ಮುಂಡಗೋಡ: ತಾಲೂಕಿನ ಸನವಳ್ಳಿ ಭಾಗದಲ್ಲಿ ಕಾಡುಹಂದಿಗಳು ಅಡಕೆ ಸಸಿಗಳನ್ನು ತಿಂದು ಕಿತ್ತು ಹಾಕುವ ಮೂಲಕ ರೈತರಿಗೆ ಅಪಾರ ಪ್ರಮಾಣದ ಹಾನಿ ಪಡಿಸುತ್ತಿರುವುದು ಕಂಡು ಬಂದಿದೆ.
ಕಳೆದ ಹದಿನೈದು ದಿನಗಳಿಂದ ಸನವಳ್ಳಿ ಭಾಗದಲ್ಲಿ ಕಾಡುಹಂದಿಗಳು ಹೆಚ್ಚಾಗಿ ಸಂಚರಿಸುತ್ತಿದ್ದು ರಾತ್ರಿ ವೇಳೆ ಗದ್ದೆಗಳಿಗೆ ದಾಳಿ ನಡೆಸುವ ಕಾಡು ಹಂದಿಗಳು ಅಡಿಕೆ ಸಸಿಗಳನ್ನು ಕಿತ್ತು ಹಾಕುತ್ತಿವೆ.
ಎರಡ್ಮೂರು ರೈತರಿಗೆ ಸೇರಿದ ನೂರಾರು ಅಡಕೆ ಸಸಿಗಳನ್ನು ಕಿತ್ತು ಹಾಕಿವೆ ವರ್ಷವಿಡಿ ಕಷ್ಟಪಟ್ಟು ಬೆಳೆಸಿದ್ದ ಅಡಕೆ ಸಸಿಗಳು ಈಗ ಕಾಡುಹಂದಿಗಳು ನಾಶ ಪಡಿಸುತ್ತಿರುವುದು ರೈತರಿಗೆ ದಿಕ್ಕು ತೋಚದಂತಾಗಿದೆ.
ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುತ್ತೆವೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.