ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದ ವ್ಯಕ್ತಿಯೋರ್ವನ ಶವ ಹುಬ್ಬಳ್ಳಿ ಸಮೀಪದ ಅಮರಗೋಳ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದೆ. ಮಂಜುನಾಥ್ ಬಸಪ್ಪ ಬೆಲವಂತರ(35) ಎಂಬುವವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಅಮರಗೋಳ ಈತನ ಪತ್ನಿಯ ತವರೂರು, ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ,, ಕಳೆದ ಹತ್ತು ದಿನಗಳ ಹಿಂದೆ ಅಮರಗೋಳಕ್ಕೆ ಹೋಗಿದ್ದ ಮಂಜುನಾಥ್, ನಿನ್ನೆ ರಾತ್ರಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಸಧ್ಯ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Top Stories
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!
ನಂದಿಗಟ್ಡಾ ಗ್ರಾಮದಲ್ಲೂ ನಟ ಪುನೀತ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.
ಹುನಗುಂದ ಗ್ರಾಮದಲ್ಲೂ ನಟ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು. ಈ ವೇಳೆ ಗ್ರಾಪಂ ಸದಸ್ಯ ಈಶ್ವರಗೌಡ ಅರಳಿಹೊಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು..
ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!
ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಶರತ್ (30) ಆತ್ಮಹತ್ಯೆಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುನೀತ್ ರಾಜಕುಮಾರ್ ವಿಧಿವಶರಾದ ಸುದ್ದಿ ತಿಲಕಿಯುತ್ತಿದ್ದಂತೆ ನಿನ್ನೆಯಿಂದಲೂ ಅಳುತ್ತಿದ್ದ ಶರತ್ಗೆ ಮನೆಯವರಿಂದ ಸಮಾಧಾನ ಹೇಳಿದ್ರೂ ನೋವು ಕಡೆ ನೆಯಾಗಿರಲಿಲ್ಲ ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಹೋಟೆಲ್ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ ಶರತ್ ಗೆ ಒಂದು ಪುಟ್ಟ ಮಗುವಿದ್ದು, ಸಧ್ಯ ಪತ್ನಿ ಎಂಟು ತಿಂಗಳ ಗರ್ಭೀಣಿಯಾಗಿದ್ದಾರೆ. ಚಿಕ್ಕ ಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಹಾಗೂ ಹುನಗುಂದದಲ್ಲಿ ನಟ ಪುನೀತ್ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!
ಮುಂಡಗೋಡ: ತಾಲೂಕಿನ ಇಂದೂರು ಹಾಗೂ ಹುನಗುಂದ ಗ್ರಾಮಗಳಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಹುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.
ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!
ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.
ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ..! ಡಾ.ಸುಮನ್ ಡಿ. ಪನ್ನೇಕರ್ ನೂತನ ಎಸ್ಪಿ..!!
ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ. ನೂತನ ಎಸ್ಪಿಯಾಗಿ ಡಾ.ಸುಮನ್ ಡಿ. ಪನ್ನೇಕರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಶಿವ ಪ್ರಕಾಶ್ ದೇವರಾಜು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಗೆ ಆಗಮಿಸಿದ ಪುನೀತ್ ಪುತ್ರಿ..!
ನಟ ಪುನೀತ್ ರಾಜಕುಮಾರ್ ಮಗಳು ಧೃತಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ, ಕಂಠೀರವ ಸ್ಟೇಡಿಯಂನತ್ತ ಹೊರಟಿದ್ದಾರೆ. ದೇವನಹಳ್ಳಿ ಕೆಐಎ ಯಿಂದ ಅರೈವಲ್ ಬದಲಿಗೆ ಡಿಪಾರ್ಚರ್ ಮೂಲಕ ತೆರಳಿದ ಪುನೀತ್ ಮಗಳು ಧೃತಿ. ಈಗಾಗಲೇ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.
ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!
ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಪುತ್ರಿ ಧೃತಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪುನೀತ್ ಪುತ್ರಿ ಆಗಮನವಾಗಿದ್ದು, ಧೃತಿಯಿದ್ದ ಏರ್ ಇಂಡಿಯಾ 502 ವಿಮಾನ ಲ್ಯಾಂಡಿಂಗ್ ಆಗಿದೆ. ವಿಮಾನ ನಿಲ್ದಾಣದಿಂದ ಧೃತಿಯನ್ನ ಕರೆದುಕೊಂಡು ಹೋಗಲು ಪೊಲೀಸ್ ಬೆಂಗಾವಲು ವಾಹನಗಳು ಬಂದಿವೆ., ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಬರಲಿರುವ ಪುನೀತ್ ಪುತ್ರಿ, ನೇರವಾಗಿ ಕಂಠೀರವ ಸ್ಟೇಡಿಯಂಗೆ ತೆರಳಲಿದ್ದಾರೆ.
ಮುಂಡಗೋಡಿನ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನ ದಳ ಪರಿಶೀಲನೆ, ಟಿಬೇಟಿಯನ್ ಕಾಲೋನಿಯಲ್ಲೂ ಕಟ್ಟೇಚ್ಚರ..!
ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ. ಹಾಗೇನೆ, ಟಿಬೇಟಿಯನ್ ಕಾಲೋನಿ ಸೇರಿದಂತೆ ತಾಲೂಕಿನ ಬಹುಮುಖ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಕಟ್ಟೇಚ್ಚರ ವಹಿಸಿದೆ. ಎಚ್ಚರಿಸಿದ್ದೇ ಕುಮಟಾ ಕೇಸ್..! ಅಂದಹಾಗೆ, ಇದು ಮುಂಡಗೋಡ ತಾಲೂಕಿಗಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಡೆಯೂ ಕಟ್ಟೇಚ್ಚರ ವಹಿಸಲಾಗಿದೆ. ಯಾಕಂದ್ರೆ, ಕುಮಟಾದ ಕಾಲೇಜು ಆವರಣದಲ್ಲಿ ಇತ್ತಿಚೆಗಷ್ಟೇ ಬಾಂಬ್ ಮಾದರಿಯ ವಸ್ತು ಸಿಕ್ಕು ಆತಂಕ ತಂದಿಟ್ಟಿತ್ತು. ಹೀಗಾಗಿ ಪೊಲೀಸ್ ಇಲಾಖೆ ಜಿಲ್ಲಾಧ್ಯಂತ ಕಟ್ಟೇಚ್ಚರ ವಹಿಸಿದೆ ಅಂತಾ ತಿಳಿದು ಬಂದಿದೆ. ಟಿಬೇಟಿಯನ್ ಕಾಲೋನಿ..! ನಿಜ ಅಂದ್ರೆ, ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಅಲ್ಲಿಯೂ ಸಹ ಇಂದು ಶ್ವಾನ ದಳ ತೀವ್ರ ತಪಾಸಣೆ ನಡೆಸಿತು. ಜೊತೆಗೆ ಬಾಂಬ್ ನಿಷ್ಕ್ರೀಯ ದಳದ ತಜ್ಞರು ಜೊತೆಯಲ್ಲಿದ್ದರು. ರಾಜ್ಯ, ಹೊರರಾಜ್ಯ, ಹೊರದೇಶಗಳಿಂದ ಜಿಲ್ಲೆಗೆ ಬರುವವರ ಮೇಲೆ ನಿಗಾ ಇಡಲಾಗಿದೆ...