Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಮುಂಡಗೋಡ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಗೋಳು ಕೇಳೋರೇ ಇಲ್ವಾ..? ಪ್ರತಿನಿತ್ಯವೂ ಶಾಲಾ ಕಾಲೇಜಿಗೆ ಹೋಗಲು ಬಸ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿನೇ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶದ ಕಟ್ಟೆ ಒಡೆದಿದೆ. ಇಂದೂರಿನಲ್ಲಿ ಪ್ರತಿಭಟನೆ..!                                      ಈ ಕಾರಣಕ್ಕಾಗೇ, ಇಂದೂರಿನಲ್ಲಿ ಇಂದು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ್ರು. ಇಂದೂರು...

Post
ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ವಿಜೇತ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ವಿಜೇತ ಹೋರಿಗಳಿಗೆ ಬಹುಮಾನ ನೀಡಿದ್ರು.. ಅತ್ಯುತ್ತಮ ಹಿಡಿತಗಾರರಿಗೂ ಬಹುಮಾನ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಹಬ್ಬದ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಗೃಹೋಪಯೋಗಿ ವಸ್ತುಗಳ ಆಕರ್ಶಕ ಬಹುಮಾನ ನೀಡಲಾಯಿತು.. ಈ ವೇಳೆ ಅಣ್ಣಪ್ಪ ಸಾವಿಕೇರಿ, ಲಕ್ಷ್ಮಣ ಗಡಕನಳ್ಳಿ, ಮಂಜು ಭೋವಿ, ಜಮೀರ್ ಶೇಖ್, ಮುಖೇಶ್ ತಳವಾರ್, ಗಣೇಶ್ ಕೋಡಿಹಳ್ಳಿ, ಪ್ರಶಾಂತ್ ದೋರಳ್ಳಿ, ಕೃಷ್ಣ...

Post
ಚಿಗಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 14 ಜನರ ಮೇಲೆ ಕೇಸ್..!

ಚಿಗಳ್ಳಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ 14 ಜನರ ಮೇಲೆ ಕೇಸ್..!

ಮುಂಡಗೋಡ: ತಾಲೂಕಿನ ಚಿಗಳ್ಳಿ ಗ್ರಾಮದ ಶ್ರೀ ಕಲ್ಮೇಶ್ವರ ಮಠದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ, 14 ಜನರ ಮೇಲೆ ಕೇಸು ದಾಖಲಿಸಿದ ಘಟನೆ ನಡೆದಿದೆ. ಇನ್ನು ದಾಳಿ ವೇಳೆ ಅಂದರ್ ಬಾಹರ್ ಆಟದಲ್ಲಿ ಬಳಸಿದ್ದ ನಗದು 3,500 ರೂಪಾಯಿ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 4 ಜನ ಆರೋಪಿಗಳು ದಾಳಿಯ ಕಾಲಕ್ಕೆ ಸೆರೆ ಸಿಕ್ಕಿದ್ದು ಇನ್ನುಳಿದವರು ಪರಾರಿಯಾಗಿದ್ದಾರೆ. ಮುಂಡಗೋಡ ಸಿಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ...

Post
ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಚಿಗಳ್ಳಿ ಶಾಲೆಯಲ್ಲಿ ನಟ ಪುನೀತ್ ಪುಣ್ಯಸ್ಮರಣೆ..! ವಿದ್ಯಾರ್ಥಿಗಳಿಂದ “ಅಪ್ಪು”ವಿಗೆ ನಮನ..!!

ಮುಂಡಗೋಡ; ತಾಲೂಕಿನ ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟ ಪುನೀತ್ ರಾಜಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಪುನೀತ್ ಅಭಿಮಾನಿಗಳು ಶಾಲಾ ಮಕ್ಕಳಿಗೆ ಪುನೀತ್ ನೆನಪಿಗಾಗಿ ಕಲಿಕಾ ಸಾಮಗ್ರಿಯ ಕಾಣಿಕೆ ನೀಡಿದ್ರು..ಈ ವೇಳೆ ಸಂತೋಷ ಆಲದಕಟ್ಟಿ, ಎಂ.ಪಿ.ಕುಸೂರ, ರಾಜಶೇಖರ ಹಿರೇಮಠ, ಉದಯ ಕುಸೂರ, ಪರಶುರಾಮ ಟಿಕ್ಕೋಜಿ, ಪರಶುರಾಮ ತೆಗ್ಗಳ್ಳಿ, ಮಹಾಬಲೇಶ್ವರ ಬನವಾಸಿ, ಸಿ.ಬಿ. ಅರಳಿಕಟ್ಟಿ, ಹುಸೇನಸಾಬ್ ಕೊಳಗಿ, ಉದಯ ಕುಸೂರ, ಮೋಹನ ಗುಲ್ಮಾನವರ, ಮುಖ್ಯಾಧ್ಯಾಪಕಿ ನಾಗರತ್ನಮ್ಮ, ಶಿಕ್ಷಕರಾದ ಬಸವರಾಜ ಬೆಂಡಲಗಟ್ಟಿ,...

