Environment day: ಕಾರವಾರ: ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಮರಿಯಮ್ಮಾ ದೇವಿ ದೇವಸ್ಥಾನದ ಹತ್ತಿರವಿರುವ ಬಳ್ಳಿಗಟ್ಟಿ ಕೆರೆ ದಡದಲ್ಲಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ (ಗ್ರಾಉ) ಸೋಮಲಿಂಗಪ್ಪ ಛಬ್ಬಿ ಸಾಂಕೇತಿಕವಾಗಿ ಸಸಿ ನೆಟ್ಟು, ನೀರುಣಿಸುವ ಮೂಲಕ ಕೆರೆ ದಡದ ಸುತ್ತಲು ಗಿಡ ನೆಟ್ಟು, ಪೋಷಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅರಣ್ಯ ಪ್ರದೇಶ, ರಸ್ತೆ ಬದಿ, ಸ್ಮಶಾನ, ಸರ್ಕಾರಿ ಖಾಲಿ ಜಾಗ, ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ ಸೇರಿದಂತೆ ಇತ್ಯಾದಿ ಅನುಕೂಲಕರ ಪ್ರದೇಶದಲ್ಲಿ ಸಸಿ ನೆಡುವುದಕ್ಕೆ ಅವಕಾಶ ನೀಡಿ, ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಇದನ್ನೂ ಓದಿ👉ಜಿಲ್ಲೆಯಲ್ಲಿ ಬಕ್ರೀದ್ ಆಚರಣೆ ಶಾಂತಿಯುತ, ಸೌಹಾರ್ದಯುವಾಗಿರಲಿ; ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಈ ವೇಳೆ ಮನೋವಿಕಾಸ ಎನ್ಜಿಒ ವತಿಯಿಂದ ಕೆರೆ ದಡದ ಸುತ್ತಲೂ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದ್ದು, ಅವುಗಳಿಗೆ ಸೂಕ್ತ ರಕ್ಷಣೆ ಮತ್ತು ಪೋಷಣೆ ನೀಡಿ, ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಪ್ರತಿಜ್ಞೆ ಸ್ವೀಕರಿಸಲಾಯಿತು.
ಇದನ್ನೂ ಓದಿ👉ಜೂನಿನಲ್ಲೇ ಬಿಡುಗಡೆ ಆಗಲಿದೆ ಪಿಎಂ ಕಿಸಾನ್ 20ನೇ ಕಂತು; ಫಲಾನುಭವಿಗಳ ಇ-ಕೆವೈಸಿ ಕಡ್ಡಾಯ..!
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಕ್ಕೀರವ್ವ ಹಿರೇಮಠ, ಮಾಜಿ ಅಧ್ಯಕ್ಷ ಸಂತೋಷ ಸಣ್ಣಮನಿ, ತಾಲೂಕು ರೈತ ಸಂಘದ ಅಧ್ಯಕ್ಷ ಪೀರಜ್ಜ ಸಾಗರ, ಪಂಚಾಯತ್ ಕಾರ್ಯದರ್ಶಿ ಗಣಪತಿ ಹಾನಗಲ್, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ಪಂಚಾಯತ್ ಸಿಬ್ಬಂದಿ, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.