Shiggaon News; ಶಿಗ್ಗಾವಿ ಪಟ್ಟಣದ ಹೊರವಲಯದ ಗರುಡಾ ಹೋಟೆಲ್ ಬಳಿ KSRTC ಬಸ್ ಅಪಘಾತವಾಗಿದೆ. ರಸ್ತೆ ಡಿವೈಡರ್ ಮೇಲೆ ಹತ್ತಿ ರಸ್ತೆ ಪಕ್ಕದ ಗುಂಡಿಯಲ್ಲಿ ಬಸ್ ಬಿದ್ದು ಹಲವು ಪ್ರಯಾಣಿಕರಿಗೆ ಗಾಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 48 ರಲ್ಲಿ, ಹುಬ್ಬಳ್ಳಿಯಿಂದ ಹಾನಗಲ್ ಕಡೆಗೆ ಹೊರಟ ಕೆ ಎ 27 f 716 ನೋಂದಣಿಯ, ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ, ರಸ್ತೆ ವಿಬನಜಕಕ್ಕೆ ಡಿಕ್ಕಿ ಹೊಡೆದಿದೆ.

ಶಿಗ್ಗಾವ್ ಕಡೆಗೆ ಹೋಗುತ್ತಿದ್ದ ಬಸ್ಸು ಬಲಗಡೆ ಡಿವೈಡರ್ ಮೇಲೆ ಹತ್ತಿ, ಹುಬ್ಬಳ್ಳಿ ಕಡೆಗೆ ಹೋಗುವ ರಸ್ತೆ ಮೇಲ್ಗಡೆಯಿಂದ ಸರ್ವಿಸ್ ರೋಡ್ ಗರುಡ ಹೋಟೆಲ್ ಪಕ್ಕ ತೆಗ್ಗಿನಲ್ಲಿ ಬಿದ್ದಿದೆ. ಪರಿಣಾಮ ಸುಮಾರು ಹತ್ತು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಶಿಗ್ಗಾವಿ ಸರ್ಕಾರಿ ಆಸ್ಪತ್ರೆ ಕಳುಹಿಸಲಾಗಿದೆ.

error: Content is protected !!