Post
ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ..!

ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ..!

ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದನಕೊಪ್ಪದಲ್ಲಿ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಚಾಲನೆ ಪಡೆದಿದೆ‌. ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಇಲ್ಲಿನ ಗ್ರಾಮ ಪಂಚಾಯತಿ ಅದ್ಯಕ್ಷೆ ರೇಣುಕಾ ಮಾಯಣ್ಣವರ್ ಉದ್ಘಾಟಿಸಿದ್ರು. ಈ ವೇಳೆ ಸಂತೋಷ ಶೇಟ್ ರಾಯ್ಕರ್, ಆಶಾ ರಾಯ್ಕರ್, ಪಕ್ಕೀರಪ್ಪ, ಶಿವಾಜಿ ಸಿಂಧೆ, ಪ್ರಕಾಶ ಅಜ್ಜಮನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Post
ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ..!

ಮುಂಡಗೋಡ; ತಾಲೂಕಿನ ಹಿರೇಹಳ್ಳಿಯಲ್ಲಿ ಭಾರೀ ಹೋರಿ ಬೆದರಿಸೋ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುತ್ತ ಮುತ್ತಲ ತಾಲೂಕು ಜಿಲ್ಲೆಗಳಿಂದ ಬಂದಿದ್ದ ಸ್ಪರ್ಧಾ ಹೋರಿಗಳು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾದವು. ಜಿಲ್ಲೆ ಹೊರಜಿಲ್ಲೆಗಳಿಂದ ಬಂದಿದ್ದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಗಳ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ತಮ್ಮ ನೆಚ್ಚಿನ ಹೋರಿಗಳು ಕಣದಲ್ಲಿ ಇಳಿಯುತ್ತಲೇ ಕೇಕೆ ಹಾಕಿ ಸಂಭ್ರಮಿಸಿದ್ರು. ಇನ್ನು ಹಾಗೆ ಕಣದಲ್ಲಿ ಬಿಟ್ಟ ಹೋರಿಗಳನ್ನು ಹಿಡಿಯಲು ಯುವಕರ ದಂಡೇ ಅಲ್ಲಿ ನೆರೆದಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೋರಿಗಳಿಗೆ ಬಹುಮಾನ ನೀಡಲಾಯಿತು.

Post
ನಂದಿಕಟ್ಟಾ ಗ್ರಾಮದಲ್ಲೊಂದು ಕರುಳು ಹಿಂಡುವ ಘಟನೆ..! ನೀರಿನ ಟ್ಯಾಂಕಿಗೆ ಬಿದ್ದು 2 ವರ್ಷದ ಕಂದಮ್ಮ ಬಲಿ..!

ನಂದಿಕಟ್ಟಾ ಗ್ರಾಮದಲ್ಲೊಂದು ಕರುಳು ಹಿಂಡುವ ಘಟನೆ..! ನೀರಿನ ಟ್ಯಾಂಕಿಗೆ ಬಿದ್ದು 2 ವರ್ಷದ ಕಂದಮ್ಮ ಬಲಿ..!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಎರಡು ವರ್ಷದ ಕಂದಮ್ಮ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಸಾವನ್ನಪ್ಪಿದೆ. ನಂದಿಕಟ್ಟಾ ಗ್ರಾಮದ ಶಾಂತಾರಾಮ ಕಮ್ಮಾರ ಅವರ ಎರಡು ವರ್ಷದ ಗಂಡು ಮಗು ದುರಂತಕ್ಕೀಡಾಗಿದೆ. ಘಟನೆ ಹೇಗಾಯ್ತು..? ಇಂದು ದೀಪಾವಳಿ ಅಮವಾಸ್ಯೆ ನಿಮಿತ್ತ ಶಾಂತಾರಾಮ ಕಮ್ಮಾರ್ ತನ್ನ ಮುದ್ದು ಕಂದನಿಗೆ ತಿಂಡಿ, ತಿನಿಸು ಕೊಡಿಸಲು ಕಿರಾಣಿ ಅಂಗಡಿಗಳಿಗೆ ಅಲೆದಾಡಿದ್ದಾರೆ. ಬೆಳಗ್ಗಿನಿಂದಲೂ ಮಗ ಅದೇನು ಕೇಳ್ತಾನೋ ಅದನ್ನೇಲ್ಲ ತಿನಿಸುಗಳನ್ನು ಕೊಡಿಸಿ ಖುಶಿ ಪಟ್ಟಿದ್ದಾರೆ‌‌. ಸಂಜೆ ಅಮವಾಸ್ಯೆಯ ಪೂಜೆಯನ್ನೂ...

