Home BIG BREAKING

Category: BIG BREAKING

Post
ಸಿಂಗನಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕುಡಿಯೊ ನೀರಿಗಾಗಿ ರಸ್ತೆ ತಡೆ..! ಅಯ್ಯೋ, ಇದು ನಾಚಿಗ್ಗೇಡಲ್ವಾ ಭಗೀರಥರೇ..?

ಸಿಂಗನಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಕುಡಿಯೊ ನೀರಿಗಾಗಿ ರಸ್ತೆ ತಡೆ..! ಅಯ್ಯೋ, ಇದು ನಾಚಿಗ್ಗೇಡಲ್ವಾ ಭಗೀರಥರೇ..?

 ಮುಂಡಗೋಡ ತಾಲೂಕಾಡಳಿತ ಅದೇನು ಕಡೆದು ಗುಡ್ಡೆ ಹಾಕ್ತಿದೆಯೋ ಒಂದೂ ಅರ್ಥ ಆಗ್ತಿಲ್ಲ. ಇಲ್ಲಿ ಜನರಿಗೆ ಬವಣೆಗಳೇ ಹಾಸು ಹೊಕ್ಕಾಗಿದೆ. ಕೋಟಿ ಕೋಟಿ ಹಣದ ಹರಿವು ಆಗ್ತಿದೆ. ಸಾಕಷ್ಟು ಅಭಿವೃದ್ಧಿಯ ಪರ್ವವೇ ತಾಲೂಕಿನಲ್ಲಿ ನಡೆದಿದೆ. ಹಾಗೆ ಹೀಗೆ ಅಂತೇಲ್ಲ‌ ಬಡಾಯಿ ಕೊಚ್ಚಿಕೊಳ್ಳುವ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಗಳೇ ಕಾಣುತ್ತಿಲ್ವಾ..? ಇಂತಹದ್ದೊಂದು ಅನುಮಾನ ಮೂಡುತ್ತಿದೆ. ನಿಜ ಇದು ಅಕ್ಷರಶಃ ನಮ್ಮ ತಾಲೂಕಿನ ವ್ಯವಸ್ಥೆಗೆ ಹಿಡಿದ ಕನ್ನಡಿ.. ನಾಚಿಗ್ಗೇಡು..! ಭಗೀರಥರ ತವರು..! ಯಾಕಂದ್ರೆ, ಸಾಕ್ಷಾತ್ ಭಗೀರಥರ ಅವತಾರ ಮುಂಡಗೋಡ ತಾಲೂಕಿ‌ನಲ್ಲಿ ಆಗಿಯೇ...

Post
ಮಗಳ‌ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..! ಎಲ್ಲಿ ಗೊತ್ತಾ..?

ಮಗಳ‌ ಮದುವೆಗೆ ಮಾಡಿದ್ದ ಸಾಲ ತೀರಿಸಲಾಗದೇ ಒಂದೇ ಕುಟುಂಬದ ಮೂವರು ಆತ್ಮಹತ್ಯೆ..! ಎಲ್ಲಿ ಗೊತ್ತಾ..?

ಸವಣೂರಿನಲ್ಲಿ ಕರುಳು ಹಿಂಡುವ, ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಸಾಲ‌ಮಾಡಿ ಮಗಳ‌ಮದುವೆ ಮಾಡಿದ್ದ ದಂಪತಿಗಳು ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ, ತಂದೆ, ತಾಯಿಯ ಸಾವು ಕಂಡ ಮಗಳೂ ಕೂಡ ನೇಣಿಗೆ ಶರಣಾಗಿದ್ದಾಳೆ. ಇದ್ರೊಂದಿಗೆ ಒಂದೇ ಕುಟುಂಬ ಮೂವರು ಸಾವಿನ ಹಾದಿ ಹಿಡಿದಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ಘಟಮೆ ನಡೆದಿದೆ. ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲ...

Post
ಇಂದೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್, 250 ಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

ಇಂದೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್, 250 ಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!

ಮುಂಡಗೋಡ: ಇಂದೂರಿನಲ್ಲಿ ಬಿಜೆಪಿಗೆ ಮರ್ಮಾಘಾತವಾಗಿದೆ. ಇಷ್ಟು ದಿನ ಬಲಿಷ್ಟವಾಗಿದ್ದ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಿಜೆಪಿಗೆ ಇವತ್ತು ಕಾಂಗ್ರೆಸ್ ಶಾಕ್ ನೀಡಿದೆ. ಸುಮಾರು 250 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈ ಹಿಡಿದಿದ್ದಾರೆ. ಇದ್ರೊಂದಿಗೆ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಇಂದೂರು, ಕೊಪ್ಪ, ಇಂದಿರಾನಗರದಲ್ಲಿ ಕಾಂಗ್ರೆಸ್ ಗೆ ಬೂಸ್ಟ್ ಸಿಕ್ಕಂತಾಗಿದೆ. ಇಂದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹ್ಮದ್ ರಫೀಕ್ ದೇಸಳ್ಳಿ, ಮಾಜಿ ಉಪಾಧ್ಯಕ್ಷ ಬಿಷ್ಟನಗೌಡ ಪಾಟೀಲ್, ಸೊಸೈಟಿ ಮಾಜಿ ಅಧ್ಯಕ್ಷ ರವಿಚಂದ್ರ ದುಗ್ಗಳ್ಳಿ ಸೇರಿದಂತೆ...

