ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಕೋತಿಗಳ ಸಾಮ್ರಾಜ್ಯ..!

ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನಿತ್ಯವೂ ಮಂಗಗಳ ತುಂಟಾಟ ಮಿತಿ ಮೀರಿದೆ.. ಯಾರ ಭಯವೂ ಇಲ್ಲದೇ ಮಂಗಗಳು ಇಲ್ಲಿ ಮಾಡೋ ಕೀಟಲೆಗಳು ಕೆಲವೊಮ್ಮೆ ಸಾರ್ವಜನಿಕರಿಗೆ ಫಜೀತಿ ತಂದಿಡುತ್ತಿವೆ. ಶಿವಾಜಿ ಸರ್ಕಲ್ ಬಳಿಯ ಬಿಲ್ಡಿಂಗ್ ಗಳ‌ ಮೇಲೆ ವಾನರ ಸೇನೆ ಜಿಗಿದಾಡುತ್ತಿವೆ. ವಿದ್ಯುತ್ ಲೈನ್ ಗಳು ಮಂಗಗಳ ಜಿಗಿದಾಟಕ್ಕೆ ಹರಿದು ಹೋಗುತ್ತಿವೆ‌. ಇನ್ನು ಸರ್ಕಲ್ ನಲ್ಲಿ ಕಟ್ಟಿರೋ ವಿವಿಧ ಬ್ಯಾನರ್ ಗಳನ್ನು ಹರಿದು ಹಾಕುತ್ತಿವೆ. ಹೀಗಾಗಿ, ಸಾರ್ವಜನಿಕರಿಗೆ ಮಂಗಗಳ ಕೀಟಲೆಗಳದ್ದೇ ಸಮಸ್ಯೆಯಾಗಿದೆ‌.