ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾ‌ನ್..!

ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.

error: Content is protected !!