Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಅತ್ತಿವೇರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ತೆರವು..!

ಅತ್ತಿವೇರಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆ ತೆರವು..!

ಮುಂಡಗೋಡ: ತಾಲೂಕಿನ ಅತ್ತಿವೇರಿ ದರ್ಗಾ ಹತ್ತಿರ ಅಕ್ರಮವಾಗಿ ಕಟ್ಟಿಕೊಂಡಿದ್ದ ಮನೆಯನ್ನು ಹುನಗುಂದ ಗ್ರಾಮ ಪಂಚಾಯತಿಯವರು ತೆರವುಗೊಳಿಸಿದ್ರು‌. ಅತ್ತಿವೇರಿ ಗ್ರಾಮದಲ್ಲಿ ಮನೆ ಹೊಂದಿದ್ದರೂ ಸರ್ಕಾರದ ಗಾಂವಠಾಣ ಜಾಗದಲ್ಲಿ ಮತ್ತೊಂದು ಮನೆ ನಿರ್ಮಿಸಿಕೊಂಡಿದ್ದ ವ್ಯಕ್ತಿಗೆ ಗ್ರಾಮ ಪಂಚಾಯತಿಯಿಂದ ನೋಟೀಸ್ ನೀಡಲಾಗಿತ್ತು. ನೋಟೀಸ್ ಮೂಲಕ ಮನೆ ತೆರವು ಮಾಡಲು ಸೂಚನೆ‌ ನೀಡಲಾಗಿತ್ತು. ಆದ್ರೂ ಸಹಿತ ಮನೆ ತೆರವು ಮಾಡಿಕೊಳ್ಳದ ಕಾರಣ ಇಂದು ಪೊಲೀಸರ ಸಹಾಯದೊಂದಿಗೆ ಅಕ್ರಮ ಮನೆ ತೆರವು ಮಾಡಲಾಯಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ...

Post
ವಡಗಟ್ಟಾ ಬಳಿ ಬೈಕ್ ಗೆ ಅಡ್ಡ ಬಂದ ಕಾಡುಹಂದಿ, ಬೈಕ್ ಬಿದ್ದು, ಬೈಕ್ ಸವಾರನಿಗೆ ಗಾಯ..!

ವಡಗಟ್ಟಾ ಬಳಿ ಬೈಕ್ ಗೆ ಅಡ್ಡ ಬಂದ ಕಾಡುಹಂದಿ, ಬೈಕ್ ಬಿದ್ದು, ಬೈಕ್ ಸವಾರನಿಗೆ ಗಾಯ..!

ಮುಂಡಗೋಡ ತಾಲೂಕಿನ ವಡಗಟ್ಟಾ- ಹುನಗುಂದ ರಸ್ತೆಯಲ್ಲಿ ಬೈಕ್ ಗೆ ಕಾಡು ಹಂದಿ ಅಡ್ಡ ಬಂದ ಪರಿಣಾಮ ಬೈಕ್ ಬಿದ್ದು ಸವಾರನಿಗೆ ಗಾಯವಾದ ಘಟನೆ ನಡೆದಿದೆ‌. ಪ್ರಸಾದ್ ಕುಂಜು (51) ಎಂಬುವವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ ಹುನಗುಂದ ಹಾಗೂ ವಡಗಟ್ಟಾ ರಸ್ತೆಯಲ್ಲಿ ಬೈಕ್ ಮೇಲೆ ಬರುತ್ತಿರುವಾಗ ಘಟನೆ ನಡೆದಿದೆ. ಬೈಕ್ ಮೇಲಿಂದ ಬಿದ್ದು ಗಾಯಗೊಂಡು ಒದ್ದಾಡುತ್ತಿದ್ದ ವೇಳೆ ಗ್ರಾಮಸ್ಥರು ರಕ್ಷಿಸಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ‌. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Post
ಇಂದೂರಿನಲ್ಲಿ ಪರಿಷತ್ ಗೆಲುವಿಗೆ ಬಿಜೆಪಿಗರ ಸಂಭ್ರಮ..!

ಇಂದೂರಿನಲ್ಲಿ ಪರಿಷತ್ ಗೆಲುವಿಗೆ ಬಿಜೆಪಿಗರ ಸಂಭ್ರಮ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ‌ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Post
ಹುನಗುಂದ ಗ್ರಾಮದಲ್ಲೂ ಬಿಜೆಪಿಗರ ಸಂಭ್ರಮ..!

