ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಕೆಲ ನಿವಾಸಿಗಳು ಇಂದು ಸಿಡಿದೆದ್ದಿದ್ದಾರೆ. ತಮಗೆ ಸರ್ಕಾರ ನೀಡಿದ್ದ ನಿವೇಶನಗಳನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ನೀಡಿದ್ದಾರೆ. ಬಡವರ ಸೂರು ಕಸಿದುಕೊಂಡ್ರಾ.? ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಕೆಲವು ಬಡವರಿಗೆ ಸೂರು ಕಲ್ಪಿಸಿಕೊಳ್ಳಲು ಸರ್ಕಾರ ಗ್ರಾಮದ ಸರ್ವೆ ನಂಬರ್-51ರಲ್ಲಿ 16 ನಿವೇಶನಗಳನ್ನ ಹಂಚಿತ್ತು. ಹಾಗೆ ಹಂಚಿದ್ದ ನಿವೇಶನಗಳನ್ನು ಪಕ್ಕದ ಜಮೀನು ಅಂದ್ರೆ ಸರ್ವೆ ನಂಬರ್ 50 ಮತ್ತು 52 ರ ಮಾಲೀಕರು, ಅತಿಕ್ರಮಣ ಮಾಡಿಕೊಂಡಿದ್ದಾರೆ ಅಂತಾ ಅಲ್ಲಿನ ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ. ಹಾಗೇ, ಹಂಚಿಕೆ ಮಾಡಿದ್ದ ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡಿದ್ದನ್ನು ಬಿಟ್ಟುಕೊಡಿ ಅಂತಾ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಅವ್ರು ಕ್ಯಾರೇ ಅಂತಿಲ್ಲವಂತೆ, ಅಲ್ದೇ ಹಾಗೆ ಕೇಳಿದ್ರೆ ಮಚ್ಚು, ಕೊಡಲಿಗಳನ್ನ ತಂದು ಹಲ್ಲೆಗೆ ಬರ್ತಾರೆ ಅಂತಾ ಮನವಿಯಲ್ಲಿ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಇನ್ನು ಇಂತಹದ್ದೊಂದು ಅತಿಕ್ರಮಣ ಆರೋಪ ಮಾಡಿ ಈಗಾಗಲೇ ಮುಂಡಗೋಡ ತಹಶೀಲ್ದಾರರಿಗೆ ಅಲ್ಲಿನ ನಿವಾಸಿಗಳು ಸಾಕಷ್ಟು...
Top Stories
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಶಿಗ್ಗಾಂವ ವಿಧಾನಸಭಾ ಕ್ಷೇತ್ರ: ಮೊದಲ ದಿನವೇ ನಾಲ್ಕು ನಾಮಪತ್ರ ಸಲ್ಲಿಕೆ
ಬಡವರಿಗೆ ನೀಡಿದ್ದ ನಿವೇಶನಗಳೇ ಅತಿಕ್ರಮಣ: ತೆರವುಗೊಳಿಸಿ ಕೊಡುವಂತೆ ಸನವಳ್ಳಿ ನಿವಾಸಿಗಳ ಪ್ರತಿಭಟನೆ..!
ಭಟ್ಕಳದಲ್ಲಿ ಮಳೆರಾಯನ ಅರ್ಭಟಕ್ಕೆ ಹೊಳೆಯಂತಾದ ರಸ್ತೆಗಳು..! ಜನಜೀವನ ಅಸ್ತವ್ಯಸ್ತ..!!
