Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ನಂದಿಕಟ್ಟಾ ಪಿಡಿಓ ಮೇಲೆ ಹಲ್ಲೆಗೆ ಖಂಡನೆ: ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಗ್ರಾಪಂ ನೌಕರರ ಒತ್ತಾಯ..!

ಮುಂಡಗೋಡ: ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಲಮಾಣಿಯವರ ಮೇಲೆ ದೈಹಿಕ ಹಲ್ಲೆ ನಡೆಸಿದವರ ಮೇಲೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾಯತಿ ಪಿಡಿಓಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮನವಿ ಅರ್ಪಿಸಿದ್ರು. ನಂದಿಕಟ್ಟಾ ಗ್ರಾಮ ಪಂಚಾಯತ ಪಿಡಿಓ ವೆಂಕಪ್ಪ ಕೆ.ಲಮಾಣಿ ರವರ ಮೇಲೆ ದೈಹಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗೌಸುಸಾಬ ಮೌಲಾಲಿ ಯಳ್ಳುರ ಎಂಬುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅಪರಾಧಿಗೆ ತಕ್ಕೆ ಶಿಕ್ಷೆಯಾಗಬೇಕು...

Post
ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ಏಕಾಏಕಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದು ನರಳಾಡಿದ್ಲು ಯುವತಿ, ಭಯಬಿಟ್ಟು ಕಾಪಾಡಿದ್ರು ಮುಂಡಗೋಡಿಗರು..!

ನಿಜಕ್ಕೂ ಮುಂಡಗೋಡಿನ ಮಣ್ಣ ಕಣಕಣದಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇವತ್ತಿನ ಈ ಘಟನೆಯೇ ಸಾಕ್ಷಿ. ಯುವತಿಯೊಬ್ಳು ರಸ್ತೆಯ ಮದ್ಯದಲ್ಲೇ ಪ್ರಜ್ಞಾಹೀನವಾಗಿ ಬಿದ್ದಾಗ ಸಾರ್ವಜನಿಕರೇ ಆ ಯುವತಿಯನ್ನ ಆಸ್ಪತ್ರೆಗೆ ಸೇರಿಸಿರೋ ಘಟನೆ ನಡೆದಿದೆ‌. ಏನಾಯ್ತು..? ಮುಂಡಗೋಡ ಪಟ್ಟಣದ ಶಿವಾಜಿ ಸರ್ಕಲ್ ಸಮೀಪ ಬಂಕಾಪುರ ರಸ್ತೆಯಲ್ಲಿ ಇಂದು ಮದ್ಯಾಹ್ನ ಓರ್ವ ಯುವತಿ ಏಕಾಏಕಿ ಪ್ರಜ್ಞೆ ತಪ್ಪಿ ರಸ್ತೆಯಲ್ಲೆ ಬಿದ್ದಿದ್ದಾಳೆ. ಆ ಹೊತ್ತಲ್ಲಿ ಆಕೆಯ ಜೊತೆಗಿದ್ದ ಓರ್ವ ಅಜ್ಜಿ ಆತಂಕದಲ್ಲಿ ಚೀರಾಟ ಶುರುವಿಟ್ಟಿದ್ದಾಳೆ. ಆ ಕ್ಷಣ ನಿಜಕ್ಕೂ ಈ ಘಟನೆ ಯಾರಿಗೂ...

Post
ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇದು ಲೊಯೊಲಾ ಕೇಂದ್ರೀಯ ವಿದ್ಯಾಲಯದ ಬೇಜವಾಬ್ದಾರಿ..! ಅಷ್ಟಕ್ಕೂ ಇವ್ರಿಗೆ ಸರ್ಕಾರದ ನಿಯಮ ಅನ್ವಯಿಸೋದೇ ಇಲ್ವಾ..?

ಇಡೀ ರಾಜ್ಯ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿದೆ. ಅದ್ರಲ್ಲೂ ಈ ಮೂರನೇ ಅಲೆ ಅನ್ನೋದು ಬಹುತೇಕ ಮಕ್ಕಳಿಗೆ ತುಂಬಾ ಎಫೆಕ್ಟ್ ಆಗತ್ತೆ ಅನ್ನೋ ಮಾತುಗಳನ್ನು ತಜ್ಞರು ಎಚ್ಚರಿಸಿದ್ದಾರೆ. ಈ ಕಾರಣಕ್ಕಾಗೇ ಸರ್ಕಾರ ಮಕ್ಕಳ ಆರೋಗ್ಯದ ಸಲುವಾಗಿ ಇನ್ನಿಲ್ಲದ ಕಟ್ಟೇಚ್ಚರ ವಹಿಸಿದೆ. ಸಾಂಕ್ರಾಮಿಕ ಜ್ವರದ ಬಾಧೆ..! ಅಂದಹಾಗೆ, ಸದ್ಯ ಇಡೀ ರಾಜ್ಯಾದ್ಯಂತ ಪುಟ್ಟ ಪುಟ್ಟ ಮಕ್ಕಳಿಗೆ ಸಾಂಕ್ರಾಮಿಕ ಜ್ವರದ ಬಾಧೆ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಸೇರಿ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿವೆ. ಮುಂಡಗೋಡ...

