ತಮ್ಮ ಸುಪುತ್ರನ ವಿರುದ್ಧವೇ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ರಾ ವಿ.ಎಸ್.ಪಾಟೀಲ್..?

ವಿ.ಎಸ್.ಪಾಟೀಲ್,
ಈ ಹೆಸ್ರು ಕೇಳಿದ್ರೆ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದ್ರಲ್ಲೂ ಯಲ್ಲಾಪುರ ಕ್ಷೇತ್ರದಲ್ಲಿ ಅದೇನೋ ಒಂದು ಅಭಿಮಾನ. ಅದೇನೋ ಒಂದು ಪ್ರೀತಿ. ಅವರ ಅಪ್ಪಟ ಜವಾರಿ ಭಾಷೆಯ ಮಾತುಗಳು, ನೇರ ನುಡಿಗಳು, ನಿಷ್ಕಲ್ಮಶ ಮನಸ್ಸು ಹೀಗೆ ಅವ್ರನ್ನ ನಾನು ಇವತ್ತಿಗೂ ಒಬ್ಬ ರಾಜಕಾರಣಿ ಅಂತಾ ನೋಡಿಯೇ ಇಲ್ಲ. ಅವ್ರು ನಮ್ಮ ಮಾರ್ಗದರ್ಶಿ ಸ್ಥಾನದಲ್ಲಿ ಯಾವಾಗ್ಲೂ ಇರ್ತಾರೆ. ಹೀಗಿರೋ ಅವ್ರಿಗೆ ಇಂತಹದ್ದೊಂದು ಪರಿಸ್ಥಿತಿ ಬಂದಿದೆಯಾ..? ಆ ಮಟ್ಟಿಗಿನ ಅನಿವಾರ್ಯತೆ ಎದುರಾಗಿದೆಯಾ..? ನಿಜಕ್ಕೂ ವಿ.ಎಸ್.ಪಾಟೀಲರ ಮನಸ್ಸು ಈ ಮಟ್ಟಿಗೆ ನೋವು ಉಂಡಿದೆಯಾ..? ಛೇ ಯಾವ ತಂದೆಗೂ ಬೇಡ ಈ ಅವಸ್ಥೆ..!

ನಿನ್ನೆ ರಾತ್ರಿಯಿಂದ ಬಹುತೇಕ ವಾಟ್ಸಾಪ್ ಗಳಲ್ಲಿ ಅದೊಂದು ಸಾರ್ವಜನಿಕ ಪ್ರಕಟಣೆಯ ನೋಟೀಸು ಹರಿದಾಡ್ತಿದೆ. ಮಾಜಿ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಲಿ ಅಧ್ಯಕ್ಷ ವಿ.ಎಸ್.ಪಾಟೀಲ್ ಲೆಟರ್ ಹೆಡ್ ನಲ್ಲೇ ಇಂತಹದ್ದೊಂದು ಪ್ರಕಟಣೆ ಹೊರಡಿಸಲಾಗಿದೆ. ತಮ್ಮ ಪುತ್ರನಿಗೆ ಯಾರೂ ನನ್ನ ಹೆಸರು ಹೇಳಿ ಬಂದ್ರೆ ಸಾಲ ಕೊಡಬೇಡಿ ಅಂತಾ ಉಲ್ಲೇಖಿಸಲಾಗಿರೋ ಪ್ರಕಟಣೆ ಅಚ್ಚರಿಗೆ ಕಾರಣವಾಗಿದೆ.

ಅಷ್ಟಕ್ಕೂ ಖುದ್ದು ತಮ್ಮ ಸುಪುತ್ರನ ಬಗ್ಗೆ ತಮ್ಮದೇ ಲೆಟರ್ ಹೆಡ್ ನಲ್ಲಿ ಹಾಗೆ ಬರೆದುಕೊಂಡಿರೋದು ಅಸಲಿನಾ..? ಅಥವಾ ಅವ್ರ ಹೆಸರಲ್ಲಿ ಬೇರೆ ಯಾರಾದ್ರೂ ಬರೆದಿದ್ದಾರಾ..? ಸಾರ್ವಜನಿಕ ಪ್ರಕಟಣೆ ನೀಡುವಷ್ಟು ಮಿಕ್ಕಿ ಹೋಗಿದೆಯಾ ಪರಿಸ್ಥಿತಿ..? ಇದೇಲ್ಲ ಪ್ರಶ್ನೆಗಳು ಬಹುಶಃ ನನ್ನಂತೆ ಎಲ್ಲರಿಗೂ ಕಾಡುತ್ತಿವೆ..

