ಕುಮಟಾ: ಸಮುದ್ರದಲ್ಲಿ ಮುಳುಗಿ ಪ್ರವಾಸಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳ ಸಾವು ಕಂಡ ಘಟನೆ ತಾಲೂಕಿನ ಬಾಡ ಬೀಚ್ ನಲ್ಲಿ ನಡೆದಿದೆ. ದಾವಣಗೇರೆ ಮೂಲದ ಮೇಘ ಎಂ(24) ಹಾಗೂ ರೇಣುಕಾ ಪ್ರಸಾದ್ (24) ಮೃತ ವಿದ್ಯಾರ್ಥಿಗಳು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಈ ವರ್ಷ ಮುಗಿದಿತ್ತು. ಹೀಗಾಗಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಾಗ ದುರ್ಘಟನೆ ನಡೆದಿದೆ. ಮೇಘಾ ಮೃತದೇಹ ಸಿಕ್ಕಿದ್ದು, ರೇಣುಕಾ ಪ್ರಸಾದ್ ದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ. ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Category: ಉತ್ತರ ಕನ್ನಡ
ಮೊಹರಂ ಹುಲಿವೇಷಧಾರಿ ಹಾಗೂ ತಮಟೆ ಕಲಾವಿದನ ಜುಗಲ್ ಬಂದಿ..!
ಮುಂಡಗೋಡ: ತಾಲೂಕಿನಲ್ಲಿ ಸದ್ಯ ಮೊಹರಂ ಆಚರಣೆ ಭಕ್ತಿ ಭಾವದಿಂದ ನೆರವೇರುತ್ತಿದೆ. ತಾಲೂಕಿನಾಧ್ಯಂತ ಪಂಜಾಗಳನ್ನು ಪ್ರತಿಷ್ಟಾಪಿಸಲಾಗಿದೆ. ಹೀಗಾಗಿ, ಹುಲಿ ವೇಷಧಾರಿಗಳ ಕುಣಿತವೂ ಎಲ್ಲೆಲ್ಲೂ ಕಂಡು ಬರುತ್ತಿದೆ. ಅದ್ರಂತೆ, ಇಂದು ಮುಂಡಗೋಡ ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ತ ಹುಲಿವೇಷಧಾರಿ ಬಂದಿದ್ದರು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಯಿಂದ ಬಂದಿದ್ದ ಪ್ರಸಿದ್ಧ ತಮಟೆ ಕಲಾವಿದ ಪ್ರತಾಪ್ ಅವರು ತಮಟೆ ಬಾರಿಸಿದ್ರು. ತಮಟೆ ಶಬ್ದಕ್ಕೆ ಹುಲಿ ವೇಷಧಾರಿ ಸಕತ್ ಸ್ಟೆಪ್ ಹಾಕಿದ್ರು. ಮುಂಡಗೋಡಿನ ಶಿವಾಜಿ ಸರ್ಕಲ್ ಬಳಿ ಹುಲಿಯ ನೃತ್ಯಕ್ಕೆ ಜನರು ಫಿದಾ ಆಗಿ ಚಪ್ಪಾಳೆ...
ಮುಂಡಗೋಡಿನಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡುವಂತೆ ಮನವಿ..!
ಮುಂಡಗೋಡ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪಿಸುವಂತೆ ಇಂದು ಮುಂಡಗೋಡಿನ ರಾಯಣ್ಣ ಅಭಿಮಾನಿ ಬಳಗದಿಂದ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕಳೆದ ಹಲವು ವರ್ಷಗಳಿಂದ ಪಟ್ಟಣದ ಯಲ್ಲಾಪುರ-ಬಂಕಾಪುರ ರಸ್ತೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆ ಅಂತಾ ನಾಮಕರಣ ಮಾಡಲಾಗಿದೆ. ಆ ಕುರಿತು ಪಟ್ಟಣ ಪಂಚಾಯತಿಯಲ್ಲಿ ದಾಖಲಾಗಿದೆ. ಆದ್ರೆ ತಾಲೂಕಿನ ಸುಮಾರು 50 ಕಿಮಿ ವ್ಯಾಪ್ತಿಯಲ್ಲಿ ಎಲ್ಲಿಯೂ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆಯಾಗಿಲ್ಲ. ಹೀಗಾಗಿ, ಪಟ್ಟಣದ ಕಂಬಾರಗಟ್ಟಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು, ಮುಂದಿನ ಪೀಳಿಗೆಗೆ ರಾಯಣ್ಣನವರ...
ಇದು ಮುಂಡಗೋಡ ಪುಟಾಣಿಗಳ ಪವರ್ ಫುಲ್ ಸ್ಟೆಪ್..!
