ಮುಂಡಗೋಡ : ತಾಲೂಕಿನ ಬಸಾಪುರದಲ್ಲಿ KSRTC ಚಾಲಕ ಹಾಗೂ ನಿರ್ವಾಹಕನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದ್ದು ಸದ್ಯ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ಬಸ್ ನಿಲ್ಲಿಸಿದ್ರೂ ಹಲ್ಲೆ..?
ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, “ಮುಂಡಗೋಡ ಹುಲಿಹೊಂಡ ಮುಂಡಗೋಡ” ಬಸ್, KA-42-F-1309 ಸಂಖ್ಯೆಯ KSRTC ಬಸ್ ನಲ್ಲಿ ಓರ್ವ ಯುವಕ ಬಸ್ ಹತ್ತಲು ಬಂದಿದ್ದ ಎನ್ನಲಾಗಿದೆ‌. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್ ಗೆ ಕೂಗಿ ನಿಲ್ಲಿಸಿದ್ದಾರೆ. ಆದ್ರೆ ಬಸ್ ನಿಲ್ಲಿಸಿದ್ರೂ ಮತ್ತೋರ್ವ ಯುವಕ ಏಕಾಏಕಿ ಬಂದು ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ದೆ, ಬಸ್ ನಿಂದ ಚಾಲಕನನ್ನು ಎಳೆದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಪರಿಣಾಮ ಚಾಲಕನ ಕೈಗೆ ಗಾಯವಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ.

ಯುವಕರು ಪರಾರಿ..?
ಹಾಗೆ, ಚಾಲಕನ ಮೇಲೆ ಹಲ್ಲೆ ಮಾಡಿ ಇನ್ನೇನು ಘಟನೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತೆ ಅಂತಾ ತಿಳಿದ ತಕ್ಷಣವೇ ಹಲ್ಲೆ‌ಮಾಡಿರೋ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಬಸಾಪುರ ಗ್ರಾಮಸ್ಥರು ಪ್ರಕರಣ ರಾಜೀ ಮಾಡಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಹಲ್ಲೆಗೊಳಗಾದ ಚಾಲಕ ಮುಂಡಗೋಡ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಲು ಬಂದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

error: Content is protected !!