ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯರ ಬೀಕರ ಹತ್ಯೆಯ ಹಿಂದೆ ಬೇನಾಮಿ ಆಸ್ತಿಯ ನೆರಳಿದೆ. ಬಹುತೇಕ ಆಪ್ತರೇ ಹಂತಕರು ಅನ್ನೋ ಪ್ರಾಥಮಿಕ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ. ಅಷ್ಟಕ್ಕೂ, ಹಂತಕ ಆರೋಪಿಗಳು ಕಲಘಟಗಿ ತಾಲೂಕಿನ ದುಮ್ಮವಾಡದ ನಿವಾಸಿಗಳು ಎನ್ನಲಾಗಿದೆ.

ಬೇನಾಮಿ ಆಸ್ತಿ ಕಾರಣವಾ..?
ಇನ್ನು, ಚಂದ್ರಶೇಖರ್ ಗುರೂಜಿ ವನಜಾಕ್ಷಿಯ ಹೆಸರಿಗೆ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ಹಾಗೆ ವನಜಾಕ್ಷಿ ಹೆಸರಲ್ಲಿ ಇದ್ದ ಆಸ್ತಿ ವಾಪಸ್ ಕೇಳಿದ್ದ ಕಾರಣಕ್ಕೆ ಇಂತಹ ಭೀಕರ ಹತ್ಯೆ ನಡೆದಿದೆ ಅನ್ನುವ ಮಾತುಗಳು ಕೇಳಿ ಬಂದಿದೆ.

ಸದ್ಯ ಕೊಲೆಯ ಆರೋಪಿಗಳ ಬಂಧನಕ್ಕೆ ಬಲೆ ಬೀಸಿರೋ ಹುಬ್ಬಳ್ಳಿ ಪೊಲೀಸರು, 5 ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಅಂತಾ ಪೊಲೀಸ್ ಕಮೀಶನರ್ ಲಾಬೂರಾಮ್ ಮಾಹಿತಿ ನೀಡಿದ್ದಾರೆ.