ಮುಂಡಗೋಡ; ತಾಲೂಕಿನ ಚಿಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟ ಪುನೀತ್ ರಾಜಕುಮಾರ್ ರವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಪುನೀತ್ ಅಭಿಮಾನಿಗಳು ಶಾಲಾ ಮಕ್ಕಳಿಗೆ ಪುನೀತ್ ನೆನಪಿಗಾಗಿ ಕಲಿಕಾ ಸಾಮಗ್ರಿಯ ಕಾಣಿಕೆ ನೀಡಿದ್ರು..ಈ ವೇಳೆ ಸಂತೋಷ ಆಲದಕಟ್ಟಿ, ಎಂ.ಪಿ.ಕುಸೂರ, ರಾಜಶೇಖರ ಹಿರೇಮಠ, ಉದಯ ಕುಸೂರ, ಪರಶುರಾಮ ಟಿಕ್ಕೋಜಿ, ಪರಶುರಾಮ ತೆಗ್ಗಳ್ಳಿ, ಮಹಾಬಲೇಶ್ವರ ಬನವಾಸಿ, ಸಿ.ಬಿ. ಅರಳಿಕಟ್ಟಿ, ಹುಸೇನಸಾಬ್ ಕೊಳಗಿ, ಉದಯ ಕುಸೂರ, ಮೋಹನ ಗುಲ್ಮಾನವರ, ಮುಖ್ಯಾಧ್ಯಾಪಕಿ ನಾಗರತ್ನಮ್ಮ, ಶಿಕ್ಷಕರಾದ ಬಸವರಾಜ ಬೆಂಡಲಗಟ್ಟಿ, ಗೋವಿಂದರಾಜ ಜೋಶಿ, ಸುಜಾತಾ ನಾಯ್ಕ, ಪ್ರತಿಮಾ ಶೆಟ್ಟಿ, ಸರೋಜಾ ಗೌಡ, ಮಂಗಳಾ ನಾಯ್ಕ ಹಾಜರಿದ್ದರು.