ಪ್ರಕಟಣೆ ಅಸಲಿನಾ..?
ಯಾಕಂದ್ರೆ ಸದ್ಯ ಇಡೀ ಕ್ಷೇತ್ರದಾಧ್ಯಂತ ಸಾರ್ವಜನಿಕ ಪ್ರಕಟಣೆಯೊಂದು ವಾಟ್ಸಾಪುಗಳಲ್ಲಿ ಹರಿದಾಡ್ತಿದೆ. ಜುಲೈ 4 ರ ದಿನಾಂಕದಲ್ಲಿ ಪ್ರಕಟಗೊಂಡಿರೊ, ವಿ.ಎಸ್.ಪಾಟೀಲರ ಲೆಟರ್ ಹೆಡ್ ನಲ್ಲೇ, ಅವ್ರದ್ದೇ ಸಹಿ ಇರುವ ಪ್ರಕಟಣೆ ಇದಾಗಿದೆ. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಸಲು ಇದು ಮಾಜಿ ಶಾಸಕರೇ ಹೊರಡಿಸಿರೋ ಪ್ರಕಟಣೆಯಾ..? ಅಥವಾ ಬೇರೆ ಯಾರೋ ಕುಹಕವಾಡಿರೋದಾ..? ಗೊತ್ತಿಲ್ಲ.

ಏನಾಯ್ತು..?
ನಿಜ, ಯಲ್ಲಾಪುರ ಕ್ಷೇತ್ರದಲ್ಲಿ ಇವತ್ತಿಗೂ ತಮ್ಮದೇ ಆದ ಛಾಪು ಉಳಿಸಿಕೊಂಡು ಬಂದಿರೋ‌ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾಲಿ ಅಧ್ಯಕ್ಷ, ವಿ.ಎಸ್. ಪಾಟೀಲ್ ಸಂಕಷ್ಟದಲ್ಲಿದ್ದಾರಾ..? ಅಸಲು, ರಾಜಕೀಯವಾಗಿ ಅವ್ರಿಗೆ ಸಂಕಷ್ಟ ಬಂದೊದಗಿದೆ ಅಂತಿದ್ರೆ ಅದನ್ನ ನಾನು ಬರೆಯುವ, ಯೋಚಿಸುವ ದಾಟಿ ಬೇರೆಯದ್ದೇ ಇತ್ತು. ಆದ್ರೆ, ಈಗ ಅವ್ರೇ ಹೇಳಿರುವಂತೆ, ಪಾಟೀಲರ ಇಡೀ ವ್ಯಕ್ತಿತ್ವವನ್ನು ಅವ್ರದ್ದೇ ಕುಡಿ ಈ ಮಟ್ಟಿಗೆ ತಂದು ನಿಲ್ಲಿಸ್ತಾ..? ಈಗ ತಮ್ಮೀಡಿ ಬದುಕಿನಲ್ಲಿ ಒಳಗೊಳಗೇ ಕೊರಗಿ, ಕೊರಗಿ ಇಂತಹದ್ದೊಂದು ಕಟ್ಟಕಡೆಯ ತೀರ್ಮಾನಕ್ಕೆ ಬಂದ್ರು ಬಿಟ್ರಾ ಪಾಟೀಲರು..? ಗೊತ್ತಿಲ್ಲ.

ಆದ್ರೆ, ತಮ್ಮ ಸುಪುತ್ರನ ಸಲುವಾಗಿ ಬಹಿರಂಗವಾಗೇ ತಮ್ಮದೇ ಲೆಟರ್ ಹೆಡ್ ನಲ್ಲಿ ಬರೆದುಕೊಂಡಿದ್ದಾರೆ ಅಂದ್ರೆ ಏನರ್ಥ..? ಒಂದು ವೇಳೆ ಇದು ಅಸಲು ಪಾಟೀಲರೇ ಬರೆದು ಪ್ರಕಟಿಸಿದ್ದು ಅನ್ನೋದಾದ್ರೆ, ಬಹುಶಃ ಹಾಗೆ ಬರೆಯುವಾಗ ಆ ತಂದೆಯ ಮನಸ್ಸು ಅದೇಷ್ಟು ಮಮ್ಮಲ‌ ಮರುಗಿದೆಯೆನೋ..?

error: Content is protected !!