Post
ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಮನೆಯ ಛಾವಣಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ, ಹೇಗೆ ರಕ್ಷಣೆ ಮಾಡಿದ್ರು ನೋಡಿ..!

ಶಿರಸಿ: ಮನೆಯ ಛಾವಣಿಯಲ್ಲಿ ಅಡಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿ ತಾಲೂಕಿನ ಸುರನಗದ್ದೆಯ ಮನೆಯ ಛಾವಣಿಯಲ್ಲಿ ಅಡಗಿದ್ದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು. ಉರಗ ತಜ್ಞ ಪ್ರಶಾಂತ ಹುಲೇಕಲ್, ಮನೆಯ ಛಾವಣಿಯಲ್ಲಿ ಹೆಂಚಿನಡಿ ಸೇರಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಸಾಹಸ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಹಿಡಿದರು. ನಂತರ ಶಿವಗಂಗಾ ಫಾಲ್ಸ ಬಳಿಯ ನಿರ್ಜನ...

Post
ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡ: ಪಟ್ಟಣದಲ್ಲಿ ಸೆಪ್ಟೆಂಬರ್ 3 ರ ರಾತ್ರಿ ನಡೆದಿದ್ದ , ಪೋಟೊ ಸ್ಟುಡಿಯೋ ಹಾಗೂ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಾಳಬಾವಿಕೇರಿಯ ಇಮಾಮಸಾಬ ದಾವಲಸಾಬ ಅಲ್ಲಿಬಾಯಿ (21) ಎಂಬುವವನೇ ಕಳ್ಳತನದ ಆರೋಪಿಯಾಗಿದ್ದಾನೆ. ಬಂಧಿತ ಅಂತರ್ ಜಿಲ್ಲಾ ಕಳ್ಳನಿಂದ ಪೇನಾಸಾನಿಕ್ ಎ.ಜಿ.ಎಸ್.ಸಿ-90 ವಿಡಿಯೋ ಕ್ಯಾಮರಾ, ನಿಕಾನ್ ಡಿ- 3500 ಡಿ.ಎಸ್.ಎಲ್.ಆರ್ ಫೋಟೋ ಕ್ಯಾಮರಾ, 20 ಮೊಬೈಲ್ ಗಳು ಹಾಗೂ ಮೊಬೈಲ್ ನ ಬಿಡಿ ಭಾಗಗಳು ಸೇರಿ, ಸುಮಾರು...

Post
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಮುಂಡಗೋಡ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕರ್ತರು, 2ಎ ಮೀಸಲಾತಿಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು, ಆ ವೇಳೆ, ಸಿಎಂ ಆಗಿದ್ದ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಲು ಆರು ತಿಂಗಳು ಸಮಯ ಕೇಳಿದ್ದರು, ಆದ್ರೆ ಈಗ ಯಡಿಯೂರಪ್ಪರ ಸಮಯದ ಅವಧಿ ಮುಗಿದಿದೆ. ಈಗ ನೂತನವಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ‌. ಹೀಗಾಗಿ, ಕೂಡಲೇ...

Post
ಸಿನಿಮೀಯ ರೀತಿಯಲ್ಲಿ ಕಳ್ಳನ ಕೈಚಳಕ, ಜ್ಯುವೇಲ್ಲರಿ ಮಾಲೀಕನಿಂದ ಚಿನ್ನದ ಸರ ಕಸಿದು ಪರಾರಿ..!

ಸಿನಿಮೀಯ ರೀತಿಯಲ್ಲಿ ಕಳ್ಳನ ಕೈಚಳಕ, ಜ್ಯುವೇಲ್ಲರಿ ಮಾಲೀಕನಿಂದ ಚಿನ್ನದ ಸರ ಕಸಿದು ಪರಾರಿ..!

ಶಿರಸಿ: ಸಿನಿಮೀಯ ರೀತಿಯಲ್ಲಿ ಚಿನ್ನದ ಸರ ಅಪಹರಣ ಮಾಡಿದ ಘಟನೆ, ಶಿರಸಿಯ ರತ್ನದೀಪ ಜ್ಯುವೆಲರ್ಸ್ ನಲ್ಲಿ ನಡೆದಿದೆ. ಚಿನ್ನದ ಸರ ಖರೀದಿಯ ನೆಪದಲ್ಲಿ ಅಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದಿದ್ದ ವ್ಯಕ್ತಿ, ಚಿನ್ನದ ಸರ ತೋರಿಸುವಂತೆ ಕೇಳಿದ್ದಾನೆ. ಅಂಗಡಿಯಾತ ಚಿನ್ನದ ಸರ ತೋರಿಸುತ್ತಿದ್ದಾಗಲೇ ಸರ ಕಸಿದುಕೊಂಡ ಕಳ್ಳ ಕಾಲ್ಕಿತ್ತಿದ್ದಾನೆ. ಚಿನ್ನದ ಸರದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಕಳ್ಳನ ಸಂಪೂರ್ಣ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಶಿರಸಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಚಾಲಾಕಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

Post
ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!

ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!

ಮುಂಡಗೋಡ: ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಉತ್ಸವ ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳ ವಿಶ್ವಕರ್ಮ ಸಮಾಜದ ಮುಖಂಡರು ಸರಳವಾಗಿ ಆಚರಿಸಿದ್ರು. ಈ ವೇಳೆ ವಿಶ್ವಕರ್ಮ ಸಮಾಜದ ಆರ್.ವಿ. ಬಡಿಗೇರ್, ಮೌನೇಶ್ ಬಡಿಗೇರ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸೇರಿ ವಿಶ್ವಕರ್ಮ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.

Post
ಯಲ್ಲಾಪುರದ ತುಡುಗುಣಿ ಕಾಡು ಮನೆಯಲ್ಲಿ ಮಹಿಳೆಯ ಭೀಕರ ಹತ್ಯೆ..! ಅಷ್ಟಕ್ಕೂ ಹಂತಕನ ನೆರಳು ಅದೇನಾ..?

ಯಲ್ಲಾಪುರದ ತುಡುಗುಣಿ ಕಾಡು ಮನೆಯಲ್ಲಿ ಮಹಿಳೆಯ ಭೀಕರ ಹತ್ಯೆ..! ಅಷ್ಟಕ್ಕೂ ಹಂತಕನ ನೆರಳು ಅದೇನಾ..?

ಯಲ್ಲಾಪುರ ತಾಲೂಕಿನಲ್ಲಿ ನಿನ್ನೆ ರಾತ್ರಿ ಭೀಕರ ಹತ್ಯೆಯಾಗಿದೆ. ಮಹಿಳೆಯೋರ್ವಳನ್ನ ಆಗಂತುಕರು ಭೀಕರವಾಗಿ ಹತ್ಯೆ ಮಾಡಿ ಹೋಗಿದ್ದಾರೆ. ಯಲ್ಲಾಪುರ-ಶಿರಸಿ ಗಡಿಭಾಗದ ತುಡುಗುಣಿಯಲ್ಲಿ ಇಂತಹದ್ದೊಂದು ಹತ್ಯೆ ನಡೆದಿದ್ದು, ಇಡೀ ಯಲ್ಲಾಪುರ ತಾಲೂಕೇ ಬೆಚ್ಚಿ ಬೀಳುವಂತೆ ಮಾಡಿದೆ. ಅಂದಹಾಗೆ, ಇಲ್ಲಿ ಹೀಗೆ ಭೀಕರ ಹತ್ಯೆಯಾಗಿ ಬಿದ್ದವಳ ಹೆಸರು, ಸರೋಜಾ ನಾಯರ್, ವಯಸ್ಸು ಈಗಿನ್ನು 35 ರ ಆಸು ಪಾಸು. ತುಡುಗುಣಿಯ ಕಾಡಿನಲ್ಲಿರೋ ಮನೆಯಲ್ಲಿ ವಾಸವಿದ್ದ ಈಕೆಯನ್ನ ನಿನ್ನೆ ರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಯಲ್ಲಾಪುರ ಪೊಲೀಸರು ಸ್ಥಳಕ್ಕೆ...

Post
ಕಟ್ಟಿಗೆ ತುಂಬಿದ್ದ ಲಾರಿ ಪಲ್ಟಿ, ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ..!

ಕಟ್ಟಿಗೆ ತುಂಬಿದ್ದ ಲಾರಿ ಪಲ್ಟಿ, ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಸಂಚಾರ ಅಸ್ತವ್ಯಸ್ತ..!

ಯಲ್ಲಾಪುರ: ಕಟ್ಟಿಗೆ ತುಂಬಿದ್ದ ಲಾರಿ ಹೆದ್ದಾರಿಯಲ್ಲೇ ಪಲ್ಟಿಯಾಗಿ, ವಾಹನ ದಟ್ಟಣೆ ಹೆಚ್ಚಿದ ಪರಿಣಾಮ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾದ ಘಟನೆ, ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ನಡೆದಿದೆ. ಅಂಕೋಲಾದಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಲಾರಿ, ಘಟ್ಟದಲ್ಲಿ ತೆರಳುತ್ತಿದ್ದ ವೇಳೆ ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹಾಗೆ ಪಲ್ಟಿಯಾದ ಲಾರಿ ಎದುರಲ್ಲೇ ಮತ್ತೊಂದು ಲಾರಿ, ಕೆಟ್ಟು ನಿಂತಿದೆ‌. ಪರಿಣಾಮ, ಅರಬೈಲ್ ಘಟ್ಟದಲ್ಲಿ ಸರಕು ಸಾಗಣೆ ಲಾರಿಗಳು ಸಾಲುಗಟ್ಟಿ ನಿಂತಿವೆ. ಮಳೆಯ ಅಬ್ಬರದಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಅಂಕೋಲಾ ಯಲ್ಲಾಪುರ...

error: Content is protected !!