ಭಟ್ಕಳ: ಪಟ್ಟಣದಲ್ಲಿ ವರುಣನ ಅರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಯಿಂದಾಗಿ ಭಟ್ಕಳ ಪಟ್ಟಣ ಅಕ್ಷರಶಃ ಹೊಳೆಯಂತಾಗಿದೆ. ಪಟ್ಟಣದ ಸಂಶುದ್ಧೀನ್ ಸರ್ಕಲ್, ರಂಗಿನಕಟ್ಟಾ, ಚೌಥನಿ ಸೇರಿ ಹಲವೆಡೆ ನೀರು ತುಂಬಿಕೊಂಡಿದೆ. ರಸ್ತೆಯ ಮೇಲೆ ನೀರು ನಿಂತ ಪರಿಣಾಮ ಸವಾರರು ಪರದಾಡುವಂತಾಗಿದೆ. ಹೆದ್ದಾರಿ ಅಗಲೀಕರಣದಿಂದ ಮುಚ್ಚಿಹೋಗಿರುವ ಚರಂಡಿ ಕಾಲುವೆಗಳಿಂದಾಗಿ ರಸ್ತೆಯ ಮೇಲೆಯೇ ಮಳೆಯ ನೀರು ತುಂಬಿಕೊಂಡಿದೆ. ಹೀಗಾಗಿ ಪಟ್ಟಣದ ರಸ್ತೆಗಳೇಲ್ಲ ಅಕ್ಷರಶಃ ಹೊಳೆಯಂತಾಗಿವೆ. ಇನ್ನು, ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ವರುಣ ಅಬ್ಬರಿಸುತ್ತಿದ್ದು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ವಿಪರೀತ ಮಳೆಯಾಗುತ್ತಿದೆ. ಹಲವೆಡೆ ನದಿಗಳು ಮೈದುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ, ಜನರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಇಂದೂ ಕೂಡ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮುಂಡಗೋಡಿನಲ್ಲಿ ಯುವಕನ ಬೀಕರ ಹತ್ಯೆ..! ಇರಿದು, ಇರಿದು ಕೊಂದರಾ ಹಂತಕರು..?
ಮುಂಡಗೋಡ:ಪಟ್ಟಣದ ಹೊರ ವಲಯದ ನ್ಯಾಸರ್ಗಿ ರಸ್ತೆಯಲ್ಲಿ ಯುವಕನೊಬ್ಬ ಹೆಣವಾಗಿದ್ದಾನೆ. ಪಟ್ಟಣದ ಕಂಬಾರಗಟ್ಟಿ ಪ್ಲಾಟ್ ನ ವಿಜಯ್ ಮಂಜಪ್ಪ ಈಳಗೇರ್ ಎಂಬುವನನ್ನು ಬೀಕರವಾಗಿ ಹತ್ಯೆ ಮಾಡಲಾಗಿದೆ. ಎದೆಗೆ ಹಾಗೂ ಬೆನ್ನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಅಪ್ಪಟ ದುಶ್ಮನಿಗಳ ಸೇಡಿನ ಕೊಲೆ ಅನ್ನೋದು ಮೇಲ್ನೊಟಕ್ಕೆ ಕಂಡು ಬರ್ತಿದೆ. ನಿನ್ನೆ ರಾತ್ರಿ ನಡೆದಿರಬಹುದು ಎನ್ನಲಾದ ಕೊಲೆ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮುಂಡಗೋಡ ಪೊಲೀಸ್ರು ಸ್ಥಳಕ್ಕೆ ಬೇಟಿ ನೀಡಿ ಪರಿಶಿಲನೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಮಂಡಗೋಡಿನಲ್ಲಿ “ಕಾಂಗ್ರೆಸ್ ಸಹಾಯ ಹಸ್ತ” ಉದ್ಘಾಟಿಸಿದ ಬಿ.ಕೆ.ಹರಿಪ್ರಸಾದ್..!
ಮುಂಡಗೋಡ: ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ “ಕಾಂಗ್ರೆಸ್ ಸಹಾಯ ಹಸ್ತ” ಕಾರ್ಯಕ್ರಮ ಇಂದು ಮುಂಡಗೋಡಿನಲ್ಲಿ ನಡೆಯಿತು.ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ನಾಯಕ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪ್ರಶಾಂತ್ ದೇಶಪಾಂಡೆ, ವಿ.ಎಸ್. ಆರಾಧ್ಯ, ಕೃಷ್ಣ ಹಿರೇಹಳ್ಳಿ, ಎಚ್. ಎಂ. ನಾಯಕ್, ಅಬ್ದುಲ್ ಮಜೀದ್ ಶೇಖ್, ಶ್ರೀಮತಿ ಸುಜಾತ ಗಾಂವ್ಕರ್, ಬಸವರಾಜ್ ದೊಡ್ಮನಿ, ಕೆಪಿಸಿಸಿ ವೀಕ್ಷಕ ಸುರೇಶ್ ಸವನೂರು,ನಾಗರಾಜ್ ನರ್ವೇಕರ್, ಅಬ್ಬಾಸ್ ತೊನ್ಸೆ, ಭಾರತಿ ಮಣ್ಣಪ್ಪ ಗೌಡರ್, ಮಹ್ಮದ್ ಗೌಸ್ ಮಕಾಂದಾರ್, ಅಲಿ ಹಸನ್ ಬೆಂಡಿಗೇರಿ ಧರ್ಮರಾಜ ನಡಗೇರ, ಮಲ್ಲಿಕಾರ್ಜುನ ಗೌಳಿ ಎಂ.ಎನ್. ದುಂಡಸಿ, ರಾಜು ಬೋವಿ, ರಜಾ ಪಟಾಣ್, ಜಾಫರ್ ಹಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
SSLC ಪರೀಕ್ಷೆ ಬರಿಯೊ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸ್ ವಿತರಣೆ..!