ಹುನಗುಂದ ಗ್ರಾಮದಲ್ಲೂ ಬಿಜೆಪಿಗರ ಸಂಭ್ರಮ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಪಡೆಯುತ್ತಿದ್ದಂತೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ‌ ಮಾಡಿದ್ರು. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು..ಈ ವೇಳೆ ಗ್ರಾಮದ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು..

Post
ಅರಶಿಣಗೇರಿ ಕಾಲುವೆ ಕಾಮಗಾರಿ ಕಳಪೆ, ದುರಸ್ಥಿ ಮಾಡುವಂತೆ ರೈತರ ಆಗ್ರಹ..!

ಅರಶಿಣಗೇರಿ ಕಾಲುವೆ ಕಾಮಗಾರಿ ಕಳಪೆ, ದುರಸ್ಥಿ ಮಾಡುವಂತೆ ರೈತರ ಆಗ್ರಹ..!

ಮುಂಡಗೋಡ: ತಾಲೂಕಿನ ಅರಶಿಣಗೇರಿ ಕೆರೆಯ ಕಾಲುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕಾಗಿ ರೈತರು ಮನವಿ ಮಾಡ್ತಿದಾರೆ. ಅರಶಿಣಗೇರಿ, ಅಗಡಿ ಹುನಗುಂದ ಗ್ರಾಮಗಳ ರೈತರ ಜೀವನಾಡಿಯಾಗಿರೋ ಅರಶಿಣಗೇರಿ ಕೆರೆಯ ಕಾಲುವೆಯನ್ನು ಈಗಾಗಲೇ ದುರಸ್ಥಿ ಕಾರ್ಯ ಮಾಡಿರೋ ಚಿಕ್ಕ ನೀರಾವರಿ ಇಲಾಖೆ ಅರ್ದಮರ್ದ ಕೆಲಸ ಮಾಡಿ ಹೋಗಿದ್ದಾರೆ ಅಲ್ಲದೇ ಹಾಗೆ ಮಾಡಿರೋ ಕೆಲಸವನ್ನೂ ಕಳಪೆಯಾಗಿ ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕಾಲುವೆಯ ದುರಸ್ತಿ ಮಾಡಿ, ಕಾಮಗಾರಿ...

Post
ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!

ನಂದಿಕಟ್ಟಾದಲ್ಲಿ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಎಗ್ ರೈಸ್ ಅಂಗಡಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ನಂದಿಕಟ್ಟಾ ಗ್ರಾಮದ ಮಂಜುನಾಥ್ ಎಂಬ ಯುವಕ ಕೆಲವರ್ಷಗಳಿಂದ ಎಗ್ ರೈಸ್ ಶಾಪ್ ನಡೆಸುತ್ತಿದ್ದ ನಿನ್ನೆ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಲು ಅಂಗಡಿಯ ಹಿಂದಿನ ಗೋಡೆಯನ್ನು ಒಡೆಯಲು ಯತ್ನಿಸಿದ್ದಾರೆ. ಆದ್ರೆ, ಅಂಗಡಿಯಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಟ್ರ್ಯಾಕ್ಟರ್ ಟೇಪ್ ರಿಕಾರ್ಡರ್ ತೆಗೆದಿರೋ ಕಳ್ಳರು ಅದನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಅಂಗಡಿ ಹಿಂದುಗಡೆ ಗೋಡೆಗೆ ಕನ್ನ ಹಾಕಿರೋ ಕಳ್ಳರು ರಂದ್ರ...

Post
ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!

ಮುಂಡಗೋಡಿನ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಗೆಲುವಿನ ಸಂಭ್ರಮ..!

ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿಗರು ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು‌. ಬಿಜೆಪಿ ಪರವಾಗಿ ಘೋಷಣೆ ಕೂಗಿದ್ರು. ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಶಿವರಾಮ್ ಹೆಬ್ಬಾರ್ ಪರವಾಗಿಯೂ ಘೋಷಣೆ ಕೂಗಿ ಸಂಭ್ರಮಿಸಿದ್ರು‌. ಈ ವೇಳೆ ಬಿಜೆಪಿಯ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ರು.

Post
ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!

ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!

ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನಿತ್ಯವೂ ಮಂಗಗಳ ತುಂಟಾಟ ಮಿತಿ ಮೀರಿದೆ.. ಯಾರ ಭಯವೂ ಇಲ್ಲದೇ ಮಂಗಗಳು ಇಲ್ಲಿ ಮಾಡೋ ಕೀಟಲೆಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಫಜೀತಿ ತಂದಿಡುತ್ತಿವೆ. ಶಿವಾಜಿ ಸರ್ಕಲ್ ಬಳಿಯ ಬಿಲ್ಡಿಂಗ್ ಗಳ‌ ಮೇಲೆ ವಾನರ ಸೇನೆ ಜಿಗಿದಾಡುತ್ತಿವೆ. ವಿದ್ಯುತ್ ಲೈನ್ ಗಳು ಮಂಗಗಳ ಜಿಗಿದಾಟಕ್ಕೆ ಹರಿದು ಹೋಗುತ್ತಿವೆ‌. ಇನ್ನು ಸರ್ಕಲ್ ನಲ್ಲಿ ಕಟ್ಟಿರೋ ವಿವಿಧ ಬ್ಯಾನರ್ ಗಳನ್ನು ಹರಿದು ಹಾಕುತ್ತಿವೆ. ಹೀಗಾಗಿ, ಸಾರ್ವಜನಿಕರಿಗೆ ಮಂಗಗಳ ಕೀಟಲೆಗಳದ್ದೇ ಸಮಸ್ಯೆಯಾಗಿದೆ‌.

Post
ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ನಂದಿಕಟ್ಟಾದಲ್ಲಿ ಮೆಕ್ಕೆಜೋಳ ಬೆಳೆದ ಅನ್ನದಾತರಿಗೆ ಸನ್ಮಾನ ಕಾರ್ಯ..

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಖಾಸಗಿ ಮೆಕ್ಕೆಜೋಳ ಬೀಜ ಬಿತ್ತಿ ಉತ್ತಮ‌ ಫಸಲು ಪಡೆದ ರೈತರಿಗೆ ಕಂಪನಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತಮವಾಗಿ ಫಸಲು ಬೆಳೆದ ನಂದಿಕಟ್ಟಾದ ರೈತ ಶಿವಾಜಿ ರಾಧಾಪುರ ಹಾಗೂ ಹುಲಿಹೊಂಡ ಗ್ರಾಮದ ರೈತ ಸಿದ್ದಣ್ಣ ವಾಲೀಕಾರ್ ಗೆ ಸನ್ಮಾನಿಸಲಾಯಿತು. ಈ ವೇಳೆ ನಂದಿಕಟ್ಟಾ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು, ಮುಖಂಡರು ಭಾಗಿಯಾಗಿದ್ರು.

Post
ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಗಬ್ಬೇದ್ದು ಹೋಗಿದೆ ಹುನಗುಂದ ಬಸವಣ್ಣ ಹೊಂಡ, ಪಿಡಿಓ ಸಾಹೇಬ್ರೇ ಒಂದಿಷ್ಟು ಗಮನಿಸಿ..!

ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರೇ ಒಮ್ಮೆಯಾದ್ರೂ ನೀವು ಗ್ರಾಮದಲ್ಲಿರೋ ಬಸವಣ್ಣ ದೇವರ ಹೊಂಡ ಕಣ್ತುಂಬ ನೋಡಿದ್ದೀರಾ..? ಅಧ್ಯಕ್ಷರೇ, ನೀವಾದ್ರೂ ಈ ಹೊಂಡದ ಅವ್ಯವಸ್ಥೆ, ಗಬ್ಬೇದ್ದು ಹೋಗಿರೋ ಪರಿಯನ್ನ ಕಂಡಿದ್ದೀರಾ.. ದಯವಿಟ್ಟು ಒಮ್ಮೆ ಬಂದು ದರ್ಶನ ಮಾಡ್ಕೊಳ್ಳಿ, ಹಾಗಂತ, ಬಸವಣ್ಣ ಹೊಂಡದ ಅಕ್ಕಪಕ್ಕದ ಜನ ಹಿಡಿಶಾಪ ಹಾಕ್ತಿದಾರೆ. ಆದ್ರೆ, ಹುನಗುಂದ ಗ್ರಾಮ ಪಂಚಾಯತಿಯ ಪಿಡಿಓ ಸಾಹೇಬ್ರು ಮಾತ್ರ ಗಪ್ ಚುಪ್ ಆಗಿದ್ದಾರೆ. ಈಗ ಈ ದೃಷ್ಯದಲ್ಲಿ ನೀವು ನೋಡಿರೋ ಈ ಹೊಂಡ ಒಂದು ಕಾಲದಲ್ಲಿ ಇಡೀ ಊರಿನ...

error: Content is protected !!