ಮುಂಡಗೋಡ; ಪಟ್ಟಣದಲ್ಲಿ ರವಿವಾರ 75 ನೇ ಸ್ವಾತಂತ್ರ ದಿನಾಚರಣೆ ಸಂಭ್ರಮ ಜೋರಾಗಿತ್ತು.. ಇಲ್ಲಿನ ಪ್ರತೀ ಗಲ್ಲಿಗಳಲ್ಲೂ ಭಾರತ ಮಾತೆಯ ತ್ರಿವರ್ಣಧ್ವಜ ರಾರಾಜಿಸುತ್ತಿತ್ತು.. ಪಟ್ಟಣದ ಸಂಘಸಂಸ್ಥೆಗಳು ವಿಶೇಷವಾಗಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ರು..ಇನ್ನು ಸ್ವಾತಂತ್ರ ದಿನಾಚರಣೆ ನಿಮಿತ್ತ ಮುಂಡಗೋಡಿನ ಪುಟ್ಟ ಪುಟಾಣಿ ಮಕ್ಕಳು ದೇಶಭಕ್ತಿಗೀತೆಗೆ ಹೆಜ್ಜೆ ಹಾಕಿದ್ದಾರೆ.. ಸ್ವಾತಂತ್ರ ಸಂಭ್ರಮದ ಕ್ಷಣಗಳನ್ನು ವಿನೂತನ ಡ್ಯಾನ್ಸ್ ಮಾಡುವ ಮೂಲಕ ದೇಶಭಕ್ತಿಯ ಕಂಪು ಹರಿಸಿದ್ದಾರೆ.. ಹಾಗಾದ್ರೆ ಆ ಸಕತ್ ಸ್ಟೆಪ್ ಹೇಗಿದೆ ಗೊತ್ತಾ.. ನೀವೂ ನೋಡಿ..
ಮುಂಡಗೋಡಿನಲ್ಲಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಂಭ್ರಮ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ರಾಯಣ್ಣನವರ ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ರಾಯಣ್ಣನವರ ಪರವಾಗಿ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ರು.
ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!
ಮುಂಡಗೋಡ; ತಾಲೂಕಿನ ಹುನಗುಂದ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ವತಿಯಿಂದ ಸಂಭ್ರಮದ ಧ್ವಜಾರೋಹಣ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ರು. ಹುನಗುಂದದ ಮುಖ್ಯ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ದೇ ಸರ್ಕಲ್ ನಲ್ಲಿ ಇರುವ ಧ್ವಜಸ್ತಂಭದ ಮೇಲೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಈ ವೇಳೆ ಗ್ರಾಮದ ರಾಯಣ್ಣ ಬಾಯ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾನ್..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...
ಎಸ್.ಎಸ್.ಎಲ್.ಸಿ ಫಲಿತಾಂಶ: ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್..!
ಶಿರಸಿ: ಇಂದು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಸಿದ್ದಾಪುರದ ಪ್ರಶಾಂತಿ ವಿದ್ಯಾನಿಕೇತನದಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಹೇಮಾ ಉಮೇಶ ಹೆಗಡೆ ಹಾಗೂ ಸಿದ್ದಾಪುರದ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ಎಸ್.ಎನ್.ಸುನೈ ಮತ್ತು ರೇಷ್ಮಾ ಹೆಗಡೆ 625 ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಒಬ್ಬ ವಿದ್ಯಾರ್ಥಿನಿ 625 ಅಂಕ ಗಳಿಸಿ ಸಾಧನೆ ಮಾಡಿದ್ದಳು. ಆದರೆ ಈ ಬಾರಿ...
ಹೊನ್ನಾವರದಲ್ಲಿ ಶಂಕಿತ ಭಯೋತ್ಪಾದಕನ ಬಂಧನ; ಇಂದು ಕೋರ್ಟ್ ಗೆ ಹಾಜರು ಪಡಿಸಲಿರೋ ಪೊಲೀಸರು..!
ಹೊನ್ನಾವರ: ತಾಲೂಕಿನ ಮಂಕಿ ಗ್ರಾಮದಲ್ಲಿ ನಿನ್ನೆ ಬಂಧಿಸಿದ್ದ ಶಂಕಿತ ಭಯೋತ್ಪಾದಕನನ್ನು ಇಂದು ಪೊಲೀಸರು, ಹೊನ್ನಾವರ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿರೋ ಮಾಹಿತಿ ಲಭ್ಯವಾಗಿದೆ. ಜುಫ್ರಿ ಜವಾಹರ್ ದಾಮೂದಿ ಎನ್ನುವವನನ್ನ ನಿನ್ನೆ NIA ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ಐಸೀಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಜುಫ್ರಿ, ಐಸೀಸ್ ಮಾಸಿಕ ಪತ್ರಿಕೆ “ವಾಯ್ಸ್ ಆಫ್ ಹಿಂದ್” ನ್ನು ದಕ್ಷಿಣ ಭಾರತದಲ್ಲಿ ಭಾಷಾಂತರ ಮಾಡುತ್ತಿದ್ದ. ಸಾಮಾಜಿಕ ಜಾಲತಾಣ ಮೂಲಕ ಯುವಕರಿಗೆ ಪ್ರಚೋದನೆ ಕೊಡುತ್ತಿದ್ದ. ಹೀಗಾಗಿ, ಖಚಿತ...