ಶಿಗ್ಗಾವಿ : ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸಂಸದ ಪ್ರಹ್ಲಾದ್ ಜೋಷಿಯವರ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಶಿಗ್ಗಾವಿ ತಾಲೂಕಿನ ಪ್ರತಿ ಶಾಲೆಯ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಜ್, ಮತ್ತು ಪಲ್ಸ್ ಆಕ್ಸಿಮೀಟರ್ಗಳನ್ನು ನೀಡುವ ಕಾರ್ಯಕ್ಕೆ ಭಾ.ಜ.ಪ ಅದ್ಯಕ್ಷ ಶಿವಾನಂದ ಮ್ಯಾಗೇರಿ ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳ ಸರ್ವಾಂಗೀಣ ಆರೋಗ್ಯದ ದೃಷ್ಟಿಯಿಂದ ಇಂದಿನ ಮಕ್ಕಳೇ ನಾಳೆಯ ನಾಡಿನ ಪ್ರಜೆಗಳು ಎಂಬ ಸದುದ್ದೇಶದಿಂದ ಮಕ್ಕಳು ಪರೀಕ್ಷೆಗಳನ್ನು ಎದುರಿಸುವ ಕಾರ್ಯಕ್ಕೆ ಮುಕ್ತವಾಗಿ ತಮ್ಮ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಈ ಎಲ್ಲ ಸಾಧನಗಳನ್ನು ನೀಡಲಾಗುತ್ತಿದೆ ಎಂದರು. ಪುರಸಭೆ ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಕಳೆದ ಬಾರಿ ಜೋಷಿಯವರ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಜ್ ನೀಡಲಾಗಿತ್ತು ಈ ಭಾರಿಯೂ ಸಹಿತ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ನೀಡಲಾಗುತ್ತಿದೆ ಜೊತೆಗೆ ಬೊಮ್ಮಾಯಿಯವರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ಕೈಗೊಳ್ಳುವ ಮೂಲಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಶಿಕ್ಷಣ...
ಅಗ್ನಿಶಾಮಕ ಸಿಬ್ಬಂದಿ ಗಣೇಶ್ ಗೌಡರ್ ಗೆ, ಶಿಗ್ಗಾವಿ ಬಿಜೆಪಿಯಿಂದ ಸನ್ಮಾನ..!
ಶಿಗ್ಗಾವಿ : ಪಟ್ಟಣದ ಶಾಸಕರ ಕಚೇರಿಯಲ್ಲಿ ಶಿಗ್ಗಾವಿಯ ಅಗ್ನಿಶಾಮಕ ಠಾಣೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಣೇಶ್ ಎಂ ಗೌಡರ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಪ್ರಯುಕ್ತ ಅವರನ್ನು ಭಾಜಪ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಸನ್ಮಾನಿಸಿ, ಮಾತನಾಡಿದ ಶಿವಾನಂದ ಮ್ಯಾಗೇರಿ, ಅಗ್ನಿಶಾಮಕ ಮತ್ತು ತುರ್ತಸೇವಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ನಾಗರೀಕರ ಜೀವ ರಕ್ಷಣೆ ಹಾಗೂ ಆಸ್ತಿ ಸಂರಕ್ಷಣಾ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಅವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಿಸಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರು ಚಿನ್ನದ ಪದಕ ನೀಡಿ ಗೌರವಿಸಿದ್ದಾರೆ ಅವರ ಸೇವೆ ತಾಲೂಕಿಗೆ ಮಾದರಿಯಾಗಿದೆ ಅದು ನಮ್ಮ ತಾಲೂಕಿನ ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಮಂಜುನಾಥ ಬ್ಯಾಹಟ್ಟಿ, ನರಹರಿ ಕಟ್ಟಿ, ರಮೇಶ ವನಹಳ್ಳಿ, ರೇಣುಕನಗೌಡ ಪಾಟೀಲ, ಶಿವರಾಜ ರಾಯಣ್ಣವರ, ಕಾಶೀನಾಥ ಕಳ್ಳಿಮನಿ, ವಿನಯ ಮುಂಡಗೋಡ, ಸಂತೋಷ ದೊಡ್ಡಮನಿ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಭಾಜಪದ ಕಾರ್ಯಕರ್ತರು ಇದ್ದರು.