Post
ಶಿರಸಿಯಲ್ಲಿ ಒಂಟಿ‌ ಮಹಿಳೆಯ ಚಿನ್ನದ ಸರ ದೋಚಿಕೊಂಡು ಪರಾರಿಯಾದ ಕಳ್ಳರು..!

ಶಿರಸಿಯಲ್ಲಿ ಒಂಟಿ‌ ಮಹಿಳೆಯ ಚಿನ್ನದ ಸರ ದೋಚಿಕೊಂಡು ಪರಾರಿಯಾದ ಕಳ್ಳರು..!

ಶಿರಸಿ: ನಗರದ ಭತ್ತದ‌ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಚಿನ್ನ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಉಷಾ ದಾಮೋದರ ಪೈ ಎಂಬುವ ಮಹಿಳೆಯೇ ಚಿನ್ನ ಕಳೆದುಕೊಂಡವರು. ಬಿಳಿ ಕಾರಿನಲ್ಲಿ ಬಂದ ದರೋಡೆಕೋರರು, ಕುಮಟಾಕ್ಕೆ ಹೋಗುವ ಮಾರ್ಗ ಕೇಳಿ ಮಹಿಳೆಯ ಕುತ್ತಿಗೆಯಲ್ಲಿನ ಸರ ಹರಿದು ಪರಾರಿಯಾಗಿದ್ದಾರೆ. ಸುಮಾರು 1,10,000 ರೂಪಾಯಿ ಮೌಲ್ಯದ ಚಿನ್ನದ ಸರ ದೋಚಿದ್ದಾರೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ***************************************

Post
ಕಾರವಾರದಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಹೆಬ್ಬಾರ್..!

ಕಾರವಾರದಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ಉಸ್ತುವಾರಿ ಸಚಿವ ಹೆಬ್ಬಾರ್..!

ಕಾರವಾರ: 66 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಧ್ವಜಾರೋಹಣ ನೆರವೇರಿಸಿದ್ರು‌. ತೆರೆದ ವಾಹನದಲ್ಲಿ ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವ ಹೆಬ್ಬಾರ್, ಸಮಾರಂಭದಲ್ಲಿ ಭಾಷಣ ಮಾಡಿದ್ರು. ಈ ವೇಳೆ ಶಾಸಕಿ ರೂಪಾಲಿ ನಾಯ್ಕ್ , ಜಿಲ್ಲಾಧಿಕಾರಿ ಮುಲೈ ಮುಹಿಲಿನ್, ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಸೇರಿ ಹಲವರು ಉಪಸ್ಥಿತರಿದ್ದರು‌. ಇನ್ನು, ಇಂದಿನ 66 ನೇ ರಾಜ್ಯೋತ್ಸವದ ಸಂಭ್ರಮ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ...

Post
ನಂದಿಗಟ್ಡಾ ಗ್ರಾಮದಲ್ಲೂ ನಟ ಪುನೀತ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!

ನಂದಿಗಟ್ಡಾ ಗ್ರಾಮದಲ್ಲೂ ನಟ ಪುನೀತ ರಾಜಕುಮಾರ್ ಗೆ ಅಭಿಮಾನಿಗಳ ಶೃದ್ದಾಂಜಲಿ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶೃದ್ದಾಂಜಲಿ ಅರ್ಪಿಸಿದ್ರು. ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ರು. ನಟ ಪುನಿತ್ ಅಕಾಲಿಕ‌ಮರಣ ರಾಜ್ಯಕ್ಕೆ ತುಂಬಲಾರದ ನಷ್ಟ ಅಂತಾ ಶೋಕ ವ್ಯಕ್ತಪಡಿಸಿರೋ ಅಭಿಮಾನಿಗಳು ಅಪ್ಪು ಮತ್ತೊಮ್ಮೆ ಗುಟ್ಟಿ ಬಾ ಅಂತಾ ಘೋಷಣೆ ಕೂಗಿದ್ರು.

error: Content is protected !!