ಮುಂಡಗೋಡ: ತಾಲೂಕಿನ ಅಜ್ಜಳ್ಳಿಯಲ್ಲಿ ತೋಟದ ಜಮೀನಿನಲ್ಲಿ ಬಂದು ಅವಾಚ್ಯವಾಗಿ ಬೈದು ಹಲ್ಲೆ ಮಾಡಲಾಗಿದೆ ಅಂತಾ ಆರೋಪಿಸಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹರೀಶ್ ವೆಂಕಟೇಶ ಪಾಟೀಲ ಎಂಬುವವರು ದೂರು ನೀಡಿದ್ದು, ಹನುಮಂತ ತಿಪ್ಪಣ್ಣ ಪಾಟೀಲ, ಪ್ರವೀಣ ತಿಪ್ಪಣ್ಣ ಪಾಟೀಲ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಜ್ಜಳ್ಳಿ ಗ್ರಾಮ ಸರ್ವೆ ನಂ. 33 ರಲ್ಲಿಯ ಜಾಗದ ಹಕ್ಕಿನ ವಿಷಯದಲ್ಲಿ 2016 ರಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿರೋ ಆರೋಪಿತರಿಬ್ಬರೂ ಅಕ್ರಮವಾಗಿ ತೋಟಕ್ಕೆ ನುಗ್ಗಿ ಅವಾಚ್ಯವಾಗಿ ಬೈದು ಕುಡುಗೋಲಿನಿಂದ ಹಲ್ಲೆ ಮಾಡಿದ್ದಾರೆ ಅಂತಾ ದೂರುದಾರರು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರೋ ಮುಂಡಗೋಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.