“ಚೀಪ್ ರೇಟ್ ಚಿನ್ನ” ಕ್ಕಾಗಿ ಅವ್ರು ಕಳೆದುಕೊಂಡಿದ್ದು 28 ಲಕ್ಷ..! ಅಷ್ಟಕ್ಕೂ ಅಲ್ಲಿ ಆ್ಯಕ್ಟಿವ್ ಆಗಿರೋ ಗ್ಯಾಂಗ್ ಅದೇನಾ..?
ಮುಂಡಗೋಡ; ತಾಲೂಕಿನ ಮಳಗಿ ಧರ್ಮಾ ಜಲಾಶಯದ ಅಂಗಳದಲ್ಲಿ ನಡೆಯಬಾರದ ರಾಬರಿ ನಡೆದು ಹೋಗಿದೆ. ದೂರದ ಬೆಳಗಾವಿಯ ಚಿಕ್ಕೋಡಿಯಿಂದ ಬಂದಿದ್ದ ಆ ಇಬ್ಬರೂ ಬರೋಬ್ಬರಿ 28 ಲಕ್ಷ ರೂ. ಅನಾಮತ್ತಾಗಿ ಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಮುಂಡಗೋಡ ಪೊಲೀಸ್ರು ಎಲ್ಲಾ ಆಯಾಮಗಳಲ್ಲೂ ತನಿಖೆಗಿಳಿದಿದ್ದಾರೆ. ಅದ್ರಂತೆ, ದಾಸನಕೊಪ್ಪ ಭಾಗದ ಕೆಲವರನ್ನ ಪೊಲೀಸ್ರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರಂತೆ. ಇದು ಈ ಕ್ಷಣದವರೆಗೆ ನಡೆದಿರೋ ಅಪಡೇಟ್ಸ್..! ಆದ್ರೆ, ಶುಕ್ರವಾರ ಅಂತಹದ್ದೊಂದು ಘಟನೆ ನಡೆದು ಹೋಯ್ತು ಅಂತಾ ಇನ್ನಿಲ್ಲದ ಊಹಾಪೋಹಗಳು, ಕತೆಗಳು ಹುಟ್ಟಿಕೊಂಡಿದ್ದವು. ಗೋಡಂಬಿ ಬೀಜ ಖರೀಧಿಯ ನಾಟಕದಿಂದ ಹಿಡಿದು ಲಾಂಗು, ಮಚ್ಚು, ಆ್ಯಸಿಡ್ಡು ಅದು, ಇದು ಅಂತೇಲ್ಲ, ಖುದ್ದು ಖಾಕಿಗಳೇ ಕಂಗಾಲಾಗುವಂತ ಸಿನೀಮಿಯ ಕತೆ ಹೆಣೆಯಲಾಗಿತ್ತು. ಆದ್ರೆ ಆ ಘಟನೆಯ ಒಳನೋಟಗಳೇ ಬೇರೆಯದ್ದಿದೆ. ಒಳಸುಳಿಗಳೇ ವಿಚಿತ್ರ ಮತ್ತು ಆಘಾತಕಾರಿಯಾಗಿವೆ. ಹಾಗಂತ ಅಲ್ಲಿನ ಮಂದಿ ಮಾತಾಡಿಕೊಳ್ತಿದಾರೆ. ನಿಜ, ಆ ಘಟನೆ ಪೊಲೀಸರಿಗಷ್ಟೇ ಅಲ್ಲ ಸಾರ್ವಜನಿಕರಿಗೂ ಸಾಕಷ್ಟು ಪ್ರಶ್ನೆಗಳು ಏಳುವಂತೆ ಮಾಡಿದೆ. ಹೀಗಾಗಿ, ಆ ಎಲ್ಲ ಪ್ರಶ್ನೆಗಳ ಬಗ್ಗೆ ಇಲ್ಲಿ ಒಂದಿಷ್ಟು...