Post
ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!

ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!

ಮುಂಡಗೋಡ ತಾಲೂಕಿನ ಗಡಿಭಾಗ ಅಗಡಿ ಮಿಲ್ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬೈಕ್ ಗಳ‌ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ. ಅಗಡಿ ಶಾಂತಿನಗರದ ಸುರೇಶ್ ಎಂಬುವ ಯುವಕ, ನಂದಿಕಟ್ಟಾ ಗ್ರಾಮದ ಮಹಮದ್ ದುಂಡಸಿ (37), ಈಸಾಕ್ ಯಲ್ಲಾಪುರ (35) ಇಬ್ಬರು ಯುವಕರಿಗೆ ಹಾಗೂ ಕಲಘಟಗಿ ತಾಲೂಕಿನ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ನೆಲ್ಲಿಹರವಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ....

Post
ಸಾವಿನಲ್ಲೂ ಸಾರ್ಥಕತೆ ಮೆರೆದ ಅಗಡಿಯ ಯುವಕ ಸಂಜು ಸಿದ್ದಪ್ಪ ಗಳಗಿ, ನೇತ್ರದಾನ, ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ..!

ಸಾವಿನಲ್ಲೂ ಸಾರ್ಥಕತೆ ಮೆರೆದ ಅಗಡಿಯ ಯುವಕ ಸಂಜು ಸಿದ್ದಪ್ಪ ಗಳಗಿ, ನೇತ್ರದಾನ, ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ..!

ಶಿವರಾತ್ರಿಯ ದಿನವೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ ಅಗಡಿಯ ಯುವಕ ಸಾವು ಕಂಡಿದ್ದಾನೆ. ಆದ್ರೆ ಈ ಯುವಕನ ಕುಟುಂಬಸ್ಥರು ನಿಜಕ್ಕೂ ತನ್ನ ಕರುಳಿನ ಕುಡಿಯ ಸಾವಿಗೂ ಒಂದು ಸಾರ್ಥಕತೆಯ ಮೆರಗು ಕೊಟ್ಟಿದ್ದಾರೆ. ಮಣ್ಣಿನಲ್ಲಿ‌ ಮಣ್ಣಾಗ ಹೊರಟಿದ್ದ ಅಮೂಲ್ಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆಯ ಆದರ್ಶ ಮೆರೆದಿದ್ದಾರೆ. ನೋವಿನಲ್ಲೂ ಕುಟುಂಬಸ್ಥರ ಕಳಕಳಿ..! ಅಗಡಿ ಗ್ರಾಮದ ಸಂಜು ಸಿದ್ದಪ್ಪ ಗಳಗಿ (23) ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ. ಸಂಜುವಿನ ತಲೆಗೆ...

Post
ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!

ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!

 ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೆಂಕಿ ಅವಘಡವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ‌. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಮುಂಜಾಗ್ರತೆಯಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಹೊಸ ಓಣಿಯ ರಾಜು ಹಿರೇಮಠ ಎಂಬುವವರಿಗೆ ಸೇರಿದ ಮನೆಯಲ್ಲಿ, ವೀಣಾ ಬಾಳಂಬೀಡ ಎನ್ಹುವವರು ಬಾಡಿಗೆ ಇದ್ದರು. ಇಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದ ನಂತರ ಕೆಲವೇ ಹೊತ್ತಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ...

Post
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ “ಮುಚ್ಚಿ” ಉಂಡವನದ್ದೇ ಕಾರುಬಾರು, ಹಾಗಿದ್ರೆ, ಗಾಂಧಿನಗರ ನಿವಾಸಿಗಳ ಗೋಳು ಕೇಳೋರ್ಯಾರು..?

ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ “ಮುಚ್ಚಿ” ಉಂಡವನದ್ದೇ ಕಾರುಬಾರು, ಹಾಗಿದ್ರೆ, ಗಾಂಧಿನಗರ ನಿವಾಸಿಗಳ ಗೋಳು ಕೇಳೋರ್ಯಾರು..?

  ಮುಂಡಗೋಡ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅದೇನಾಗಿದೆಯೊ ಒಂದೂ ಅರ್ಥ ಆಗ್ತಿಲ್ಲ. ಇಡೀ ಪಟ್ಟಣದ ಜನ ಒಂದರ್ಥದಲ್ಲಿ ಇಲ್ಲಿನ ಬ್ರಷ್ಟಾಚಾರ ಕಂಡು ಎಲೆ ಎಡಿಕೆ ಸೇವೆ ಮಾಡೋದಷ್ಟೇ ಬಾಕಿ ಉಳಿದಿದೆ. ಯಾಕಂದ್ರೆ, ಈ ಕಚೇರಿಯಲ್ಲಿನ ಕೆಲವು ನುಂಗಣ್ಣರುಗಳ ಕರಾಮತ್ತು ಹಲವರ ಬದುಕಿನ ಜೊತೆ ಚೆಲ್ಲಾಟಕ್ಕಿಳಿದಂತಾಗಿದೆ. ಬ್ರಷ್ಟರ ಬಂಡವಾಳವಾಯ್ತಾ..? ಫಾರ್ಮ್ ನಂ.3 ಅನ್ನೋ “ಬಂಡವಾಳ” ಇಟ್ಕೊಂಡು ಅಕ್ಷರಶಃ ವ್ಯವಹಾರಕ್ಕಿಳಿದಿರೋ ಪಟ್ಟಣ ಪಂಚಾಯತಿಯ ಕೆಲವು ನುಂಗಣ್ಣರುಗಳಿಗೆ ಇದೊಂದು ರೊಕ್ಕ ಗಳಿಸುವ ಅಡ್ಡ ದಂಧೆಯಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಈ...

