ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಇವತ್ತು ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೇ ವರ್ಷದ ಪುಟ್ಟ ಕಂದಮ್ಮ ಕೊಳಚೆ ತುಂಬಿದ್ದ ಗಟಾರಿನಲ್ಲಿ ಬಿದ್ದು ಒದ್ದಾಡಿದೆ. ಅದೃಷ್ಟವಶಾತ್ ಹಾಗೆ ಬಿದ್ದ ಪುಟ್ಟ ಮಗುವನ್ನು ತಕ್ಷಣವೇ ಅಜ್ಜಿ ಮೇಲಕ್ಕೆತ್ತಿದ್ದಾರೆ. ಇಲ್ಲವಾಗಿದ್ದರೆ, ಪುಟ್ಟ ಮಗು ಈಗ ನೆನಪಾಗಿ ಉಳಿಯುತ್ತಿತ್ತು ಅಷ್ಟೆ. ಮಗು ಬದುಕಿದ್ದೇ ಪುಣ್ಯ..! ಹೌದು, ನಂದಿಕಟ್ಟಾ ಗ್ರಾಮದ ಮಕ್ಬುಲ್ ಖಾನ್ ಶಾಹಪುರ್ ಎಂಬುವರ, ಒಂದೂವರೇ ವರ್ಷದ ಪುಟ್ಟ ಬಾಲಕಿ ಇವತ್ತು ಮದ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮನೆಯ ಮುಂದೆ ಇರೋ ಗಟಾರಿನಲ್ಲಿ ಬಿದ್ದು ಬಿಟ್ಟಿದೆ ಕಂದಮ್ಮ. ಸಂಪೂರ್ಣ ಕೊಳಚೆ ನೀರು ತುಂಬಿಕೊಂಡಿರೋ ಗಟಾರದಲ್ಲಿ ಇನ್ನೇನು ಮುಳುಗುವ ಹಂತದಲ್ಲಿದ್ದ ಪುಟ್ಟ ಮಗುವಿನ ಚೀರಾಟ ಮನೆಯೊಳಗೆ ಇದ್ದ ಅಜ್ಜಿಗೆ ಕೇಳಿಸಿದೆ. ತಕ್ಷಣವೇ ಧಾವಿಸಿ ಬಂದ ಅಜ್ಜಿ ತನ್ನ ಮೊಮ್ಮಗುವನ್ನು ಎತ್ತಿಕೊಂಡಿದ್ದಾರೆ. ಹೀಗಾಗಿ, ಕೊಳಚೆ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದ ಬಾಲಕಿ, ಇನ್ನೇನು ನಿಸ್ತೇಜ ಸ್ಥಿತಿಗೆ ಬರುವ ಹಂತದಲ್ಲಿತ್ತು. ತಕ್ಷಣವೇ ಮಗುವನ್ನು ನೀರಿನಿಂದ...
Top Stories
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಆ ಯುವಕನನ್ನು ಬರ್ಬರವಾಗಿ ಕೊಂದು ಬೀಸಾಕಿ ಹೋದ್ರಾ ಹಂತಕರು..?
ಶಿಗ್ಗಾವಿ: ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದ ಹೊರವಲಯದಲ್ಲಿ ವ್ಯಕ್ತಿಯೋರ್ವನ ಕೊಲೆ ಮಾಡಿ ಶವ ಬೀಸಾಕಿರೋ ಘಟನೆ ನಡೆದಿದೆ. ಉಮೇಶ್ ನಂದೇಣ್ಣವರ್(32) ಎಂಬುವವನೇ ಕೊಲೆಯಾಗಿದ್ದ ವ್ಯಕ್ತಿಯಾಗಿದ್ದು. ಹಿರೇಬೆಂಡಿಗೇರಿ ಗ್ರಾಮದ ಹೊರವಲಯದ ಬೆಳಗಲಿ ರಸ್ತೆಯ ಜಮೀನಿನಲ್ಲಿ ಕೊಲೆ ಮಾಡಿರೋ ದುಷ್ಕರ್ಮಿಗಳು, ಶವ ಎಸೆದು ಹೋಗಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದಾದ ಸಾಧ್ಯತೆಯಿದ್ದು, ತಡಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇಂದೂರಿನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದು ಚಿರತೆ ಮರಿನಾ..?
