ಮುಂಡಗೋಡ: ತಾಲೂಕಿನಲ್ಲಿ ಇಂದು ಸೋಮವಾರ ಮತ್ತೆ ಕೊರೋನಾ ಅಟ್ಟಹಾಸ ಮೆರೆದಿದೆ. ತಾಲೂಕಿನಲ್ಲಿ ಇಂದು ಒಟ್ಟೂ 45 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 11 ವಿದ್ಯಾರ್ಥಿಗಳಲ್ಲಿ ಕೋವಿಡ್ ಹೆಮ್ಮಾರಿ ವಕ್ಕರಿಸಿದೆ. ಹೀಗಾಗಿ, ಮತ್ತೆ ತಾಲೂಕಿನಲ್ಲಿ ಪಾಲಕರಿಗೆ ಆತಂಕ ಶುರುವಾಗಿದೆ.
ಅದ್ರಂತೆ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ, ಕೋಡಂಬಿ, ಪಾಳಾ, ಇಂದೂರು, ನಂದಿಕಟ್ಟಾ, ಅಟ್ಟಣಗಿ, ಸೇರಿದಂತೆ ಮುಂಡಗೋಡ ಪಟ್ಟಣದಲ್ಲಿಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಲೊಯೊಲಾ ಶಿಕ್ಷಣ ಕೇಂದ್ರದ ಇಬ್ಬರು ವಿದ್ಯಾರ್ಥಿಗಳಿಗೆ ಇಂದು ಮತ್ತೆ ಸೋಂಕು ದೃಢ ಪಟ್ಟಿದೆ.