕಳಿಗೆ ಸಂಸ್ಕೃತ ಮಂತ್ರವನ್ನು ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಮಕ್ಕಳು ಸಂಸ್ಕೃತ ಶ್ಲೋಕವನ್ನು ಹೇಳಿದಾಗ ಸಂತಸಗೊಂಡ ಸ್ಪೀಕರ್ ಕಾಗೇರಿಯವರು ಮಕ್ಕಳನ್ನು ಕರೆದು ಸಂಸ್ಕೃತ ಶ್ಲೋಕವನ್ನು ಹೇಳಿಕೊಡುವ ಮೂಲಕ ಮಕ್ಕಳಿಗೆ ಗುರುವಾದರು. ಸ್ಪಷ್ಟ ಉಚ್ಚಾರದೊಂದಿಗೆ ಸಂಸ್ಕೃತ ಮಂತ್ರ ಪಠಣ ಮಾಡಿದ್ದು ಅವ್ರ ಅಭಿಮಾನಿಗಳಿಗೆ ಸಂತಸ ಮತ್ತು ಆಶ್ಚರ್ಯ ತಂದಿದೆ‌.

ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?

ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?

ಖಾಕಿ ಪಡೆಯಲ್ಲೂ ಇನ್ನಿಲ್ಲದ ಎತ್ತುವಳಿ ಶೂರರಿದ್ದಾರೆ, ಅವ್ರಿಂದ ಹುಶಾರಾಗಿರಿ ಅಂತಾ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಇತ್ತಿಚೇಗಷ್ಟೇ ಖಡಕ್ಕಾಗಿ ಹೇಳಿದ್ರು‌. ಅಲ್ದೇ ಹಿರಿಯ ಅಧಿಕಾರಿಗಳ ಹೆಸ್ರಲ್ಲಿ ದುಡ್ಡು ಪೀಕೊ ಕೆಲ ಪೊಲೀಸರು, ವಂಚಕರು ದಂಧೆಗೆ ಇಳಿದಿದ್ದಾರೆ. ಅಂತವರಿಗೆ ಯಾರೂ ಬಿಡಿಗಾಸೂ ಕೊಡಬೇಡಿ, ಹಾಗೇನಾದ್ರೂ ಕೇಳಿದ್ರೆ ನೇರವಾಗಿ ನಂಗೆ ಕಂಪ್ಲೇಂಟ್ ಕೊಡಿ ಅಂತಾ ಖಡಕ್ಕಾದ ಮಾತು ಹೇಳಿದ್ರು. ಹಾಗಾದ್ರೆ, ಅವ್ರು ಇಂತವರನ್ನ ನೋಡಿಯೇ ಹೇಳಿದ್ರಾ..? ಗೊತ್ತಿಲ್ಲ. ಹಾಗಾದ್ರೆ, ಎಸ್ಪಿ ಸಾಹೇಬ್ರು ಹೇಳಿದ್ದಾದ್ರೂ ಏನು ಒಮ್ಮೆ ಕೇಳಿ, ಆಮೇಲೆ ಮುಂದಿನ ವಿಷಯಕ್ಕೆ ಬರೋಣ.. ಇಲ್ಲಿ ಇದನ್ಯಾಕಪ್ಪಾ ಹೇಳ್ತಿದಿನಿ ಅಂದ್ರೆ, ಇಲ್ಲೊಬ್ಬ ಖತರ್ನಾಕ ಮಾಜಿ ಪೊಲೀಸಪ್ಪ ಮಾಡಬಾರದ ಕೆಲಸ ಮಾಡಿ ನಾಪತ್ತೆಯಾಗಿದ್ದಾನೆ ಅನ್ನೊ ಆರೋಪ ಕೇಳಿ ಬಂದಿದೆ. ಅದೇಂತದ್ದೋ ಹೈ ಲೇವೆಲ್ ಕಾಂಟ್ಯಾಕ್ಟ್ ಹೆಸ್ರಲ್ಲಿ ಹಲವು ಜನರ ಜೀವ ಹಿಂಡಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸ್ತಿನಿ ಅಂತಾ ಬರೋಬ್ಬರಿ 12 ಜನ ಅಭ್ಯರ್ಥಿಗಳಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಒಬ್ಬೊಬ್ಬರಿಂದ 2 ಲಕ್ಷ ಹಣ ಪಡೆದು...

error: Content is protected !!