Post
“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!

“ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಇದು ಕ್ಷೇತ್ರ ಮೈಲಾರ ಕಾರ್ಣೀಕ..!

  ಮೈಲಾರ: “ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್” ಇದು ಪ್ರಸಕ್ತ ವರ್ಷದ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, ವೃತಾದಾರಿ ಗೊರವಯ್ಯ ನುಡಿದ ಕಾರ್ಣಿಕ ನುಡಿ. ಗೊರವಯ್ಯ ರಾಮಪ್ಪ ಎಂಬುವವರು 14 ಅಡಿ ಎತ್ತರದ ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕ ಭವಿಷ್ಯ ನುಡಿದಿದ್ದಾರೆ. ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಎಂಬ ಕಾರ್ಣಿಕ ವಿಶ್ಲೇಷಣೆ ಮಾಡಲಾಗಿದೆ. ಡೆಂಕಣಮರಡಿಯಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ...

Post
ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಹಾನಗಲ್ ಬಳಿಯ ಜಿಗಳಿಕೊಪ್ಪದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ, ಬೆಚ್ಚಿಬಿದ್ದ ಗ್ರಾಮಸ್ಥರು..!

ಬೆಳ್ಳಂಬೆಳಿಗ್ಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಜಿಗಳಿಕೊಪ್ಪ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಮಾಡಿ, ಚಾಪೆ, ಹಾಗೂ ರಗ್ಗಿನಲ್ಲಿ ಸುತ್ತಿ ಗೋವಿನಜೋಳದ ಜಮೀನಿನಲ್ಲಿ ಬಿಸಾಕಿ ಹೋಗಿದ್ದಾರೆ ದುಷ್ಕರ್ಮಿಗಳು. ಮೃತ ವ್ಯಕ್ತಿ ಸುಮಾರು 35 ವರ್ಷ ಪ್ರಾಯದವನಾಗಿದ್ದು, ಯಾರು, ಎಲ್ಲಿಯವನು ಅನ್ನೊ ಮಾಹಿತಿ ಇನ್ನೂ ಸಿಕ್ಕಿಲ್ಲ. ಗುಪ್ತಾಂಗಕ್ಕೆ ಹೊಡೆದು ಕೊಲೆ..! ಇನ್ನು ಅದೇಲ್ಲೊ ಕೊಲೆ ಮಾಡಿ, ಶವವನ್ನು ಚಾಪೆಯಲ್ಲಿ ಸುತ್ತಿ, ಜಿಗಳಿಕೊಪ್ಪ ಗ್ರಾಮದ ಹೊರವಲಯದಲ್ಲಿ ಬೀಸಾಕಿ ಹೋಗಿರೋ ಶವದ ಮುಖ, ತಲೆ ಹಾಗೂ ಗುಪ್ತಾಂಗಕ್ಕೆ ಏಟುಗಳು ಬಿದ್ದು...

Post
ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ರೈಲಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿ ಬಂಧನ, ಕಾರವಾರ ರೈಲ್ವೆ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ಕಾರವಾರ: ಕೇರಳಕ್ಕೆ ಅಕ್ರಮವಾಗಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಕಾರವಾರ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳ ಎಕ್ಸ್ ಪ್ರೆಸ್ ರೈಲಿನಲ್ಲಿ ದಾಖಲೆ ರಹಿತ ಹಣ ಸಾಗಿಸುತ್ತಿದ್ದ ವೇಳೆ ಬಂಧಿಸಲಾಗಿದೆ. ಮಹಾರಾಷ್ಟ್ರ ಮೂಲದ ವಿಕಾಸ್ ರಮೇಶ್ ದೋಕಲೆ ಬಂಧಿತ ವ್ಯಕ್ತಿಯಾಗಿದ್ದು, ಬಂಧಿತನಿಂದ ದಾಖಲೆ ರಹಿತ ರೂ.20,09,720 ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ದಿಂದ ಕೇರಳಕ್ಕೆ ಹಣ ಕೊಂಡೊಯ್ಯುತಿದ್ದನು ಎನ್ನಲಾಗಿದ್ದು, ರೈಲ್ವೆ ಪೊಲೀಸರಿಂದ ಕಾರವಾರ ನಗರ ಠಾಣೆ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿದೆ.

error: Content is protected !!