ರಾಜ್ಯದಲ್ಲಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್..!
ಬೆಂಗಳೂರು : ಕೊರೋನಾ ಸೋಂಕಿನ ಇಳಿಕೆಯ ಬೆನ್ನಲ್ಲೇ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ಎಲ್ಲಾ ಮೆಡಿಕಲ್ ಕಾಲೇಜ್ ಗಳನ್ನು ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಮೆಡಿಕಲ್ ಸೆಕ್ಟರ್ ( ಮೆಡಿಕಲ್, ಡೆಂಟಲ್ ಕಾಲೇಜ್, ಆಯುಷ್ ಕಾಲೇಜು ಮತ್ತು ಇನ್ಸಿಟಿಟ್ಯೂಷನ್, ನರ್ಸಿಂಗ್ ಕಾಲೇಜು ಮತ್ತು ಹೆಲ್ತ್ ಕೇರ್ ಅಕಾಡೆಮಿಕ್ ಇನ್ಸಿಟಿಟ್ಯೂಷನ್, ಕಾಲೇಜು ಇತರೆ) ಸಂಸ್ಥೆಗಳು ಕೂಡಲೇ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಹಲವು ಷರತ್ತುಗಳನ್ನು ವಿಧಿಸಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಕೊರೋನಾ ಮಾರ್ಗಸೂಚಿಗಳನ್ನು ಕಾಲೇಜುಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಅಲ್ಲದೇ ಕಾಲೇಜುಗಳಲ್ಲಿ ಆಫ್ಲೈನ್ ತರಗತಿಗಳಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂಧಿಗಳು ಕಡ್ಡಾಯವಾಗಿ ಒಂದು ಡೋಸ್ ಕೊರೋನಾ ಲಸಿಕೆಯನ್ನು ಪಡೆದಿರಬೇಕು. ಕಾಲೇಜುಗಳಲ್ಲಿ ಕೊರೋನಾ ನಿಯಮ ಉಲ್ಲಂಘನೆಯಾದ್ರೆ ಅಂತಹ ಸಂದರ್ಭದಲ್ಲಿ ಕಾಲೇಜುಗಳ ವಿರುದ್ದ ಕೊರೋನಾ ಸೋಂಕಿನ...
ಪೋಷಕರೇ ಗಮನಿಸಿ..! ಮೊಬೈಲ್ ನಲ್ಲಿ ಆಟವಾಡುತ್ತಿದ್ದ ಆ ಬಾಲಕನ ಸ್ಥಿತಿ ಹೇಗಾಗಿದೆ ನೋಡಿ..!
ಹಾವೇರಿ: ಕೊರೋನಾ ಹಿನ್ನೆಲೆಯಲ್ಲಿ ಸದ್ಯ ವಿದ್ಯಾರ್ಥಿಗಳಿಗೆ ಎಲ್ಲೆಡೆಯೂ ಆನ್ ಲೈನ್ ಕ್ಲಾಸ್ ಗಳು ಚಾಲ್ತಿಯಲ್ಲಿವೆ. ಹೀಗಾಗಿ, ಪೋಷಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ರೆ ಹಾಗೆ ಮೊಬೈಲ್ ಕೊಡುವ ಮುನ್ನ ಎಚ್ಚರಿಕೆ ವಹಿಸೋದು ತುಂಬಾ ಮುಖ್ಯ, ಯಾಕಂದ್ರೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ಇಂದು ನಡೆದಿರೋ ಈ ಘಟನೆ ನಿಜಕ್ಕೂ ಭಯಾನಕ. ಏನದು ಘಟನೆ..? ಕೊರೋನಾ ಕಾಟದಿಂದ ಶಾಲೆಗಳು ತೆರೆಯದೇ ಇರೋ ಕಾರಣ ಆ ಬಾಲಕ ಮನೆಯಲ್ಲಿ ಹಾಯಾಗಿ ಎಲ್ಲಾ ಮಕ್ಕಳೊಂದಿಗೆ ಖುಷಿಯಾಗಿದ್ದ. ರಸ್ತೆಯಲ್ಲಿ ಯಾವುದೊ ಹಳೆಯ ವಸ್ತು ಸಿಕ್ಕಿತು ಅಂತಾ ಅದರೊಂದಿಗೆ ಬಾಲಕ ಆಟವಾಡ್ತಿದ್ದ ಅಷ್ಟೇ, ಕಣ್ಬಿಡುವಷ್ಟರಲ್ಲಿ ಕೈಯಲ್ಲಿದ್ದ ಹಳೆಯ ಮೊಬೈಲ್ ಬ್ಯಾಟರಿ ಸಿಡಿದು ಆ ಬಾಲಕ ಇದೀಗ ಆಸ್ಪತ್ರೆಯಲ್ಲಿ ನರಳುವಂತೆ ಮಾಡಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಅಂದಹಾಗೆ, ಆ ಬಾಲಕನ ಹೆಸರು ಕಾರ್ತಿಕ್ ಕಲಾದಗಿ ಅಂತಾ. ಈತನ ಈ ಸ್ಥಿತಿಗೆ ದಾರಿಯಲ್ಲಿ ಯಾರೊ ಬಿಸಾಡಿದ್ದ ಮೊಬೈಲ್...