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಇಬ್ಬರು ಮಹಿಳೆಯರ ಮೇಲೆ ಚಿರತೆ ಮರಿ ದಾಳಿ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಗದ್ದೆಯ ಕೆಲಸಕ್ಕಾಗಿ ಹೋಗುತ್ತಿದ್ದ ವೇಳೆ ಎರಡು ಮರಿಗಳೊಂದಿಗೆ ಚಿರತೆ ಅಲ್ಲಿ ಕಂಡುಬಂದಿತ್ತು ಎನ್ನಲಾಗಿದೆ. ಆ ವೇಳೆ ತಾಯಿ ಚಿರತೆ ಮುಂದೆ ಹೋಗಿದೆ. ಆದ್ರೆ ಚಿರತೆ ಮರಿಗಳು ಮಾತ್ರ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿವೆ ಎನ್ನಲಾಗಿದೆ. ಇಬ್ಬರು ಮಹಿಳೆಯರ ಮೇಲೆ ಮರಿ ದಾಳಿ ಮಾಡಿದೆ ಆದ್ರೆ, ಅದ್ರಲ್ಲಿ ಓರ್ವ ಮಹಿಳೆ ಗೀತಾ ನಾಗಪ್ಪ ದೊಡ್ಮನಿ ಎಂಬುವವರಿಗೆ ಗಾಯವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ದಾಳಿ ಮಾಡಿದ ವೇಳೆ ಮಹಿಳೆಯರು ಕಿರುಚಾಡಿದ್ದಾರೆ. ಹೀಗಾಗಿ ಅಲ್ಲೇ ಇದ್ದ ಸಾರ್ವಜನಿಕರು ಬಂದು ಮರಿ ಯನ್ನೂ ಅಲ್ಲಿಂದ ಓಡಿಸಿದ್ದಾರೆ ಎನ್ನಾಲಾಗಿದೆ. ಘಟನೆಯಲ್ಲಿ ಓರ್ವ ಮಹಿಳೆಯ ಮುಖಕ್ಕೆ ಹಾಗೂ ಮೂಗಿಗೆ ಗಾಯವಾಗಿದ್ದು. ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಕೊರೋನಾ ಕಂಟಕ; ಹೊಸ ಮಾರ್ಗಸೂಚಿ ಹೊರಡಿಸಿದ ಡಿಸಿ..!
ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಹೀಗಾಗಿ, ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಿಲ್ಲಾಧ್ಯಂತ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಏನದು ಮಾರ್ಗಸೂಚಿ..? ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಇನ್ನು ಮುಂದೆ ದೇವಾಲಯಗಳಲ್ಲಿ ಸೇವೆಗೆ ಅವಕಾಶವಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮದುವೆಗೆ 50 ಜನರಷ್ಟೇ..! ಇನ್ನು, ಮದುವೆಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮದುವೆಗಳಿಗೆ ಆಯಾ ತಾಲೂಕಿನ ತಹಸೀಲ್ದಾರರ ಪೂರ್ವ ಅನುಮತಿ ಕಡ್ಡಾಯವಾಗಿರುತ್ತದೆ. ಅಲ್ದೆ, ಮದುವೆಗೆ ಸೇರಿದವರ ಫೋನ್ ನಂಬರ್ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಮದುವೆಗೆ ಬಂದವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಲ್ಲಿ 2 ದಿನಗಳೊಳಗಾಗಿ ಕೋವಿಡ್ ಟೆಸ್ಟ್ ಕಡ್ಡಾಯ. ಪ್ರವಾಸಿ ತಾಣಗಳ ಮೇಲೆ ಕಣ್ಣು..! ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಬೀಚ್ ಗಳಲ್ಲಿ 2 ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಪ್ರವಾಸಿಗರು...
ಸಚಿವರಾಗಿ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು..!
ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಶಿವರಾಮ್ ಹೆಬ್ಬಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ರು. ಅಂದಹಾಗೆ, ಸಚಿವರಾಗಿ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು ಇವು..!
ಹೆಬ್ಬಾರ್ ಸಚಿವರಾಗಿ ಪ್ರಮಾಣ ವಚನ; ಮುಂಡಗೋಡಿನಲ್ಲಿ ಬಿಜೆಪಿಗರ ಸಂಭ್ರಮ..!
ಮುಂಡಗೋಡ: ಶಾಸಕ ಶಿವರಾಮ್ ಹೆಬ್ಬಾರ್ ಎರಡನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸುತ್ತಿರೋ ಹಿನ್ನೆಲೆಯಲ್ಲಿ, ಇಂದು ಪ್ರಮಾಣ ವಚನ ಸ್ವೀಕರಿಸಿದ ವೇಳೆ ಮುಂಡಗೋಡಿನಲ್ಲಿ ಹೆಬ್ಬಾರ್ ಬೆಂಬಲಿಗರು ಸಂಭ್ರಮಿಸಿದ್ರು. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು , ಹೆಬ್ಬಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಈ ವೇಳೆ ಬಿಜೆಪಿ ಮುಖಂಡ ಸಿದ್ದಪ್ಪ ಹಡಪದ್, ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ, ಭರತ್ ಹದಳಗಿ, ಪ್ರಶಾಂತ್ ಲಮಾಣಿ, ರಾಮಣ್ಣ ಲಮಾಣಿ, ಯಲ್ಲಪ್ಪ ಮಜ್ಜಿಗೇರಿ, ಅಶೋಕ ಹಸರಂಬಿ ಸೇರಿದಂತೆ ಹಲವ್ರು ಭಾಗವಹಿಸಿದ್ರು.
ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ಬಂಧಿತ ಆರೋಪಿಗಳು ಇವರೇ ನೋಡಿ..!
ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಪಿಐ ಪ್ರಭುಗೌಡ ಹಾಗೂ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ, ಮಹ್ಮದ್ ಇರ್ಫಾನ್ ತಿಮ್ಮಾಪುರ, ಶೇಖ್ ಅಹ್ಮದ್ ಅಶ್ಪಕ್ ಬಂಧಿತ ಆರೋಪಿಗಳು. ಇನ್ನು, ಬಂಧಿತರಿಂದ 20 ಸಾವಿರ ಮೌಲ್ಯದ 628 ಗ್ರಾಂ ಗಾಂಜಾ ಹಾಗೂ 350 ರೂ. ನಗದು ಜಪ್ತಿ ಮಾಡಿದ್ದಾರೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ್ಯಾಸರ್ಗಿ ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಮನವಿ..!
ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನ್ಯಾಸರ್ಗಿ ಸೂರ್ಯನಾರಾಯಣ, ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಬಾಚಣಕಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಬಾಚಣಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಇದ್ದರು, ಅಯ್ಯಪ್ಪ ಭಜಂತ್ರಿ, ಉದಯ ಶಿರಾಲಿ, ವೆಂಕಟೇಶ್ ಕಾಟ್ವೆಕರ್, ಮಾಂತೇಶ್ ಕೇಣಿ, ಅಣ್ಣಪ್ಪ ಬೋವಿ ಸೇರಿದಂತೆ ಹಲವರು ಮನವಿ ಅರ್ಪಿಸಿದ್ರು.
ಪ್ರಮಾಣ ವಚನಕ್ಕೆ ರೆಡಿಯಾಗಿರಿ; ಶಿವರಾಮ್ ಹೆಬ್ಬಾರ್ ಗೆ ಸಿಎಂ ರಿಂದ ಕರೆ..!
ಯಲ್ಲಾಪುರ: ಶಾಸಕ ಶಿವರಾಮ್ ಹೆಬ್ಬಾರ್ ಸಂಪುಟ ಸೇರ್ಪಡೆಗೊಳ್ಳೋದು ಬಹುತೇಕ ಖಚಿತವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆಗೆ ರೆಡಿಯಾಗಿರಿ ಅಂತಾ ಈಗಾಗಲೇ ಶಿವರಾಮ್ ಹೆಬ್ಬಾರ್ ಗೆ ಕರೆ ಮಾಡಿದ್ದಾರೆ ಅನ್ನೋ ಖಚಿತ ಮಾಹಿತಿ ಲಭ್ಯವಾಗಿದೆ. ಸದ್ಯ ಬೆಂಗಳೂರಿನ ತಮ್ಮ ನಿವಾಸದಲ್ಲಿರೋ ಹೆಬ್ಬಾರ್ ಇನ್ನೇನು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರೆಡಿಯಾಗ್ತಿದ್ದಾರೆ. ಕಾರ್ಮಿಕ ಸಚಿವರಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದ ಹೆಬ್ಬಾರ್ ರಿಗೆ, ವಲಸಿಗರ ಕೋಟಾದಲ್ಲಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯೊ ಅದೃಷ್ಟ ಒಲಿದಿದೆ.
ಸನವಳ್ಳಿಯ ಬಡವರ ನಿವೇಶನ ಅತಿಕ್ರಮಣ ಪ್ರಕರಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಕ್ರಮ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ ಹಂಚಿದ್ದ 16 ನಿವೇಶನಗಳನ್ನು ಪಕ್ಕದ ಜಮೀನಿನ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನಾಲಾದ ಜಮೀನಿನ ಅಳತೆ ಮಾಡಿ, ಅಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಕ್ರಮಕೈಗೊಂಡಿದ್ದಾರೆ. ಅತಿಕ್ರಮಣ ತೆರವು ಗೊಳಿಸಲು ಕ್ರಮ ಕೈಗೊಂಡಿರೋ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಥ್ ನೀಡಿದ್ರು..