ಆ ಪ್ರಬುದ್ಧ ನಾಯಕನಿಗೆ ಇದೇಂತಾ ಗತಿ..? ಬಿಜೆಪಿ “ಬಣ” ಗುದ್ದಾಟದಲ್ಲಿ ಎಲ್ಟಿ ಪಾಟೀಲರ ದಾರಿ ಯಾವುದಯ್ಯ..?
“ನಾನು ಬಿಜೆಪಿಗೆ ಬಂದು ತಪ್ಪು ಮಾಡಿಬಿಟ್ನಾ..?” ಇಂತಹದ್ದೊಂದು ಪ್ರಶ್ನೆ ಬಹುಶಃ ಆ ನಾಯಕನಿಗೆ ಅನ್ನಿಸಿದೆಯೆನೋ.. ಯಾಕಂದ್ರೆ, ಮುಂಡಗೋಡ ತಾಲೂಕಿನ ಒಂದು ಪ್ರಬಲ ಸಮುದಾಯದ ನಾಯಕ ಈಗ ದಾರಿ ಕಾಣದಂತಾಗಿದ್ದಾರೆ. ಒಂದುವೇಳೆ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಷ್ಟೋತ್ತಿಗಾಗಲೇ ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಹುಶಃ ಕಾಂಗ್ರೆಸ್ MLA ಅಭ್ಯರ್ಥಿ ಅಂತಾ ಪತಾಕೆ ಹಾರಿಸ್ತಿದ್ದರೇನೋ…! ಅಂತವರು ಈಗ ಬಿಜೆಪಿಯಲ್ಲಿ ಎಲ್ಲೊ ಒಂದು ಕಡೆ ಸೈಡ್ ಲೈನ್ ಆಗ್ತಿದಾರಾ..? ಈ ಪ್ರಶ್ನೆ ಸದ್ಯದ ಬಲು ಚರ್ಚಿತ ವಿಷಯ. ಹೌದು, ಮುಂಡಗೋಡ ತಾಲೂಕಿನಲ್ಲಿ ಅಂತಹದ್ದೊಂದು ಚಾರ್ಮು ಇವತ್ತಿಗೂ ಉಳಿಸಿಕೊಂಡು ಬಂದಿರೋ ಆ ಮುಖಂಡ ಈಗ ಮಮ್ಮಲ ಮರುಗುತ್ತಿದ್ದಾರೆ. ಯಾಕಂದ್ರೆ, ಕಾಂಗ್ರೆಸ್ ಪಡಸಾಲೆಯಲ್ಲಿ ತಾಲೂಕಿನ ಮಟ್ಟಿಗೆ ಪ್ರಶ್ನಾತೀತ ನಾಯಕ ಅಂತಾ ಕರೆಸಿಕೊಂಡು ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದ್ದ ಎಲ್.ಟಿ.ಪಾಟೀಲ್ ಈಗ ಅದ್ಯಾಕೋ ಏನೋ ಬಿಜೆಪಿ ಅಂಗಳದಲ್ಲಿ ಸಿಕ್ಕು ನಲುಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಅದೊಂದು ಕಾಲವಿತ್ತು..! ನಿಜ, ಮುಂಡಗೋಡ ತಾಲೂಕಿನ ರಾಜಕೀಯ ಪಡಸಾಲೆಯಲ್ಲಿ ಪಾಟೀಲರದ್ದೇ...